vaccination Record: ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶದಲ್ಲಿ ದಾಖಲೆ; ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ

highest vaccination mark : ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ದೈನಂದಿನ ಲಸಿಕೆ ವಿತರಣೆಯಲ್ಲಿ ನಿನ್ನೆ ಒಂದೇ ದಿನದಲ್ಲಿ ದುಪ್ಪಟ್ಟು ಸಾಧನೆ ಮಾಡಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಆ. 28): ದೇಶದಲ್ಲಿ ಲಸಿಕೆ ಅಭಿಯಾನಕ್ಕೆ (Covid vaccination) ಹೆಚ್ಚು ಒತ್ತು ನೀಡಿದ್ದು, ವಿತರಣೆ ಕಾರ್ಯ ಬಿರುಸು ಪಡೆದಿದೆ. ಶುಕ್ರವಾರ ಒಂದೇ ದಿನದಲ್ಲಿ ದೇಶದಲ್ಲಿ ಒಂದು ಕೋಟಿ ಲಸಿಕೆಯನ್ನು ನೀಡುವ ಮೂಲಕ ಹೊಸ ದಾಖಲೆ (recorded its highest number of vaccination in one day) ಬರೆದಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದರು. ಲಸಿಕೆ ವಿತರಣೆ ವೇಗ ಪಡೆದ ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಕೂಡ ಹರ್ಷ ವ್ಯಕ್ತಪಡಿಸಿದ್ದರು. ಇನ್ನು ಈ ದೇಶದ ದಾಖಲೆ ಸಾಧನೆಯಲ್ಲಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಮುಂಚೂಣಿಯಲ್ಲಿವೆ. ಈ ಮೂರು ರಾಜ್ಯಗಳ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಲಸಿಕೆ ವಿತರಣೆಗೆ (vaccination Jab) ಒತ್ತು ನೀಡಲಾಗಿದೆ, ಶೇ 70 ರಷ್ಟು ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲೂ ಬೆಂಗಳೂರು ಮತ್ತು ಗುರ್​ಗಾವ್​ನಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  ದಾಖಲೆ ಬರೆದ ಮೂರು ರಾಜ್ಯ

  ಉತ್ತರ ಪ್ರದೇಶದಲ್ಲಿ ನಿನ್ನೆ ಒಂದೇ ದಿನದಲ್ಲಿ 30 ಲಕ್ಷ ಲಸಿಕೆ ವಿತಣೆ ನೀಡಲಾಗಿದೆ, ಕರ್ನಾಟದಲ್ಲಿ 1.1 ಮಿಲಿಯನ್​ ಲಸಿಕೆ ವಿತರಣೆ ಮಾಡಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮಿಲಿಯನ್​ಗಿಂದ ಕೊಂಚ ಕಡಿಮೆಯಿದ್ದರೂ ಹೆಚ್ಚಿನ ಲಸಿಕೆ ವಿತರಣೆ ನಡೆಸಿದೆ. ಈ ಮೂರು ರಾಜ್ಯಗಳ ಲಸಿಕೆ ವಿತರಣೆ ದೇಶದ ಶೇ 50 ರಷ್ಟು ಲಸಿಕೆ ವಿತರಣೆ ಪ್ರಮಾಣವನ್ನು ಹೊಂದಿದೆ.

  ಹರಿಯಾಣದಲ್ಲಿ ದುಪಟ್ಟು ಸಾಧನೆ

  ಇದರ ಜೊತೆ ಪಶ್ಚಿಮ ಬಂಗಾಳ ಮತ್ತು ಹರಿಯಾಣ ಕೂಡ ಅಧಿಕ ಲಸಿಕೆ ವಿತರಣೆ ಮಾಡಿ ದಾಖಲೆ ನಿರ್ಮಿಸಿದೆ. ಪಶ್ಚಿಮ ಬಂಗಾಳದಲ್ಲಿ 5.53 ಲಕ್ಷ ಲಸಿಕೆ ವಿತರಣೆ ನಡೆದರೆ, ಹರಿಯಾಣದಲ್ಲಿ 6.12 ಲಕ್ಷ ಡೋಸ್​ ಲಸಿಕೆ ನೀಡಲಾಗಿದೆ. ಈ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಹರಿಯಾಣ ದುಪ್ಪಟ್ಟು ಸಾಧನೆ ಮಾಡಿದೆ.

  ಗ್ರಾಮಗಳಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ

  ಭಾರತದ ಗ್ರಾಮೀಣ ಪ್ರದೇಶದಲ್ಲಿ 73 ಲಕ್ಷ ಲಸಿಕೆ ವಿತರಣೆ ಮಾಡಲಾಗಿದೆ, ಇದರಲ್ಲಿ ದೊಡ್ಡ ನಗರಗಳು ಅಗ್ರಸ್ಥಾನ ಪಡೆದಿದೆ. ಮುಂಬೈನಲ್ಲಿ 1.77ಲಕ್ಷ ನೀಡಿದರೆ, ಬೆಂಗಳೂರಿನಲ್ಲಿ ಬಿಬಿಎಂಪಿ 1.67 ಲಸಿಕೆಯನ್ನು ನೀಡಿದೆ. ವಿಶೇಷ ಎಂದರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ದೈನಂದಿನ ಲಸಿಕೆ ವಿತರಣೆಯಲ್ಲಿ ನಿನ್ನೆ ಒಂದೇ ದಿನದಲ್ಲಿ ದುಪ್ಪಟ್ಟು ಸಾಧನೆ ಮಾಡಿದೆ. ಇನ್ನು ಹರಿಯಾಣದ ಗುರ್​ಗಾವ್​ನಲ್ಲಿ 67 ಸಾವಿರ ಡೋಸ್​ ಲಸಿಕೆ ನೀಡಲಾಗಿದೆ.

  ಇದನ್ನು ಓದಿ: ದೇಶದ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಕೋವಿಡ್​ ಮೊದಲ ಡೋಸ್​ ಲಸಿಕೆ: ಕೇಂದ್ರ ಆರೋಗ್ಯ ಇಲಾಖೆ

  ಉತ್ತರ ಪ್ರದೇಶದ ಲಕ್ನೋದಲ್ಲಿ 91,437 ಲಸಿಕೆ ವಿತರಣೆ ನಡೆದರೆ, ಪ್ರಧಾನಿಗಳ ಕ್ಷೇತ್ರ ವಾರಾಣಾಸಿಯಲ್ಲಿ 56 ಸಾವಿರ ಲಸಿಕೆ ನೀಡಲಾಗಿದೆ ಎಂಬುದು ಅಂಕಿ ಅಂಶದಲ್ಲಿ ಬಯಲಾಗಿದೆ.

  ಶುಕ್ರವಾರ ಅಂದರೆ, ಆಗಸ್ಟ್​ 27ರಂದು ದೇಶದ ಜನರಿಗೆ ಮೊದಲ ಡೋಸ್​ ಲಸಿಕೆ ನೀಡಲಾಗಿದ್ದು, ಇದೇ ವೇಳೆ ಎರಡನೇ ಡೋಸ್​ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: