Karnataka Dams Water Level: ಮಳೆ ತಗ್ಗಿದ್ರೂ ಹೆಚ್ಚಾಗ್ತಿದೆ ಭೀಮೆಯ ಅಬ್ಬರ, ಪ್ರಮುಖ ಜಲಾಶಯಗಳ ಹೊರ ಹರಿವು ಎಷ್ಟಿದೆ ?

ಆಯಕಟ್ಟಿನ ಪ್ರದೇಶಗಳಲ್ಲಿ ನೀರಿನ ಹರಿವು ಏರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.

ಭೀಮಾ ನದಿ

ಭೀಮಾ ನದಿ

  • Share this:
    ಈ ಬಾರಿ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದ ಮಳೆ (Karnataka Rains) ಪ್ರಭಾವದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಬಹುತೇಕ ಜಲಾಶಯಗಳು (Karnataka Dam Level) ಭರ್ತಿಯಾಗಿವೆ. ಕೆಲ ದಿನಗಳ ಹಿಂದೆ ಜಾಸ್ತಿಯಾಗಿದ್ದ ಒಳಹರಿವಿನ ಪ್ರಮಾಣ ಪ್ರಸ್ತುತ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಡಿಮೆಯಾಗಿದ್ದ ಮಳೆ ಮತ್ತೆ ಕೆಲ ದಿನಗಳಿಂದ ರಾಜ್ಯದ ಅಲ್ಲಲ್ಲಿ ಸುರಿಯುತ್ತಿದೆ. ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು.ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ (Farmers) ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ (Agriculture Activities) ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.

    ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.

    ಈಗ ಕಳೆದ ಕೆಲ ದಿನಗಳಿಂದ ಮತ್ತೆ ಮಳೆ ಅಲ್ಲಲ್ಲಿ ಜಾಸ್ತಿಯಾಗುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಹವಾಮಾನ ಇಲಾಖೆಯ ಪ್ರಕಾರ, ಇನ್ನೂ ಸ್ವಲ್ಪ ಸಮಯ ಮಳೆಯಾಗುವ ಸಾಧ್ಯತೆಯಿದ್ದು ಮತ್ತೆ ಆಯಕಟ್ಟಿನ ಪ್ರದೇಶಗಳಲ್ಲಿ ನೀರಿನ ಹರಿವು ಏರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.

    ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (17-09-2022 ರಂತೆ)

    ಕೆಆರ್​ಎಸ್​ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ - 48.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 39.35 ಟಿಎಂಸಿ
    ಇಂದಿನ ಒಳಹರಿವು - 19,661 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 18,805 ಕ್ಯೂಸೆಕ್ಸ್​

    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ - 104.58 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 100.47 ಟಿಎಂಸಿ
    ಇಂದಿನ ಒಳಹರಿವು - 39,867 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 41,786 ಕ್ಯೂಸೆಕ್ಸ್​

    ಕಬಿನಿ ಜಲಾಶಯ-Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ - 18.87 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 19.08 ಟಿಎಂಸಿ
    ಇಂದಿನ ಒಳಹರಿವು - 4,921 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 5,550 ಕ್ಯೂಸೆಕ್ಸ್​

    ಇದನ್ನೂ ಓದಿ:  Kolar: ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ; ಪಾದ್ರಿ ಸೇರಿದಂತೆ ನಾಲ್ವರ ಅರೆಸ್ಟ್, ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ

    ಆಲಮಟ್ಟಿ ಜಲಾಶಯ-Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 118.56 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 117.88 ಟಿಎಂಸಿ
    ಇಂದಿನ ಒಳಹರಿವು- 1,44,000 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1,22,951 ಕ್ಯೂಸೆಕ್ಸ್​

    ಭದ್ರಾ ಜಲಾಶಯ-Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 70.05 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 70.80 ಟಿಎಂಸಿ
    ಇಂದಿನ ಒಳಹರಿವು- 5,974 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 4,770 ಕ್ಯೂಸೆಕ್ಸ್​

    ಘಟಪ್ರಭಾ ಜಲಾಶಯ-Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 50.76 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 51 ಟಿಎಂಸಿ
    ಇಂದಿನ ಒಳಹರಿವು - 8,104 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 4,555 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ - 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 37.73 ಟಿಎಂಸಿ
    ಇಂದಿನ ಒಳಹರಿವು - 4,919 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 4,919 ಕ್ಯೂಸೆಕ್ಸ್​

    ಹೇಮಾವತಿ ಜಲಾಶಯ-Hemavathi Dam
    ಗರಿಷ್ಠ ಮಟ್ಟ - 2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 36.06 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 32.41 ಟಿಎಂಸಿ
    ಇಂದಿನ ಒಳಹರಿವು - 7,147 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 1,800 ಕ್ಯೂಸೆಕ್ಸ್​

    ವರಾಹಿ ಜಲಾಶಯ-Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 23.23 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 19.93 ಟಿಎಂಸಿ
    ಇಂದಿನ ಒಳಹರಿವು - 767 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

    ಹಾರಂಗಿ ಜಲಾಶಯ-Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 8.16 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 8.32 ಟಿಎಂಸಿ
    ಇಂದಿನ ಒಳಹರಿವು - 1,754 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1800 ಕ್ಯೂಸೆಕ್ಸ್​​

    ಲಿಂಗನಮಕ್ಕಿ ಜಲಾಶಯ-Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 143.92 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 142.3 ಟಿಎಂಸಿ
    ಇಂದಿನ ಒಳಹರಿವು - 8,469 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 7,045 ಕ್ಯೂಸೆಕ್ಸ್

    ಇದನ್ನೂ ಓದಿ:  Belagavi Politics: ಬೆಳಗಾವಿ ವಿಭಜನೆ ಕಗ್ಗಂಟು; ರಾಜಕಾರಣಿಗಳಿಗೆ ಪ್ರತಿಷ್ಠೆ, ಜನರಿಗೆ ಪ್ರಾಣ ಸಂಕಟ!

    ಸೂಪಾ ಜಲಾಶಯ-Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 104.02 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 117.1 ಟಿಎಂಸಿ
    ಇಂದಿನ ಒಳಹರಿವು - 10483 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

    ನಾರಾಯಣಪುರ ಜಲಾಶಯ- Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 29.27 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 32.60 ಟಿಎಂಸಿ
    ಇಂದಿನ ಒಳಹರಿವು - 1,52,690 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1,42,658 ಕ್ಯೂಸೆಕ್ಸ್

    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.
    Published by:Mahmadrafik K
    First published: