• Home
  • »
  • News
  • »
  • state
  • »
  • Karnataka Dams Water Level: ಹೆಚ್ಚಾಗಿದೆ ಕೃಷ್ಣೆ, ಭೀಮೆಯ ಅಬ್ಬರ; ಇಂದಿನ ಜಲಾಶಯಗಳ ನೀರಿನ ಮಟ್ಟ

Karnataka Dams Water Level: ಹೆಚ್ಚಾಗಿದೆ ಕೃಷ್ಣೆ, ಭೀಮೆಯ ಅಬ್ಬರ; ಇಂದಿನ ಜಲಾಶಯಗಳ ನೀರಿನ ಮಟ್ಟ

ಬಸವಸಾಗರ ಜಲಾಶಯ

ಬಸವಸಾಗರ ಜಲಾಶಯ

ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.

  • Share this:

ರಾಜ್ಯದಲ್ಲಿ ಕಳೆದ ವಾರದಿಂದ ವರುಣ (Rainfall) ಆರ್ಭಟಿಸುತ್ತಿದ್ದಾನೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಬಗ್ಗೆಯೂ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈಋತ್ಯ ಮಾನ್ಸೂನ್‌ ಪ್ರಬಲವಾಗಿದ್ದರಿಂದ ರಾಜ್ಯದಲ್ಲಿ ಮಳೆಗಾಲದಂತೆ ಹೆಚ್ಚು ಮಳೆಯಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಒಳಹರಿವು, ಹೊರಹರಿವು, ನೀರಿನ ಮಟ್ಟ ತಗ್ಗಿದ ಜಲಾಶಯಗಳಲ್ಲಿ ಮತ್ತೆ ನೀರಿನ ಸಂಚಲನವಾಗಿದೆ. ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ಈ ಹಿನ್ನೆಲೆಯಿಂದಾಗಿ ಜಲಾಶಯಗಳು ತುಂಬಿ ಹರಿದಿವೆ. ಸ್ವಲ್ಪ ದಿನದ ಹಿಂದೆ ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ, ಸಹಜವಾಗಿಯೇ ಜಲಾಶಯಗಳ (Dams) ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆಯಾಗಿತ್ತು.


ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ (Farmers) ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ (Agriculture Activities) ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.


ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.


ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 49.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 43.14 ಟಿಎಂಸಿ
ಇಂದಿನ ಒಳಹರಿವು - 26,196 ಕ್ಯೂಸೆಕ್ಸ್​
ಇಂದಿನ ಹೊರಹರಿವು - 25,939 ಕ್ಯೂಸೆಕ್ಸ್​


ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 105.78 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 100.51 ಟಿಎಂಸಿ
ಇಂದಿನ ಒಳಹರಿವು - 34,724 ಕ್ಯೂಸೆಕ್ಸ್​
ಇಂದಿನ ಹೊರಹರಿವು - 34,724 ಕ್ಯೂಸೆಕ್ಸ್​


ಕಬಿನಿ ಜಲಾಶಯ - Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 19.50 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 18.13 ಟಿಎಂಸಿ
ಇಂದಿನ ಒಳಹರಿವು - 3,554 ಕ್ಯೂಸೆಕ್ಸ್​
ಇಂದಿನ ಹೊರಹರಿವು - 3,000 ಕ್ಯೂಸೆಕ್ಸ್​


ಆಲಮಟ್ಟಿ ಜಲಾಶಯ - Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 123.08 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 123.08 ಟಿಎಂಸಿ
ಇಂದಿನ ಒಳಹರಿವು- 32,168 ಕ್ಯೂಸೆಕ್ಸ್​
ಇಂದಿನ ಹೊರಹರಿವು - 27,284 ಕ್ಯೂಸೆಕ್ಸ್​


ಭದ್ರಾ ಜಲಾಶಯ - Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 70.69 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 71.54 ಟಿಎಂಸಿ
ಇಂದಿನ ಒಳಹರಿವು- 1,593 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,797 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ - Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 51 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 51 ಟಿಎಂಸಿ
ಇಂದಿನ ಒಳಹರಿವು - 2,897 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 2,897 ಕ್ಯೂಸೆಕ್ಸ್


ಮಲಪ್ರಭಾ ಜಲಾಶಯ - Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 37.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.73 ಟಿಎಂಸಿ
ಇಂದಿನ ಒಳಹರಿವು - 1,394 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,394 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ - Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 36.77 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 27.25 ಟಿಎಂಸಿ
ಇಂದಿನ ಒಳಹರಿವು - 7,587 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 8,600 ಕ್ಯೂಸೆಕ್ಸ್​


ವರಾಹಿ ಜಲಾಶಯ - Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31 ಟಿಎಂಸಿ
ಇಂದಿನ ನೀರಿನ ಮಟ್ಟ- 22.53 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 18.83 ಟಿಎಂಸಿ
ಇಂದಿನ ಒಳಹರಿವು - 189 ಕ್ಯೂಸೆಕ್ಸ್​
ಇಂದಿನ ಹೊರಹರಿವು - 752 ಕ್ಯೂಸೆಕ್ಸ್​


ಹಾರಂಗಿ ಜಲಾಶಯ - Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.17 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 8.21 ಟಿಎಂಸಿ
ಇಂದಿನ ಒಳಹರಿವು - 2006 ಕ್ಯೂಸೆಕ್ಸ್​
ಇಂದಿನ ಹೊರಹರಿವು - 250 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ - Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 135.66 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 139.3 ಟಿಎಂಸಿ
ಇಂದಿನ ಒಳಹರಿವು - 2,371 ಕ್ಯೂಸೆಕ್ಸ್​
ಇಂದಿನ ಹೊರಹರಿವು - 6,902 ಕ್ಯೂಸೆಕ್ಸ್


ಸೂಪಾ ಜಲಾಶಯ - Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 104.63 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 115.7 ಟಿಎಂಸಿ
ಇಂದಿನ ಒಳಹರಿವು - 3,025 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,805 ಕ್ಯೂಸೆಕ್ಸ್​


ಇದನ್ನೂ ಓದಿ: Karnataka Weather Report: ದಿಢೀರ್ ಎಂಟ್ರಿ ಕೊಟ್ಟು ಅಬ್ಬರಿಸೋ ವರುಣನ ಆಟಕ್ಕೆ ಜನರು ಹೈರಾಣು; ಇಂದಿನ ಹವಾಮಾನ ವರದಿ


ನಾರಾಯಣಪುರ ಜಲಾಶಯ - Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 32.42 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 33.12 ಟಿಎಂಸಿ
ಇಂದಿನ ಒಳಹರಿವು - 30,878 ಕ್ಯೂಸೆಕ್ಸ್​
ಇಂದಿನ ಹೊರಹರಿವು - 28,731 ಕ್ಯೂಸೆಕ್ಸ್


ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ.


ಇದನ್ನೂ ಓದಿ:  Namma Metro: ಮೆಟ್ರೋ ಕಾಮಗಾರಿಗೆ ರಣಮಳೆಯ ವಿಘ್ನ; ಮೂರು ತಿಂಗಳು ಕೆಲಸ ವಿಳಂಬ


ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

Published by:Mahmadrafik K
First published: