Ram Navami: ಕರ್ನಾಟಕದಲ್ಲಿ ರಾಮರಾಜ್ಯ ನಿರ್ಮಾಣ ನಮ್ಮ ಗುರಿ: ಸಚಿವ ಆರ್ ಅಶೋಕ್

ನಮ್ಮ ರಾಮ ರಥಯಾತ್ರೆಯಲ್ಲಿ ಯಾರಿಗೂ ನಿರ್ಬಂಧ ಹಾಕಿಲ್ಲ. ಎಲ್ಲ ಧರ್ಮದವರಿಗೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲರನ್ನು ಕರೆದುಕೊಂಡು ರಾಮ ರಾಜ್ಯ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ ಅಶೋಕ್ (ಸಂಗ್ರಹ ಚಿತ್ರ)

ಆರ್ ಅಶೋಕ್ (ಸಂಗ್ರಹ ಚಿತ್ರ)

 • Share this:
  ಕರ್ನಾಟಕದಲ್ಲಿ ರಾಮರಾಜ್ಯ (Rama Rajya) ಆಗಬೇಕಿದೆ. ಅಯೋಧ್ಯೆಯಲ್ಲಿ ಮಸೀದಿಯನ್ನು ತೆಗೆದುಹಾಕಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ರಾಮ ರಾಜ್ಯ ನಿರ್ಮಾಣ ಮಾಡಬೇಕಿದೆ ಎಂದು ಕಂದಾಯ ಸಚಿವ (R Ashok)  ಆರ್. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಪದ್ಮನಾಭನಗರದಲ್ಲಿ ರಾಮ ರಥಯಾತ್ರೆಗೆ (Rama Rath Yatra)ಚಾಲನೆ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಕೆಲವು ಮುಸ್ಲಿಮರೂ (Muslim Community) ರಾಮ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ನಮ್ಮ ರಾಮ ರಥಯಾತ್ರೆಯಲ್ಲಿ ಯಾರಿಗೂ ನಿರ್ಬಂಧ ಹಾಕಿಲ್ಲ. ಎಲ್ಲ ಧರ್ಮದವರಿಗೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲರನ್ನು ಕರೆದುಕೊಂಡು ರಾಮ ರಾಜ್ಯ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

  ಪದ್ಮನಾಭನಗರದಲ್ಲಿ ರಾಮ ರಥಯಾತ್ರೆಯಲ್ಲಿಈಶ್ವರಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಂ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ ಭಾಗಿಯಾಗಿದ್ದರು.

  ರಾಮನ ಹೆಸರಿನಲ್ಲಿ ಗಲಾಟೆ ಮಾಡಬಾರದು
  ಧಾರವಾಡದಲ್ಲಿ ಮುಸ್ಲಿಮ್ ವ್ಯಾಪಾರಿಯ ಅಂಗಡಿ ಧ್ವಂಸಗೊಳಿಸಿದ್ದ ಪ್ರಕರಣದ ಕುರಿತೂ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್,    ಯಾರೇ ಆದರೂ ರಾಮನ ಹೆಸರಿನಲ್ಲಿ ಗಲಾಟೆ ಮಾಡಬಾರದು. ಎಲ್ಲರೂ ಸೌಹಾರ್ದತೆಯಿಂದ ಇರಬೇಕು. ರಾಮ ಈ ಮಣ್ಣಿನ ಕಣಕಣದಲ್ಲಿ ಇದ್ದಾನೆ. ರಾಮ ಮರ್ಯಾದಾ ಪುರುಷೋತ್ತಮ. ಬೇರೆಯವರನ್ನು ನಾವು ಹಾಗೇ ಕರೆಯಲು ಆಗಲ್ಲ ಎಂದು ಅವರು ತಿಳಿಸಿದ್ದಾರೆ.  ಶ್ರೀರಾಮಚಂದ್ರ ಮಾತ್ರ ಮರ್ಯಾದಾ ಪುರುಷೋತ್ತಮ
  ಬಾಬರ್, ಅಕ್ಬರ್   ಅಥವಾ  ಔರಂಗಜೇಬ್​ನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಆಗಲ್ಲ. ಶ್ರೀರಾಮಚಂದ್ರನನ್ನು ಮಾತ್ರ ಮರ್ಯಾದಾ ಪುರುಷೋತ್ತಮ ಎಂದು ಕರೆಯಬಹುದು ಎಂದು ತಿಳಿಸಿದ್ದಾರೆ.

  ಬೆಂಗಳೂರು ಕರಗಕ್ಕೆ ಮುಸ್ಲಿಮರು ಆಮಂತ್ರಣ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಪಕ್ಷದವರು ಒಂದು ಧರ್ಮವನ್ನು ಓಲೈಕೆ ಮಾಡುತ್ತಾರೆ. ಅದಕ್ಕೆ ಕಾಂಗ್ರೆಸ್'ನವರು ದೊಡ್ಡ ಬೆಲೆಯನ್ನು ತೆರುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್​ನ್ನು ಟೀಕಿಸಿದ್ದಾರೆ.

  Rama Navami: ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ: HDK ಮನವಿ

  ಇಂದು ನಾಡಿನೆಲ್ಲಡೆ ಶ್ರೀರಾಮ ನವಮಿ(Sri Rama Navami)ಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸುವದರ ಜೊತೆಗೆ ಕೆಲವೊಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: Alcohol: ಬೆಂಗಳೂರಿನಲ್ಲಿ 2 ದಿನ ಮದ್ಯ ಮಾರಾಟ ನಿಷೇಧ; ಯಾವ ಏರಿಯಾ ತಿಳಿದುಕೊಳ್ಳಿ

  ಶ್ರೀರಾಮಚಂದ್ರ (Lord Sir ramachandra) ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ; ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು ನಾಡಿನ ಸಮಸ್ತ ಜನತೆಯಲ್ಲಿ ನನ್ನ ವಿನಮ್ರ ಮನವಿ ಇಷ್ಟೆ. ರಾಮನವಮಿ ಹಬ್ಬ(Rama navami Festival)ವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: Sri Rama Navami: ಶೋಭಾಯಾತ್ರೆಯಲ್ಲಿ ಭಾಗಿಯಾದ ಶ್ರೀರಾಮನ ಭಕ್ತರಿಗೆ ಮುಸ್ಲಿಮರಿಂದ ಪಾನೀಯ ವಿತರಣೆ

  ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲ ಇದೆ. ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಬೇಡ.
  Published by:guruganesh bhat
  First published: