• Home
  • »
  • News
  • »
  • state
  • »
  • Karnataka Dams Water Level: ಏರಿಕೆಯಾಗುತ್ತಿದೆ ಜಲಾಶಯಗಳ ನೀರಿನ ಮಟ್ಟ , ನಿಮ್ಮ ಊರಿನ ಡ್ಯಾಂ ಎಷ್ಟು ತುಂಬಿದೆ ನೋಡಿ

Karnataka Dams Water Level: ಏರಿಕೆಯಾಗುತ್ತಿದೆ ಜಲಾಶಯಗಳ ನೀರಿನ ಮಟ್ಟ , ನಿಮ್ಮ ಊರಿನ ಡ್ಯಾಂ ಎಷ್ಟು ತುಂಬಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Reservoir Water Level Today: ಸ್ವಲ್ಪ ದಿನದ ಹಿಂದೆ ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ, ಸಹಜವಾಗಿಯೇ ಜಲಾಶಯಗಳ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆಯಾಗಿತ್ತು.

  • Share this:

ರಾಜ್ಯದಲ್ಲಿ ಕಳೆದ ವಾರದಿಂದ ವರುಣ (Rainfall) ಆರ್ಭಟಿಸುತ್ತಿದ್ದಾನೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ (District) ಮಳೆ ಮುಂದುವರಿಯುವ ಬಗ್ಗೆಯೂ ಹವಾಮಾನ ಇಲಾಖೆ (IMB) ಮುನ್ಸೂಚನೆ ನೀಡಿದೆ. ನೈರುತ್ಯ ಮನ್ಸೂನ್‌ ಪ್ರಬಲವಾಗಿದ್ದು ಹೆಚ್ಚು ಮಳೆಯಾಗುವ ಬಗ್ಗೆ ವರದಿಗಳಾಗಿವೆ. ಮಳೆ ಅಬ್ಬರ ಹೆಚ್ಚಾಗಿರುವ ಕಾರಣ ಒಳಹರಿವು, ಹೊರಹರಿವು, ನೀರಿನ ಮಟ್ಟ ತಗ್ಗಿದ ಜಲಾಶಯಗಳಲ್ಲಿ ಮತ್ತೆ ನೀರಿನ ಸಂಚಲನ ಆರಂಭವಾಗಿದೆ. ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ಈ ಹಿನ್ನೆಲೆಯಿಂದಾಗಿ ಜಲಾಶಯಗಳು (Dams)  ತುಂಬಿ ಹರಿದಿವೆ. ಸ್ವಲ್ಪ ದಿನದ ಹಿಂದೆ ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ, ಸಹಜವಾಗಿಯೇ ಜಲಾಶಯಗಳ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆಯಾಗಿತ್ತು.


ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.


ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.


ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.
ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 49.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 42.77 ಟಿಎಂಸಿ
ಇಂದಿನ ಒಳಹರಿವು - 26,196 ಕ್ಯೂಸೆಕ್ಸ್​
ಇಂದಿನ ಹೊರಹರಿವು - 25,939 ಕ್ಯೂಸೆಕ್ಸ್​


ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 105.79 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 100.86 ಟಿಎಂಸಿ
ಇಂದಿನ ಒಳಹರಿವು - 35,513 ಕ್ಯೂಸೆಕ್ಸ್​
ಇಂದಿನ ಹೊರಹರಿವು - 29,936 ಕ್ಯೂಸೆಕ್ಸ್​


ಕಬಿನಿ ಜಲಾಶಯ - Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 19.46 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 17.93 ಟಿಎಂಸಿ
ಇಂದಿನ ಒಳಹರಿವು - 2,962 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,333 ಕ್ಯೂಸೆಕ್ಸ್​


ಆಲಮಟ್ಟಿ ಜಲಾಶಯ - Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 122.66 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 123.08 ಟಿಎಂಸಿ
ಇಂದಿನ ಒಳಹರಿವು- 48,782 ಕ್ಯೂಸೆಕ್ಸ್​
ಇಂದಿನ ಹೊರಹರಿವು - 30,658 ಕ್ಯೂಸೆಕ್ಸ್​


ಭದ್ರಾ ಜಲಾಶಯ - Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 70.89 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 71.54 ಟಿಎಂಸಿ
ಇಂದಿನ ಒಳಹರಿವು- 2,895 ಕ್ಯೂಸೆಕ್ಸ್​
ಇಂದಿನ ಹೊರಹರಿವು - 4,110 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ - Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 51 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 51 ಟಿಎಂಸಿ
ಇಂದಿನ ಒಳಹರಿವು - 2,008 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 2,008 ಕ್ಯೂಸೆಕ್ಸ್


ಇದನ್ನೂ ಓದಿ: HDD ಜೊತೆಗಿನ ಸ್ನೇಹಕ್ಕಾಗಿ ತಡವಾಯ್ತು, 15 ದಿನದಲ್ಲಿ ನಿರ್ಧಾರ ಪ್ರಕಟ; ಜಿ ಟಿ ದೇವೇಗೌಡ


ಮಲಪ್ರಭಾ ಜಲಾಶಯ - Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 37.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.73 ಟಿಎಂಸಿ
ಇಂದಿನ ಒಳಹರಿವು - 2,227 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,227 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ - Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 36.86 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 27.44 ಟಿಎಂಸಿ
ಇಂದಿನ ಒಳಹರಿವು - 5,004 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 4,942 ಕ್ಯೂಸೆಕ್ಸ್​


ವರಾಹಿ ಜಲಾಶಯ - Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31 ಟಿಎಂಸಿ
ಇಂದಿನ ನೀರಿನ ಮಟ್ಟ- 22.58 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 18.94 ಟಿಎಂಸಿ
ಇಂದಿನ ಒಳಹರಿವು - 188 ಕ್ಯೂಸೆಕ್ಸ್​
ಇಂದಿನ ಹೊರಹರಿವು - 752 ಕ್ಯೂಸೆಕ್ಸ್​


ಹಾರಂಗಿ ಜಲಾಶಯ - Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.02 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 8.24 ಟಿಎಂಸಿ
ಇಂದಿನ ಒಳಹರಿವು - 1,418 ಕ್ಯೂಸೆಕ್ಸ್​
ಇಂದಿನ ಹೊರಹರಿವು - 250 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ - Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 136.12 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 139.6 ಟಿಎಂಸಿ
ಇಂದಿನ ಒಳಹರಿವು - 4,046 ಕ್ಯೂಸೆಕ್ಸ್​
ಇಂದಿನ ಹೊರಹರಿವು - 7,573 ಕ್ಯೂಸೆಕ್ಸ್


ಇದನ್ನೂ ಓದಿ: ಕದ್ದ ಹಣದಲ್ಲಿ ದೇವಸ್ಥಾನ, ಚರ್ಚ್​ ಹುಂಡಿಗೆ ಹಣ ಹಾಕ್ತಿದ್ದ ಕಳ್ಳ ಅರೆಸ್ಟ್


ಸೂಪಾ ಜಲಾಶಯ - Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 104.67 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 116.1 ಟಿಎಂಸಿ
ಇಂದಿನ ಒಳಹರಿವು - 1,780 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1358 ಕ್ಯೂಸೆಕ್ಸ್​


ನಾರಾಯಣಪುರ ಜಲಾಶಯ - Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 31.23 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 33.12 ಟಿಎಂಸಿ
ಇಂದಿನ ಒಳಹರಿವು - 42,647 ಕ್ಯೂಸೆಕ್ಸ್​
ಇಂದಿನ ಹೊರಹರಿವು - 31,038 ಕ್ಯೂಸೆಕ್ಸ್

Published by:Sandhya M
First published: