• Home
  • »
  • News
  • »
  • state
  • »
  • Karnataka Dams Water Level: ರಾಜ್ಯದ ಹಲವು ಜಲಾಯಶಯಗಳ ಒಳಹರಿವು ಏರಿಕೆ: ಹೀಗಿದೆ ಇಂದಿನ ನೀರಿನ ಮಟ್ಟ ಎಷ್ಟಿದೆ?

Karnataka Dams Water Level: ರಾಜ್ಯದ ಹಲವು ಜಲಾಯಶಯಗಳ ಒಳಹರಿವು ಏರಿಕೆ: ಹೀಗಿದೆ ಇಂದಿನ ನೀರಿನ ಮಟ್ಟ ಎಷ್ಟಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Dam Water level: ಜಲಾಶಯಗಳಿಗೆ ನೀರಿನ ಒಳಹರಿವು ಕೊಂಚ ಏರಿದೆ. ಅಷ್ಟಕ್ಕೂ ಈ ಬಾರಿ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಮಳೆಯಾಗಿದ್ದು ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ ಸಾಕಷ್ಟು ಭರ್ತಿಯಾಗಿವೆ. ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ

ಮುಂದೆ ಓದಿ ...
  • Share this:

    ಬೆಂಗಳೂರು(ಅ.14): ರಾಜ್ಯದ ಕೆಲವು ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿದ ವರದಿಗಳು ಬಂದಿದ್ದು ಕೆಲ ಜಲಾಶಯಗಳಿಗೆ (Dams) ನೀರಿನ ಒಳಹರಿವು ಕೊಂಚ ಏರಿದೆ. ಅಷ್ಟಕ್ಕೂ ಈ ಬಾರಿ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಮಳೆಯಾಗಿದ್ದು ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ ಸಾಕಷ್ಟು ಭರ್ತಿಯಾಗಿವೆ. ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ (dam Water Level) ಒಳಹರಿವಿನ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆ ಇರುವುದನ್ನು ಗಮನಿಸಬಹುದು.


    ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


    ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ


    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ.


    ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.


    ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (13-10-2022 ರಂತೆ)


    ಕೆಆರ್​ಎಸ್​ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ - 48.75 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 39.32 ಟಿಎಂಸಿ
    ಇಂದಿನ ಒಳಹರಿವು - 17577 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 21840 ಕ್ಯೂಸೆಕ್ಸ್​


    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ - 105.27 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 100.86 ಟಿಎಂಸಿ
    ಇಂದಿನ ಒಳಹರಿವು - 66077 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 65147 ಕ್ಯೂಸೆಕ್ಸ್​


    ಕಬಿನಿ ಜಲಾಶಯ - Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ - 18.33 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 16.61 ಟಿಎಂಸಿ
    ಇಂದಿನ ಒಳಹರಿವು - 1051 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1100 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ - Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 122.66 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 123.08 ಟಿಎಂಸಿ
    ಇಂದಿನ ಒಳಹರಿವು- 52388 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 56451 ಕ್ಯೂಸೆಕ್ಸ್​


    ಭದ್ರಾ ಜಲಾಶಯ - Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 71.54 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 71.54 ಟಿಎಂಸಿ
    ಇಂದಿನ ಒಳಹರಿವು- 4024 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 4131 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ - Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 51 ಟಿಎಂಸಿ
    ಇಂದಿನ ಒಳಹರಿವು - 997 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 185 ಕ್ಯೂಸೆಕ್ಸ್


    ಮಲಪ್ರಭಾ ಜಲಾಶಯ - Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ - 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 37.73 ಟಿಎಂಸಿ
    ಇಂದಿನ ಒಳಹರಿವು - 3107 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 3107 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ - Hemavathi Dam
    ಗರಿಷ್ಠ ಮಟ್ಟ - 2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 36.57 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 27.90 ಟಿಎಂಸಿ
    ಇಂದಿನ ಒಳಹರಿವು - 3063 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 2222 ಕ್ಯೂಸೆಕ್ಸ್​


    ವರಾಹಿ ಜಲಾಶಯ - Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 22.82 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 19.27 ಟಿಎಂಸಿ
    ಇಂದಿನ ಒಳಹರಿವು - 179 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 743 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ - Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 6.64 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 8.30 ಟಿಎಂಸಿ
    ಇಂದಿನ ಒಳಹರಿವು - 1185 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1100 ಕ್ಯೂಸೆಕ್ಸ್​​


    ಲಿಂಗನಮಕ್ಕಿ ಜಲಾಶಯ - Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 136.58 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 141.3 ಟಿಎಂಸಿ
    ಇಂದಿನ ಒಳಹರಿವು - 3495 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 5454 ಕ್ಯೂಸೆಕ್ಸ್


    ಸೂಪಾ ಜಲಾಶಯ - Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 104.38 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 117.3 ಟಿಎಂಸಿ
    ಇಂದಿನ ಒಳಹರಿವು - 2751 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 225 ಕ್ಯೂಸೆಕ್ಸ್​


    ನಾರಾಯಣಪುರ ಜಲಾಶಯ - Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 31.14 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 33.22 ಟಿಎಂಸಿ
    ಇಂದಿನ ಒಳಹರಿವು - 70185 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 87678 ಕ್ಯೂಸೆಕ್ಸ್

    Published by:Precilla Olivia Dias
    First published: