Karnataka Dams Water Level: ಹೆಚ್ಚಾಗುತ್ತಿದೆ ಜಲಾಶಯಗಳ ನೀರಿನ ಮಟ್ಟ, ಡ್ಯಾಂಗಳಿಂದ ಹೆಚ್ಚುವರಿ ನೀರು ಹೊರಕ್ಕೆ

Karnataka Reservoir Level: . ಕೆಲ ದಿನಗಳಿಂದ ಮಳೆ ಕಡಿಮೆಯಾದಂತೆ ತೋರಿದ್ದರೂ ಕಳೆದ ಎರಡು ದಿನಗಳಲ್ಲಿ ರಾಜ್ಯದ ಹಲವೆಡೆ ಮತ್ತೆ ಮಳೆ ಸುರಿದಿದ್ದು ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರುವ ಪಥದಲ್ಲಿದೆ. ರಾಜ್ಯದ ವಿವಿಧ ಜಲಾಶಯಗಳು ತುಂಬುವ ಭರದಲ್ಲಿದ್ದು ಈಗಾಗಲೇ ಕೆಲ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ.

ತುಂಗಭದ್ರಾ

ತುಂಗಭದ್ರಾ

  • Share this:
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯ (Rain) ಆರ್ಭಟ ಜೋರಾಗಿಯೇ ಇತ್ತು. ಪರಿಣಾಮ ಈಗಾಗಲೇ ಭರ್ತಿಯಾಗಿರುವ ಕೆಲವು ಜಲಾಶಯಗಳಿಂದ (Dams)  ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ಅಂತಹ ಜಲಾಶಯಗಳ ಆಸುಪಾಸಿನಲ್ಲಿ ನೆಲೆಸಿರುವ ಜನರಿಗೆ ಸುರಕ್ಷತೆಯ ದೃಷ್ಟಿಯಿಂದ ಜಾಗ ತೆರವು ಮಾಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ (Agricultural Activities) ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ (Karnataka ) ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ. ಕೆಲ ದಿನಗಳಿಂದ ಮಳೆ ಕಡಿಮೆಯಾದಂತೆ ತೋರಿದ್ದರೂ ಕಳೆದ ಎರಡು ದಿನಗಳಲ್ಲಿ ರಾಜ್ಯದ ಹಲವೆಡೆ ಮತ್ತೆ ಮಳೆ ಸುರಿದಿದ್ದು ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರುವ ಪಥದಲ್ಲಿದೆ. ರಾಜ್ಯದ ವಿವಿಧ ಜಲಾಶಯಗಳು ತುಂಬುವ ಭರದಲ್ಲಿದ್ದು ಈಗಾಗಲೇ ಕೆಲ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ.

ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (13-08-2022 ರಂತೆ)

ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 47.08 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 44.17 ಟಿಎಂಸಿ
ಇಂದಿನ ಒಳಹರಿವು - 73011 ಕ್ಯೂಸೆಕ್ಸ್​
ಇಂದಿನ ಹೊರಹರಿವು - 55760 ಕ್ಯೂಸೆಕ್ಸ್​

ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 102.90 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 99.93 ಟಿಎಂಸಿ
ಇಂದಿನ ಒಳಹರಿವು - 119779 ಕ್ಯೂಸೆಕ್ಸ್​
ಇಂದಿನ ಹೊರಹರಿವು - 100890 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 18.49 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 18.53 ಟಿಎಂಸಿ
ಇಂದಿನ ಒಳಹರಿವು - 26356 ಕ್ಯೂಸೆಕ್ಸ್​
ಇಂದಿನ ಹೊರಹರಿವು - 32320 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 104.52 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 120.42 ಟಿಎಂಸಿ
ಇಂದಿನ ಒಳಹರಿವು- 186296 ಕ್ಯೂಸೆಕ್ಸ್​
ಇಂದಿನ ಹೊರಹರಿವು - 223367 ಕ್ಯೂಸೆಕ್ಸ್​

ಭದ್ರಾ ಜಲಾಶಯ-Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 68.93 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 69.92 ಟಿಎಂಸಿ
ಇಂದಿನ ಒಳಹರಿವು- 27350 ಕ್ಯೂಸೆಕ್ಸ್​
ಇಂದಿನ ಹೊರಹರಿವು - 28542 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 49.93 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 50.51 ಟಿಎಂಸಿ
ಇಂದಿನ ಒಳಹರಿವು - 29896 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 26711 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 33.52 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 34.31 ಟಿಎಂಸಿ
ಇಂದಿನ ಒಳಹರಿವು - 14453 ಕ್ಯೂಸೆಕ್ಸ್​
ಇಂದಿನ ಹೊರಹರಿವು - 5544 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 36.14 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 35.48 ಟಿಎಂಸಿ
ಇಂದಿನ ಒಳಹರಿವು - 35116 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 41770 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 19.36 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 15.67 ಟಿಎಂಸಿ
ಇಂದಿನ ಒಳಹರಿವು - 3104 ಕ್ಯೂಸೆಕ್ಸ್​
ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

ಇದನ್ನೂ ಓದಿ: ಚಿಕನ್ ಲೆಗ್​ ಪೀಸ್​​ನಲ್ಲಿ ಗಾಂಜಾ ಇರಿಸಿ ಜೈಲಿನೊಳಗೆ ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.04 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 7.40 ಟಿಎಂಸಿ
ಇಂದಿನ ಒಳಹರಿವು - 4422 ಕ್ಯೂಸೆಕ್ಸ್​
ಇಂದಿನ ಹೊರಹರಿವು - 4000 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 127.67 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 129.5 ಟಿಎಂಸಿ
ಇಂದಿನ ಒಳಹರಿವು - 36495 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2615 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 81.99 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 107.5 ಟಿಎಂಸಿ
ಇಂದಿನ ಒಳಹರಿವು - 23196 ಕ್ಯೂಸೆಕ್ಸ್​
ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144, ಭಾರತಕ್ಕೆ ಫಿಫಾ ಶಾಕ್, ಬಿಹಾರ ಸಚಿವ ಸಂಪುಟ ವಿಸ್ತರಣೆ; ಬೆಳಗಿನ ಟಾಪ್ ನ್ಯೂಸ್

ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.05 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 29.70 ಟಿಎಂಸಿ
ಇಂದಿನ ಒಳಹರಿವು - 221290 ಕ್ಯೂಸೆಕ್ಸ್​
ಇಂದಿನ ಹೊರಹರಿವು - 230937 ಕ್ಯೂಸೆಕ್ಸ್
Published by:Sandhya M
First published: