• Home
  • »
  • News
  • »
  • state
  • »
  • Kannada Rajyotsava: ಲಾಠಿ ಹಿಡಿದು ಕೆಲಸಕ್ಕೂ ಸೈ, ಮೈಕ್ ಹಿಡಿದು ಹಾಡಲೂ ಜೈ, ಯಾದಗಿರಿ ಎಸ್​ಪಿ ಕನ್ನಡ ಪ್ರೇಮ!

Kannada Rajyotsava: ಲಾಠಿ ಹಿಡಿದು ಕೆಲಸಕ್ಕೂ ಸೈ, ಮೈಕ್ ಹಿಡಿದು ಹಾಡಲೂ ಜೈ, ಯಾದಗಿರಿ ಎಸ್​ಪಿ ಕನ್ನಡ ಪ್ರೇಮ!

ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ

ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ

ಹೌದು ಈ ಪೊಲೀಸ್​ ಅಧಿಕಾರಿ ತಮ್ಮ ಕರ್ತವ್ಯದ ಜೊತೆ ಕನ್ನಡ ತಾಯಿಯ ಭುವನೇಶ್ವರಿ ಸೇವೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸದ ಜೊತೆ ಉಳಿದ ಸಮಯದಲ್ಲಿ ಕನ್ನಡ ನಾಡಿಗಾಗಿ ಕೆಲಸ ಮಾಡುತ್ತಿದ್ದಾರೆ.ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಪೊಲೀಸ್ ಕರ್ತವ್ಯದ ಜೊತೆ ನಾಡಿನ ಸೇವೆ ಮಾಡುತ್ತಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Yadgir, India
  • Share this:

ಯಾದಗಿರಿ(ನ.01): ಕೈಯಲ್ಲಿ ಲಾಠಿ ಹಿಡಿದು ಕೆಲಸಕ್ಕೂ ಸೈ, ಮತ್ತೊಂದೆಡೆ ಕೈಯಲ್ಲಿ ಮೈಕ್ ಹಿಡಿದು ಹಾಡು ಹಾಡಲೂ ಜೈ ಎನ್ನುವಂತೆ ಕರ್ತವ್ಯದ ಜೊತೆ ಕನ್ನಡ ನುಡಿ ಉಳಿಸಲು ತಮ್ಮದೆ ಸೇವೆ ಮಾಡುತ್ತಿದ್ದಾರೆ. ಹೌದು ಈ ಪೊಲೀಸ್​ ಅಧಿಕಾರಿ ತಮ್ಮ ಕರ್ತವ್ಯದ ಜೊತೆ ಕನ್ನಡ ತಾಯಿಯ ಭುವನೇಶ್ವರಿ ಸೇವೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸದ ಜೊತೆ ಉಳಿದ ಸಮಯದಲ್ಲಿ ಕನ್ನಡ ನಾಡಿಗಾಗಿ ಕೆಲಸ ಮಾಡುತ್ತಿದ್ದಾರೆ.ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಪೊಲೀಸ್ ಕರ್ತವ್ಯದ ಜೊತೆ ನಾಡಿನ ಸೇವೆ ಮಾಡುತ್ತಿದ್ದಾರೆ.


ಶಿಕ್ಷಕನ ಪುತ್ರನ ಕನ್ನಡ ಪ್ರೇಮ..!


ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟಾ ಗ್ರಾಮದ ಬಸವರಾಜ ಹಾಗೂ ಸುದಮ್ಮ ದಂಪತಿಯ ಐದನೇ ಪುತ್ರನಾಗಿ ಡಾ.ಸಿ.ಬಿ.ವೇದಮೂರ್ತಿ ಅವರು ಜನಿಸುತ್ತಾರೆ.ಬೆಳಗಟ್ಟಾ ಗ್ರಾಮದ ವೇದಮೂರ್ತಿ ಅವರು ಈಗ ಯಾದಗಿರಿಯಲ್ಲಿ ಕಳೆದ ಒಂದುವರೆ ವರ್ಷದಿಂದ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ವೇದಮೂರ್ತಿ ಅವರ ತಂದೆ ಬಸವರಾಜ ಅವರು ಹೈಸ್ಕೂಲ್ ಶಾಲೆಯ ಶಿಕ್ಷಕಿ, ಪ್ರಾಥಮಿಕ ಶಿಕ್ಷಣ ಸರಕಾರಿ ಶಾಲೆಯಲ್ಲಿ ,ಪ್ರೌಢ ಶಿಕ್ಷಣ ಅನುದಾನಿತ ಶಾಲೆಯಲ್ಲಿ ಓದುತ್ತಾರೆ.


ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


ಬಾಲ್ಯದಲ್ಲಿ ಕನ್ನಡದ ಬಗ್ಗೆ ಆಸಕ್ತಿ..!


ರೆಡಿಯೋ ಕಾರ್ಯಕ್ರಮ ಕೇಳುತ್ತಾ ಹಾಡುಗಳನ್ನು ಕಲಿಯುತ್ತಾರೆ.ಪುಸ್ತಕಗಳನ್ನು ಓದುವ ಅಭಿರುಚಿ ಇರುತ್ತದೆ. ಉನ್ನತ ವ್ಯಾಸಂಗ ಮುಗಿಸಿ ನಂತರ ಪಶು ವೈದ್ಯರಾಗಿ ಸೇವೆ ಮಾಡಿ ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಡಿವೈಸ್ಪಿ ನೌಕರಿ ಗಿಟ್ಟಿಸಿಕೊಳ್ಳುತ್ತಾರೆ. ನಂತರ ಎಸ್ಪಿಯಾಗಿ ವಿವಿಧೆಡೆ ಸೇವೆ ಮಾಡುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರುನಲ್ಲಿ ಎಸ್ಪಿಯಾಗಿ ಒಂದುವರೆ ವರ್ಷ ಸೇವೆ.ನಂತರ ಈಗ ಯಾದಗಿರಿಯಲ್ಲಿ ಕಳೆದ ಒಂದುವರೆ ವರ್ಷದಿಂದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ.


ಕರ್ತವ್ಯದಲ್ಲಿರುವಾಗಲೇ ಕನ್ನಡ ಪುಸ್ತಕಗಳ ವಿತರಣೆ


ಕರ್ತವ್ಯದಲ್ಲಿರುವಾಗಲೇ ಕನ್ನಡ ಪುಸ್ತಕಗಳ ವಿತರಣೆ, ಶಾಲೆ ಹಾಗೂ ಕಾಲೇಜ್ ಗಳಿಗೆ ತೆರಳಿ ಕನ್ನಡ ಸಾಹಿತ್ಯ ಪುಸ್ತಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಾ ಕನ್ನಡ ನಾಡು,ನುಡಿ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.ರಾಯಚೂರಿನಲ್ಲಿ ಸೇವೆ ಸಲ್ಲಿಸುವಾಗ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.ಕೊವೀಡ್ ಸಂದರ್ಭದಲ್ಲಿ ಕೂಡ ಕೊವೀಡ್ ಜಾಗೃತಿ ಹಾಡುಗಳನ್ನು ಹಾಡಿ ಕೊವೀಡ್ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.


ಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಕನ್ನಡ ನಾಡು ನುಡಿ ಬಗ್ಗೆ ಜಾಗೃತಿ


ಯಾದಗಿರಿ ಜಿಲ್ಲೆಯಲ್ಲಿ ಕೂಡ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಕನ್ನಡ ನಾಡು ನುಡಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕೆಂದು ಹೀಗೆ ಹಲವು ರೀತಿ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿವರಗೆ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಅವರಿಗೆ ಕನ್ನಡ ಪುಸ್ತಕಗಳನ್ನು ವಿತರಣೆ ಮಾಡುತ್ತಾ ಕನ್ನಡ ಅಭಿಮಾನ ಮೆರೆದಿದ್ದಾರೆ.


ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು,ಒಳಿತು ಮಾಡು ಮನುಸ ಸೇರಿದಂತೆ ಹಲವು ಹಾಡುಗಳನ್ನು ಹಾಡುತ್ತಾರೆ. ಕೋಟಿ ಕಂಠಗಾಯನ ಕಾರ್ಯಕ್ರಮದಲ್ಲಿ ಕೂಡ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌ ಅವರು ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕೆಂದು ಕೈಯಲ್ಲಿ ಮೈಕ್ ಹೀಡಿದು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.


ಕರ್ತವ್ಯದ ಜೊತೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌ ಅವರು ಕೈಲಾದಷ್ಟು ನಾಡಿನ ಸೇವೆ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌ ಅವರು ಮಾತನಾಡಿ,ನಮಗೆ ನಾಡು ನುಡಿ ನೆಲ,ಜಲ ಮಾತೃ ಭಾಷೆ ಬಗ್ಗೆ ಗೌರವ ಇರಬೇಕು.ಕನ್ನಡ ನಾಡು ನುಡಿ ಉಳಿಸುವ ಕಾರ್ಯ ಮಾಡಬೇಕೆಂದರು.

Published by:Precilla Olivia Dias
First published: