• Home
  • »
  • News
  • »
  • state
  • »
  • SC ST Reservation: ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ; ಸರ್ಕಾರದ ಮುಂದಿರುವ ಸವಾಲುಗಳು ಏನು?

SC ST Reservation: ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ; ಸರ್ಕಾರದ ಮುಂದಿರುವ ಸವಾಲುಗಳು ಏನು?

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಎಸ್​ಸಿ ಸಮುದಾಯದ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಳವಾಗಲಿದ್ದು, ಎಸ್​​ಟಿ ಸಮುದಾಯದ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಳವಾಗಲಿದೆ.

  • Share this:

ರಾಜ್ಯದಲ್ಲಿ SC, ST ಸಮುದಾಯಕ್ಕೆ (SC ST Community) ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ದೀಪಾವಳಿಗೆ ಗಿಫ್ಟ್ (Deepavali Gift)‌ ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ (SC ST Reservation) ಹೆಚ್ಚಳ ಕುರಿತು ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅಂಕಿತ ಹಾಕಿದ್ದಾರೆ. ಈ ಮೂಲಕ ಎರಡು ಸಮುದಾಯದ ಬಹುವರ್ಷಗಳ ಬೇಡಿಕೆ ಈಡೇರಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂತಿಮ ಮುದ್ರೆ ಬಿದ್ದಿದ್ದು, ಇಂದಿನಿಂದಲೇ  SC, ST ಸಮುದಾಯದ ಮೀಸಲಾತಿ ಹೆಚ್ಚಳವಾಗಲಿದೆ. ಮೀಸಲಾತಿ ಹೆಚ್ಚಳ ಸಂಬಂಧ ಗೆಜೆಟ್ ನೋಟಿಫಿಕೇಶನ್ ಪ್ರಕಟವಾಗಿದೆ. ಇದರೊಂದಿಗೆ ಎಸ್​ಸಿ ಸಮುದಾಯದ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಳವಾಗಲಿದ್ದು, ಎಸ್​​ಟಿ ಸಮುದಾಯದ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಳವಾಗಲಿದೆ.


ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್​​, ಎಸ್​​ಟಿಗೆ ಹೆಚ್ಚುವರಿ ಮೀಸಲಾತಿ ದೊರೆಯಲಿದೆ. ಇನ್ನು ಸಿಎಂ ಬೊಮ್ಮಾಯಿ, ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.


ಸರ್ಕಾರದ ಮುಂದಿರುವ ಸವಾಲೇನು?


ಕಾಯ್ದೆ ಬಳಿಕವೂ ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ರಾಜ್ಯದ ಒಟ್ಟು ಮೀಸಲಾತಿ ಶೇ.56ಕ್ಕೆ ತಲುಪಲಿದೆ.ಕಾನೂನಿಗೆ ತೊಡಕಾಗದಂತೆ ಸಂವಿಧಾನಾತ್ಮಕ ವಿಚಾರಗಳ ಸೇರ್ಪಡೆ ಮಾಡಬೇಕು. ಕೋರ್ಟ್​ನಲ್ಲಿ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಪ್ರಶ್ನಿಸುವ ಸಾಧ್ಯತೆಗಳಿವೆ.


ಸವಾಲು ಎದುರಿಸೋ ದಾರಿ ಹೇಗಿದೆ?


ಮೀಸಲಾತಿ ಹೆಚ್ಚಳದ ಅನಿವಾರ್ಯತೆ ಬಗ್ಗೆ ಸಂವಿಧಾನದ ವಿಧಿಗಳ ಉಲ್ಲೇಖವಿದೆ. SC ಮತ್ತು ST ಸಮುದಾಯಗಳ ಜನಸಂಖ್ಯೆ ಹೆಚ್ಚಳವಾಗಿರುವ ಕಾರಣಕ್ಕೆ ಮೀಸಲಾತಿ ಏರಿಕೆ ಮಾಡಲಾಗಿದೆ ಎಂಬ ಕಾರಣ ನೀಡಬಹುದು.


ಪ್ರಮುಖವಾಗಿ ಪರಿಚ್ಛೇದ 38, 39 ಮತ್ತು 46ರ ಅಂಶಗಳು ಇರಲಿವೆ. ವಿಧಿ 38ರಡಿ ಸಾಮಾಜಿಕ, ಆರ್ಥಿಕ ನ್ಯಾಯ ನೀಡುವ ಅಧಿಕಾರ ಸರ್ಕಾರಕ್ಕಿದೆ. ವಿಧಿ 39ರಡಿ ಭೌತಿಕ, ಆರ್ಥಿಕ ಸಂಪನ್ಮೂಲ ರಕ್ಷಿಸುವ ಹೊಣೆ ಸರ್ಕಾರಕ್ಕಿದೆ. ವಿಧಿ 46ರಡಿ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆ ಹೊಂದಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ನೀಡಿದ ಶೇ.10 ಸೇರ್ಪಡೆ ಮಾಡಬಹುದು.


ಇದನ್ನೂ ಓದಿ:  V Somanna: ಬೇಟಿ ಬಚಾವೋ ಘೋಷಣೆ ಗೌರವಿಸೋದಾದ್ರೆ ಸೋಮಣ್ಣರನ್ನು ವಜಾಗೊಳಿಸಿ: ಕಾಂಗ್ರೆಸ್

 ಪಂಚಮಸಾಲಿ ಮೀಸಲಾತಿ ಹೋರಾಟ


ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ 4 ಬಾರಿ ಕೊಟ್ಟ ಮಾತಿಗೆ ತಪ್ಪಿದೆ. ಸರ್ಕಾರ ವಿನಾಕಾರಣ ಕಾಲಹರಣ ಮಾಡ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. ಪಂಚಮಸಾಲಿಗಳು ಶೇಕಡಾ 80ರಷ್ಟು ಇದ್ದೇವೆ. ಮೀಸಲಾತಿ ಕೊಡದಿದ್ರೆ ಬಿಜೆಪಿ ಮೇಲೆ ರಾಜಕೀಯವಾಗಿ ಬಹಳ ಪರಿಣಾಮ ಬೀರುತ್ತೆ ಎಂದು ಎಚ್ಚರಿಕೆ ಕೊಟ್ಟರು.

ಶಿಕ್ಷಣ ಇಲಾಖೆ ಆದೇಶಕ್ಕೆ ವ್ಯಾಪಕ ವಿರೋಧ


ಶಾಲಾ ಅಭಿವೃದ್ಧಿಗಾಗಿ (School Development) ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಶಾಲಾ ಮಕ್ಕಳ (Children) ಪೋಷಕರ ಬಳಿ 100 ರೂಪಾಯಿ ಸಂಗ್ರಹ ಮಾಡೋದು ನಾಚಿಕೆ ವಿಚಾರ ಎಂದು ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ರು. ಜೊತೆಗೆ ಪೋಷಕರು ಹಾಗೂ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ದೇಣಿಗೆ ಸಂಗ್ರಹ ಆದೇಶ (Order) ವಾಪಸ್ಸು ಪಡೆಯಲು ಸೂಚಿಸಿದೆ.


ಇದನ್ನೂ ಓದಿ: Private Bus: ಹಬ್ಬದ ನೆಪದಲ್ಲಿ ಪ್ರಯಾಣಿಕರಿಂದ ಹಣ ವಸೂಲಿಗಿಳಿದ್ರೆ ಲೈಸನ್ಸ್ ರದ್ದು; ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ

 ದೇಣಿಗೆ ಸಂಗ್ರಹದ ಆದೇಶ ವಾಪಸ್​ ಪಡೆಯಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ದಾರೆ. ಶಾಲೆಗಳ ಅಭಿವೃದ್ಧಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಆದೇಶ​ ಹೊರಡಿಸಿತ್ತು.

Published by:Mahmadrafik K
First published: