ಒಗ್ಗಟ್ಟು ಪ್ರದರ್ಶಿಸಿದರೂ ಅತೃಪ್ತ ಶಾಸಕರಿಗೆ ಕಾಡ್ತಿದೆ ಚಿಂತೆ; ಸರ್ಕಾರ ಬಿದ್ದರೆ ರೆಬೆಲ್​ಗಳ ರಾಜಕೀಯ ಭವಿಷ್ಯವೇ ಅಸ್ತಂಗತ?

Karnataka Politics: ಅತೃಪ್ತರು ಒಗ್ಗಟ್ಟಾಗಿ ಇದ್ದ ಹೊರತಾಗಿಯೂ ಅವರು ಆತಂಕದಲ್ಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹೊರಬೀಳುತ್ತಿದೆ. ಅದಕ್ಕೆ ಕಾರಣ ಸುಪ್ರೀಂ ತೀರ್ಪು, ಅನರ್ಹತೆ ಅಸ್ತ್ರ ಮತ್ತು ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ನಾಯಕರು ಸಿಟ್ಟು!

MAshok Kumar | news18
Updated:July 22, 2019, 9:49 AM IST
ಒಗ್ಗಟ್ಟು ಪ್ರದರ್ಶಿಸಿದರೂ ಅತೃಪ್ತ ಶಾಸಕರಿಗೆ ಕಾಡ್ತಿದೆ ಚಿಂತೆ; ಸರ್ಕಾರ ಬಿದ್ದರೆ ರೆಬೆಲ್​ಗಳ ರಾಜಕೀಯ ಭವಿಷ್ಯವೇ ಅಸ್ತಂಗತ?
ರೆಬಲ್ ಶಾಸಕರು
  • News18
  • Last Updated: July 22, 2019, 9:49 AM IST
  • Share this:
ಬೆಂಗಳೂರು (ಜುಲೈ.22); ಸೋಮವಾರ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಂಬೈನಿಂದಲೇ ವಿಡಿಯೋ ಒಂದನ್ನು ಬಿಡುಗಡೆಮಾಡಿರುವ ಅತೃಪ್ತ ಶಾಸಕರು ತಾವು ಒಗ್ಗಟ್ಟಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಅವರು ಯಾವುದೇ ಕಾರಣಕ್ಕೂ ಸರ್ಕಾರ ಉರುಳುವ ವರೆಗೆ ಬೆಂಗಳೂರಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಅತೃಪ್ತರು ಒಗ್ಗಟ್ಟಾಗಿ ಇದ್ದ ಹೊರತಾಗಿಯೂ ಅವರು ಆತಂಕದಲ್ಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹೊರಬೀಳುತ್ತಿದೆ. ಅದಕ್ಕೆ ಕಾರಣ ಸುಪ್ರೀಂ ತೀರ್ಪು, ಅನರ್ಹತೆ ಅಸ್ತ್ರ ಮತ್ತು ದೇವೇಗೌಡ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ನಾಯಕರು ಸಿಟ್ಟು!

ಇದನ್ನೂ ಓದಿ : ಮೈತ್ರಿ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಸ್ಥಿತಿ; ಇಂದು ಮಂಡನೆಯಾಗುತ್ತಾ ವಿಶ್ವಾಸಮತ?

ಅತೃಪ್ತರ ಮೇಲಿದೆ ಸುಪ್ರೀಂ ಕುಣಿಕೆ;

ಅತೃಪ್ತರ ಶಾಸಕರ ರಾಜೀನಾಮೆ ಅರ್ಜಿ ಕುರಿತು ಕಳೆದ ಬುಧವಾರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಅತೃಪ್ತರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ತೀರ್ಪು ನೀಡಿತ್ತು. ಇದು ಅತೃಪ್ತ ಶಾಸಕರಿಗೆ ಅಲ್ಪ ಮಟ್ಟದ ಸಮಾಧಾನ ನೀಡಿದ್ದರೂ ಈ ತೀರ್ಪಿನಲ್ಲಿ ಶಾಸಕಾಂಗ ಪಕ್ಷದ ನಾಯಕನ ವಿಪ್ ಅಧಿಕಾರ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾಗಿ ಸ್ಪಷ್ಟತೆ ಇರಲಿಲ್ಲ. ಇದೀಗ ಇದೆ ಅಂಶ ಅತೃಪ್ತರ ಆತಂಕಕ್ಕೆ ಕಾರಣವಾಗಿದೆ.ಏಕೆಂದರೆ ಮೈತ್ರಿ ನಾಯಕರು ವಿಪ್ ಪರಮಾಧಿಕಾರ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾಗಿ ಸ್ಪಷ್ಟ ವಿವರಣೆ ನೀಡುವಂತೆ ಸುಪ್ರೀಂ ಮೊರೆ ಹೋಗಿದ್ದಾರೆ. ಸೋಮವಾರ ಈ ಕುರಿತ ಅರ್ಜಿ ವಿಚಾರಣೆಗೆ ಬರುವುದು ಬಹುತೇಕ ಖಚಿತವಾಗಿದೆ. ಆದರೆ, ಅಕಸ್ಮಾತ್ ಸುಪ್ರೀಂ ಕೋರ್ಟ್ ವಿಪ್ ಪರಮಾಧಿಕಾರವನ್ನು ಎತ್ತಿಹಿಡಿದರೆ ಅತೃಪ್ತರಿಗೆ ಕಂಟಕ ತಪ್ಪಿದ್ದಲ್ಲ. ಪಕ್ಷಾಂತರ ಕಾಯ್ದೆಯ ಅಡಿಯಲ್ಲಿ ಎಲ್ಲಾ ಶಾಸಕರ ವಿರುದ್ಧ ಕ್ರಮ ತೆಗೆದುಕೊಂಡರೆ ಎಲ್ಲರೂ ಶಾಸಕ ಸ್ಥಾನದಿಂದಲೇ ಅನರ್ಹರಾಗುವುದು ಬಹುತೇಕ ಖಚಿತ. ಹೀಗಾಗಿ ಅತೃಪ್ತರು ಒಗ್ಗಟ್ಟಾಗಿದ್ದರೂ ಸಣ್ಣದೊಂದು ಭಯ ಕಾಡ್ತಿರುವುದು ಸುಳ್ಳಲ್ಲ ಎನ್ನಲಾಗುತ್ತಿದೆ.ಇದನ್ನೂ ಓದಿ : ನಂಬಿದವರೇ ಬೆನ್ನಿಗೆ ಚೂರಿಹಾಕಿದರೆಂದು ಸಿದ್ದರಾಮಯ್ಯ ಆಕ್ರೋಶ; ಡಿಕೆಶಿ ವಿರುದ್ಧವೂ ಬೇಸರ

ಸುಮ್ಮನೆ ಬಿಡ್ತಾರ ದೇವೇಗೌಡ, ಕುಮಾರಸ್ವಾಮಿ ಮತ್ತು ಸಿದ್ದು?;

ಇಂದು ಬಹುಮತ ಸಾಬೀತುಪಡಿಸದಿದ್ದರೆ ಮೈತ್ರಿ ಸರ್ಕಾರ ಬೀಳುವುದು ಬಹುತೇಕ ಖಚಿತ. ಹೀಗೆ ಮೈತ್ರಿ ಸರ್ಕಾರ ಬಿದ್ದರೆ ಅದಕ್ಕೆ ನೇರ ಕಾರಣ ಅತೃಪ್ತ ಶಾಸಕರು. ಹೀಗಾಗಿ ಸರ್ಕಾರ ಬಿದ್ರೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಮ್ಮನ್ನು ಸುಮ್ಮನೆ ಬಿಡ್ತಾರ? ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಎದುರುಹಾಕಿಕೊಂಡು ರಾಜಕೀಯ ಮಾಡೋಕಾಗುತ್ತಾ? ತಮ್ಮ ರಾಜಕೀಯ ಭವಿಷ್ಯ ಏನು? ಎಂಬ ಆತಂಕ ಅತೃಪ್ತರನ್ನು ಕಾಡುತ್ತಿದೆ.

ಇದೇ ಕಾರಣಕ್ಕೆ ಅವರು ಭಾನುವಾರ ತಮ್ಮ ಒಗ್ಗಟ್ಟಿನ ವಿಡಿಯೋ ಮಾಡಿ ಕಳುಹಿಸಿದರೂ ಯಾರ ಮುಖದಲ್ಲೂ ನಗುವಾಗಲಿ, ಆತ್ಮವಿಶ್ವಾಸವಾಗಲಿ ಇರಲಿಲ್ಲ. ಹೀಗಾಗಿ ಅತೃಪ್ತರು ಸೋಮವಾರವೂ ಅಧಿವೇಶನಕ್ಕೆ ಗೈರಾದರೆ ಸರ್ಕಾರ ಬೀಳುವುದು ಖಚಿತ. ಅದರ ಜೊತೆಗೆ ಅತೃಪ್ತರ ರಾಜಕೀಯ ಜೀವನವೂ ಅಸ್ತಂಗತವಾಗುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading