ಕರ್ನಾಟಕ ರಾಜ್ಯಾದ್ಯಂತ ವರ್ಷದ ಮೊದಲ ಮಳೆಯ ಸಿಂಚನ: ಇಂದಿನಿಂದ ಮೂರು ದಿನ ಸಾಧಾರಣ ಮಳೆ ಸಾಧ್ಯತೆ

ಇನ್ನು, ಮಂಡ್ಯ, ಮೈಸೂರು, ಉಡುಪಿ, ಚಾಮರಾಜನಗರ ಸೇರಿದಂತೆ ದಕ್ಷಿಣ ಭಾಗದಲ್ಲೂ ಮಳೆಯಾಗಿದೆ. ಇಂದಿನಿಂದ ರಾಜ್ಯಾದ್ಯಂತ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಬಿಸಿಲ ಪ್ರಮಾಣದ ಏರಿಕೆ ಹಾಗೂ ಹವಾಮಾನ ಬದಲಾವಣೆಯಿಂದ ಈ ಅವಧಿಯಲ್ಲಿ ವರುಣನ ಆರ್ಭಟವಿದೆ ಎಂದೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಫೆ.03): ಇಂದು ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಬರದ ಜಿಲ್ಲೆಗಳಾದ ಬಾಗಲಕೋಟೆ, ರಾಯಚೂರು, ಬೆಳಗಾವಿ, ವಿಜಯಪುರ, ಗದಗದಲ್ಲಿ ಅತಿಯಾದ ಮಳೆಯಾಗಿದೆ. ನೆರೆಯ ರಾಜ್ಯ ಮಹಾರಾಷ್ಟ್ರದಿಂದ ಕರಾವಳಿಯ ಭಾಗದವರೆಗೂ ಜೋರು ಗಾಳಿ ಬೀಸುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

  ಕಳೆದ ಮೂರು ದಿನಗಳಿಂದ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಸೇರಿದಂತೆ ದಕ್ಷಿಣ ಭಾಗದಲ್ಲಿ ತುಂತುರು ಮಳೆಯಾತ್ತಿದೆ. ಈಗಾಗಲೇ ಬೆಳಗಾವಿ, ದಾವಣಗೆರೆ, ವಿಜಯಪುರ, ಮೈಸೂರು, ಚಿಕ್ಕಮಗಳೂರು, ಕೊಪ್ಪಳ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವಡೆ ಉತ್ತಮ ಮಳೆಯಾಗಿದೆ.

  ಇನ್ನು, ಮಂಡ್ಯ, ಮೈಸೂರು, ಉಡುಪಿ, ಚಾಮರಾಜನಗರ ಸೇರಿದಂತೆ ದಕ್ಷಿಣ ಭಾಗದಲ್ಲೂ ಮಳೆಯಾಗಿದೆ. ಇಂದಿನಿಂದ ರಾಜ್ಯಾದ್ಯಂತ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಬಿಸಿಲ ಪ್ರಮಾಣದ ಏರಿಕೆ ಹಾಗೂ ಹವಾಮಾನ ಬದಲಾವಣೆಯಿಂದ ಈ ಅವಧಿಯಲ್ಲಿ ವರುಣನ ಆರ್ಭಟವಿದೆ ಎಂದೇಳಲಾಗುತ್ತಿದೆ.

  ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್​ ಕಾರ್ಯಕ್ರಮ: ತನ್ನ ಮಗು ಎತ್ತಿಕೊಂಡು ಕೆಲಸ ಮಾಡಿದ ಮಹಿಳಾ ಕಾನ್ಸ್​ಟೇಬಲ್​

  ಕರ್ನಾಟಕ ಮಾತ್ರವಲ್ಲದೇ ಒರಿಸ್ಸಾ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಭಾರೀ ಪ್ರಮಾಣದ ಅಕಾಲಿಕ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಗುಡುಗು ಸಹಿತ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಅಲ್ಲದೆ, ರಾಜ್ಯದ ಹಲವೆಡೆ ವಿದ್ಯುತ್​ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದ್ದು, ಹವಾಮಾನ ಇಲಾಖೆ ಪ್ರಸ್ತುತ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.

  ಇಲ್ಲಿನ ಬೊಲಂಗಿರ್ ಮತ್ತು ಕಂಧಮಲ್​, ಪುರಿ, ಜಾರ್ಸುಗುಡಾ, ಸಂಬಲ್ಪುರ, ಬರ್ಗಾರ್, ಡಿಯೋಗರ್, ಕಿಯೋಂಜರ್, ಮಯೂರ್ ಬಂಜ್, ಬೌಂದ್, ಅಂಗುಲ್, ದೇನ್ಕನಲ್, ಬಲಸೋರ್, ಭದ್ರಕ್, ಜೈಪುರ, ಕೇಂದ್ರಾಪರ, ಜಗತ್​ಸಿಂಗ್​ಪುರ, ಕಟಕ್, ನಯಾಗರ್, ಕಂಧಮಲ್ ಮತ್ತು ಸುಂದರ್​​ಗರ್​ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
  First published: