Karnataka Dams Water Level: ಘಟಪ್ರಭಾ, ಮಲಪ್ರಭಾ ಜಲಾಶಯಗಳು ಭರ್ತಿ - ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಹೀಗಿದೆ

Karnataka Reservoir Water Level Today: ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.

ಆಲಮಟ್ಟಿ ಡ್ಯಾಮ್

ಆಲಮಟ್ಟಿ ಡ್ಯಾಮ್

  • Share this:
ಈ ಬಾರಿ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದ ಮಳೆ ಪ್ರಭಾವದಿಂದಾಗಿ (Karnataka Rains)  ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಬಹುತೇಕ ಜಲಾಶಯಗಳು (Karnataka Dams Water Level) ಭರ್ತಿಯಾಗಿವೆ. ಕೆಲ ದಿನಗಳ ಹಿಂದೆ ಜಾಸ್ತಿಯಾಗಿದ್ದ ಒಳಹರಿವಿನ ಪ್ರಮಾಣ ಪ್ರಸ್ತುತ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಕಡಿಮೆಯಾಗಿದ್ದ ಮಳೆ ಮತ್ತೆ ಕೆಲ ದಿನಗಳಿಂದ ರಾಜ್ಯದ ಅಲ್ಲಲ್ಲಿ ಸುರಿಯುತ್ತಿದೆ. ಹಿಂದೆ ಮಳೆಯ ಆರ್ಭಟ ಸಾಕಷ್ಟಿದ್ದ ಕಾರಣ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿತ್ತು. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.

ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ.

ಕೆಆರ್​ಎಸ್ ಸಹ ಭರ್ತಿ
ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

ಹಲವೆಡೆ ಪ್ರವಾಹ ಪರಿಸ್ಥಿತಿ
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.

ಈಗ ಕಳೆದ ಕೆಲ ದಿನಗಳಿಂದ ಮತ್ತೆ ಮಳೆ ಅಲ್ಲಲ್ಲಿ ಜಾಸ್ತಿಯಾಗುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಹವಾಮಾನ ಇಲಾಖೆಯ ಪ್ರಕಾರ, ಇನ್ನೂ ಸ್ವಲ್ಪ ಸಮಯ ಮಳೆಯಾಗುವ ಸಾಧ್ಯತೆಯಿದ್ದು ಮತ್ತೆ ಆಯಕಟ್ಟಿನ ಪ್ರದೇಶಗಳಲ್ಲಿ ನೀರಿನ ಹರಿವು ಏರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.

ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ 16-09-2022 ರಂತೆ ನೀರಿನ ಮಟ್ಟ ಹೀಗಿದೆ. 

ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 48.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 39.35  ಟಿಎಂಸಿ
ಇಂದಿನ ಒಳಹರಿವು - 19,661 ಕ್ಯೂಸೆಕ್ಸ್​
ಇಂದಿನ ಹೊರಹರಿವು - 18,805 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 104.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 100.36 ಟಿಎಂಸಿ
ಇಂದಿನ ಒಳಹರಿವು - 48,906 ಕ್ಯೂಸೆಕ್ಸ್​
ಇಂದಿನ ಹೊರಹರಿವು - 47,047 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 18.87 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.08 ಟಿಎಂಸಿ
ಇಂದಿನ ಒಳಹರಿವು - 4921 ಕ್ಯೂಸೆಕ್ಸ್​
ಇಂದಿನ ಹೊರಹರಿವು - 5550 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 116.70 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 114.25 ಟಿಎಂಸಿ
ಇಂದಿನ ಒಳಹರಿವು- 126990 ಕ್ಯೂಸೆಕ್ಸ್​
ಇಂದಿನ ಹೊರಹರಿವು - 150451 ಕ್ಯೂಸೆಕ್ಸ್​

ಭದ್ರಾ ಜಲಾಶಯ-Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 69.94 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 70.80 ಟಿಎಂಸಿ
ಇಂದಿನ ಒಳಹರಿವು- 5703 ಕ್ಯೂಸೆಕ್ಸ್​
ಇಂದಿನ ಹೊರಹರಿವು - 7208 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 50.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ
ಇಂದಿನ ಒಳಹರಿವು - 12859 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 7900 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 37.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.73 ಟಿಎಂಸಿ
ಇಂದಿನ ಒಳಹರಿವು - 8794 ಕ್ಯೂಸೆಕ್ಸ್​
ಇಂದಿನ ಹೊರಹರಿವು - 8794 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 37.06 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 32.41 ಟಿಎಂಸಿ
ಇಂದಿನ ಒಳಹರಿವು - 7147 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 4850 ಕ್ಯೂಸೆಕ್ಸ್​

ಇದನ್ನೂ ಓದಿ: ಕಲಬುರಗಿ-ಕೊಲ್ಹಾಪುರ ನಡುವೆ ಪ್ರತಿದಿನ ರೈಲು! ಇಲ್ಲಿದೆ ವಿವರ

ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 23.17 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 19.87 ಟಿಎಂಸಿ
ಇಂದಿನ ಒಳಹರಿವು - 1878 ಕ್ಯೂಸೆಕ್ಸ್​
ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 8.16 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 8.32 ಟಿಎಂಸಿ
ಇಂದಿನ ಒಳಹರಿವು - 1754 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1800 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ-Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ-143.75 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 143.1 ಟಿಎಂಸಿ
ಇಂದಿನ ಒಳಹರಿವು - 10181 ಕ್ಯೂಸೆಕ್ಸ್​
ಇಂದಿನ ಹೊರಹರಿವು - 6319 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 103.11 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 116.8 ಟಿಎಂಸಿ
ಇಂದಿನ ಒಳಹರಿವು - 12922 ಕ್ಯೂಸೆಕ್ಸ್​
ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

ಇದನ್ನೂ ಓದಿ: ಹಿಂದೂ ಮಹಾ ಗಣಪತಿ ವಿಸರ್ಜನೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 28.41 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 30.04 ಟಿಎಂಸಿ
ಇಂದಿನ ಒಳಹರಿವು - 177284 ಕ್ಯೂಸೆಕ್ಸ್​
ಇಂದಿನ ಹೊರಹರಿವು - 182975 ಕ್ಯೂಸೆಕ್ಸ್
Published by:Sandhya M
First published: