• Home
  • »
  • News
  • »
  • state
  • »
  • Karnataka Dams Water Level: ರಾಜ್ಯದಲ್ಲಿ ಮತ್ತೆ ಸುರಿದ ಮಳೆ, ಜಲಾಶಯಗಳ ನೀರಿನ ಮಟ್ಟ ಏರಿಕೆ!

Karnataka Dams Water Level: ರಾಜ್ಯದಲ್ಲಿ ಮತ್ತೆ ಸುರಿದ ಮಳೆ, ಜಲಾಶಯಗಳ ನೀರಿನ ಮಟ್ಟ ಏರಿಕೆ!

ಕೆಆರ್​ಎಸ್​

ಕೆಆರ್​ಎಸ್​

Karnataka reservoir Water Level Today: ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ (Dams) ಬಹುತೇಕ ಭರ್ತಿಯಾಗಿದೆ. ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣ ನಿಧಾನವಾಗಿ ಇಳಿಕೆಯಾಗಿರುವುದನ್ನೂ ಗಮನಿಸಬಹುದು. ಇಲ್ಲಿದೆ ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಮುಂದೆ ಓದಿ ...
  • Share this:

    ಉತ್ತರ ಕರ್ನಾಟಕದ (North Karnataka) ಕೆಲ ಜಿಲ್ಲೆಗಳಲ್ಲಿ ಮತ್ತೆ ಮಳೆ (Rain) ಸುರಿದ ವರದಿಗಳಾಗಿವೆ. ಈ ಹಿನ್ನೆಲೆಯಿಂದಾಗಿ ಆ ಭಾಗದ ಕೆಲ ಜಲಾಶಯಗಳಿಗೆ ಮತ್ತೆ ಒಳ ಹರಿವಿನ ಪ್ರಮಾಣ ಕೊಂಚ ಏರಿಕೆಯಾಗಿದೆ. ಅಷ್ಟಕ್ಕೂ, ಈ ಬಾರಿ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಮಳೆಯಾಗಿದ್ದು ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ (Dams) ಬಹುತೇಕ ಭರ್ತಿಯಾಗಿದೆ. ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣ ನಿಧಾನವಾಗಿ ಇಳಿಕೆಯಾಗಿರುವುದನ್ನೂ ಗಮನಿಸಬಹುದು.


    ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.


    ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.


    ಇದನ್ನೂ ಓದಿ: ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್, ಮುಖಕ್ಕೆ ಮೂತ್ರ ಎರಚಿ ಕಿರುಕುಳ ನೀಡಿದ್ರಾ ಪೊಲೀಸರು?


    ಈಗ ಕಳೆದ ಕೆಲ ದಿನಗಳಿಂದ ಮತ್ತೆ ಮಳೆ ಅಲ್ಲಲ್ಲಿ ಜಾಸ್ತಿಯಾಗುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಹವಾಮಾನ ಇಲಾಖೆಯ ಪ್ರಕಾರ, ಇನ್ನೂ ಸ್ವಲ್ಪ ಸಮಯ ಮಳೆಯಾಗುವ ಸಾಧ್ಯತೆಯಿದ್ದು ಮತ್ತೆ ಆಯಕಟ್ಟಿನ ಪ್ರದೇಶಗಳಲ್ಲಿ ನೀರಿನ ಹರಿವು ಏರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.


    ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (29-09-2022 ರಂತೆ)


    ಕೆಆರ್​ಎಸ್​ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ - 48.01 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 34.76 ಟಿಎಂಸಿ
    ಇಂದಿನ ಒಳಹರಿವು - 5664 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 7041 ಕ್ಯೂಸೆಕ್ಸ್​


    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ - 105.78 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 99.78 ಟಿಎಂಸಿ
    ಇಂದಿನ ಒಳಹರಿವು - 12427 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 12427 ಕ್ಯೂಸೆಕ್ಸ್​


    ಕಬಿನಿ ಜಲಾಶಯ - Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ - 18.69 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 17.45 ಟಿಎಂಸಿ
    ಇಂದಿನ ಒಳಹರಿವು - 1672 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1550 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ - Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 123.01 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 122.83 ಟಿಎಂಸಿ
    ಇಂದಿನ ಒಳಹರಿವು- 10543 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 10543 ಕ್ಯೂಸೆಕ್ಸ್​


    ಭದ್ರಾ ಜಲಾಶಯ - Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 70.17 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 70.15 ಟಿಎಂಸಿ
    ಇಂದಿನ ಒಳಹರಿವು- 3200 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 3200 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ - Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 51 ಟಿಎಂಸಿ
    ಇಂದಿನ ಒಳಹರಿವು - 1886 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 2698 ಕ್ಯೂಸೆಕ್ಸ್


    ಮಲಪ್ರಭಾ ಜಲಾಶಯ - Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ - 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 36.89 ಟಿಎಂಸಿ
    ಇಂದಿನ ಒಳಹರಿವು - 694 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 694 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ - Hemavathi Dam
    ಗರಿಷ್ಠ ಮಟ್ಟ - 2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 36.89 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 29.97 ಟಿಎಂಸಿ
    ಇಂದಿನ ಒಳಹರಿವು -2272 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 3325 ಕ್ಯೂಸೆಕ್ಸ್​


    ವರಾಹಿ ಜಲಾಶಯ - Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 23.28ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 19.63 ಟಿಎಂಸಿ
    ಇಂದಿನ ಒಳಹರಿವು - 130 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 716 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ - Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 7.68 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 8.04 ಟಿಎಂಸಿ
    ಇಂದಿನ ಒಳಹರಿವು - 425 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1450 ಕ್ಯೂಸೆಕ್ಸ್​​


    ಇದನ್ನೂ ಓದಿ: ವಾಹನದ ಟ್ಯಾಂಕ್ ಫುಲ್ ಮಾಡಿಸೋ ಮುನ್ನ ಇಂದಿನ ತೈಲ ದರ ನೋಡಿ


    ಲಿಂಗನಮಕ್ಕಿ ಜಲಾಶಯ - Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 141.08 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 141.3 ಟಿಎಂಸಿ
    ಇಂದಿನ ಒಳಹರಿವು - 3229 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 6786 ಕ್ಯೂಸೆಕ್ಸ್


    ಸೂಪಾ ಜಲಾಶಯ - Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 105.00 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 115.9 ಟಿಎಂಸಿ
    ಇಂದಿನ ಒಳಹರಿವು - 1726 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 3842 ಕ್ಯೂಸೆಕ್ಸ್​


    ನಾರಾಯಣಪುರ ಜಲಾಶಯ - Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 32.74 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 33.07 ಟಿಎಂಸಿ
    ಇಂದಿನ ಒಳಹರಿವು - 11835 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 9130 ಕ್ಯೂಸೆಕ್ಸ್

    Published by:Precilla Olivia Dias
    First published: