ಮೈಸೂರಿನಲ್ಲಿ ಭಾರೀ ಮಳೆಗೆ 4 ಮನೆಗಳು ಕುಸಿತ; ಹಾಸನದಲ್ಲೂ ವರುಣನ ಆರ್ಭಟ ಹೆಚ್ಚಳ
Mysuru Rain Updates: ಮೈಸೂರಿನ ಹುಣಸೂರಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಕೋಣನ ಹೊಸಹಳ್ಳಿ, ದೊಡ್ಡಹೆಜ್ಜೂರು, ಕೊಳವಿಗೆ, ಬಿಲ್ಲೇನಹೊಸಹಳ್ಳಿ, ಹನಗೋಡು ಗ್ರಾಮಗಳಿಗೆ ಸೂಚನೆ ನೀಡಲಾಗಿದೆ.
news18-kannada Updated:August 6, 2020, 9:17 AM IST

ಮೈಸೂರಿನಲ್ಲಿ ಕುಸಿದ ಮನೆಗಳು
- News18 Kannada
- Last Updated: August 6, 2020, 9:17 AM IST
ಮೈಸೂರು (ಆ. 6): ಮೈಸೂರಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸುರಿದ ಭಾರೀ ಮಳೆಯಿಂದ ಮೈಸೂರಿನ ಹುಣಸೂರು ತಾಲೂಕಿನಲ್ಲಿ ನಾಲ್ಕು ಮನೆಗಳು ಕುಸಿದಿವೆ. ಮೈಸೂರಿನ ಪಿರಿಯಾಪಟ್ಟಣದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಸಿದ್ದ ಗೋಲ್ಡನ್ ಟೆಂಪಲ್ಗೆ ತೆರಳುವ ಸೇತುವೆ ಬಂದ್ ಆಗಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾಗಿರುವುದರಿಂದ ಪಿರಿಯಾಪಟ್ಟಣದ ಕೊಪ್ಪ ಗ್ರಾಮದಲ್ಲಿ ಸೇತುವೆ ಮುಳುಗಡೆಯಾಗಿದೆ. ಗೋಲ್ಡನ್ ಟೆಂಪಲ್ಗೆ ತೆರಳಲು ಪರ್ಯಾಯ ಮಾರ್ಗ ಬಳಸುವ ಸೂಚನೆ ನೀಡಲಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭತ್ತದ ಗದ್ದೆಗೆ ನೀರು ನುಗ್ಗಿದೆ.
ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್.ಡಿ. ಕೋಟೆಯ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯದಲ್ಲಿ 45 ಸಾವಿರ ಕ್ಯೂಸೆಕ್ ಒಳಹರಿವು ಉಂಟಾಗಿದ್ದು, ಜಲಾಶಯದಿಂದ 56 ಸಾವಿರ ಕ್ಯೂಸೆಕ್ ನೀರು ಹೊರಹರಿದಿದೆ. ಇದರಿಂದಾಗಿ ಕಬಿನಿ ಜಲಾಶಯದ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೆಚ್.ಡಿ.ಕೋಟೆ ಮಾದಾಪುರ ಸೇತುವೆ ಮುಳುಗಡೆಯಾಗಿದೆ. ನಂಜನಗೂಡಿನಲ್ಲಿ ಕಪಿಲಾ ನದಿ ಉಕ್ಕಿ ಹರಿದು, ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. 16 ಕಾಲು ಕಂಬದ ಮಂಟಪವು ಮುಳುಗಡೆಯಾಗಿದೆ. ಮೇದಾರ್ಗೇರಿ, ಕುರುಬಗೇರಿ, ಸರಸ್ವತಿ ಕಾಲೋನಿ ಬಡಾವಣೆಗಳಿಗೆ ನೀರು ನುಗ್ಗಿದೆ. ನದಿ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿವೆ. ಇದನ್ನೂ ಓದಿ: Chikmagalur Rain: ಮಲೆನಾಡಿನ ಮಳೆಗೆ ಚಿಕ್ಕಮಗಳೂರಿನಲ್ಲಿ ಮೊದಲ ಬಲಿ; ಮೂಡಿಗೆರೆ-ಮಂಗಳೂರು ಸಂಚಾರ ಸ್ಥಗಿತ
ಮೈಸೂರಿನ ಹುಣಸೂರು ತಾಲ್ಲೂಕಿನಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ನಾಲ್ಕು ಹೆಂಚಿನ ಮನೆಗಳು ಕುಸಿತವಾಗಿವೆ. ಹನಗೂಡು, ಬಿ.ಆರ್.ಕಾವಲ್, ಕಿರಂಗೂರು ಗ್ರಾಮಗಳಲ್ಲಿ ಮನೆ ಕುಸಿತವಾಗಿದೆ. ಹುಣಸೂರು ತಾಲ್ಲೂಕಿನಾದ್ಯಂತ ಬೆಳೆಹಾನಿಯಾಗಿದೆ. ಶುಂಠಿ, ಜೋಳ, ಮೆಕ್ಕೆಜೋಳ ಬೆಳೆಗಳು ಹಾನಿಯಾಗಿವೆ. ಪರಿಹಾರಕ್ಕಾಗಿ ಸಂತ್ರಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೈಸೂರಿನ ಹುಣಸೂರಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ನದಿಪಾತ್ರದ ಜನರಿಗೆ ಪೊಲೀಸರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಮೈಕ್ನಲ್ಲಿ ಘೋಷಣೆ ಮಾಡುತ್ತಾ ಪೊಲೀಸರು ಸೂಚನೆ ನೀಡಿದ್ದಾರೆ. ಕೋಣನ ಹೊಸಹಳ್ಳಿ, ದೊಡ್ಡಹೆಜ್ಜೂರು, ಕೊಳವಿಗೆ, ಬಿಲ್ಲೇನಹೊಸಹಳ್ಳಿ, ಹನಗೋಡು ಗ್ರಾಮಗಳಿಗೆ ಸೂಚನೆ ನೀಡಲಾಗಿದೆ. ಮೈಸೂರಿನ ಹುಣಸೂರಿನಲ್ಲಿ ಲಕ್ಷಣತೀರ್ಥ ನದಿ ಉಕ್ಕಿ ಹರಿದಿದೆ. ಲಕ್ಷ್ಮಣತೀರ್ಥ ನದಿ ಹನಗೂಡು ಅಣೆಹಟ್ಟು ಬಳಿ ಪ್ರವಾಹ ಭೀತಿ ಎದುರಾಗಿದೆ. ಹನಗೂಡು ಕಿರು ಅಣೆಕಟ್ಟೆ ಸಂಪೂರ್ಣ ಮುಳುಗಡೆಯಾಗಿದೆ.
ಹಾಸನದಲ್ಲೂ ಧಾರಾಕಾರ ಮಳೆ:ಹಾಸನ ಜಿಲ್ಲೆಯಲ್ಲಿ ಎರಡು ದಿನಗಳಿಂದ ಎಡಬಿಡದೆ ಸುರಿದ ಭಾರೀ ಮಳೆಯಿಂದ ರೈತರು ಖುಷಿಯಾಗಿದ್ದಾರೆ. ನಿನ್ನೆ ರಾತ್ರಿಯಿಂದ ಮಳೆ ಕೊಂಚ ಬಿಡುವು ಪಡೆದಿದೆ. ಕಟ್ಟೆಪುರ ಜಲಾಶಯಕ್ಕೆ ಹೆಚ್ಚಿದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಟ್ಟೆಪುರ ಜಲಾಶಯವನ್ನು ಕೆಆರ್ಎಸ್ ಡ್ಯಾಂ ನಿರ್ಮಿಸುವುದಕ್ಕೂ ಮುನ್ನ ಮೈಸೂರು ಮಹಾರಾಜರು ನಿರ್ಮಿಸಿದ್ದರು. ಎರಡು ದಿನಗಳಿಂದ ಮಳೆ ಬೀಳುತ್ತಿದ್ದರಿಂದ ರೈತರ ಮೊಗದಲ್ಲಿ ಸಂತಸ ಅರಳಿದೆ.
ಇದನ್ನೂ ಓದಿ: Mumbai Rain: ಮಹಾ ಮಳೆಗೆ ತತ್ತರಿಸಿದ ಮುಂಬೈ: 15 ವರ್ಷಗಳ ನಂತರ ಮತ್ತೆ ಎದುರಾಯ್ತು ಪ್ರವಾಹ ಭೀತಿ
ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಹೇಮಾವತಿ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಹೇಮಾವತಿ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಹೇಮಾವತಿ ಒಳಹರಿವು 36849 ಕ್ಯೂಸೆಕ್ಗೆ ಏರಿಕೆಯಾಗಿದೆ. ನಿನ್ನೆ ಬೆಳಗ್ಗೆ 24185 ಕ್ಯೂಸೆಕ್ನಷ್ಟಿದ್ದ ಒಳಹರಿವು ಇಂದು ಹೆಚ್ಚಳವಾಗಿದೆ.
ಸಕಲೇಶಪುರದಲ್ಲಿ ರಸ್ತೆಗೆ ಮರ ಬಿದ್ದಿದ್ದನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ಕೆಲವು ಹೊತ್ತು ರಸ್ತೆ ಸಂಚಾರ ಬಂದ್ ಆಗಿತ್ತು. ಮರ ತೆರವುಗೊಳಿಸಿದ ಬಳಿಕ ಎಂದಿನಂತೆ ವಾಹನಗಳ ಸಂಚಾರ ಮುಂದುವರೆದಿದೆ. ಹೆಚ್ಚಾಗಿ ಬೀಸುತ್ತಿರುವ ಗಾಳಿಯಿಂದಾಗಿ ಮನೆಯ ಮೇಲ್ಚಾವಣಿ ಶೀಟ್ ಗಳು ನೆಲಕ್ಕುರುಳಿವೆ. ಸಕಲೇಶಪುರದಲ್ಲಿನ ರಾಜು ಎಂಬುವರಿಗೆ ಸೇರಿದ ಮನೆಯ ಶೀಟ್ ಗಳು ಗಾಳಿಗೆ ಹಾರಿ ಹೋಗಿದೆ.
ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್.ಡಿ. ಕೋಟೆಯ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯದಲ್ಲಿ 45 ಸಾವಿರ ಕ್ಯೂಸೆಕ್ ಒಳಹರಿವು ಉಂಟಾಗಿದ್ದು, ಜಲಾಶಯದಿಂದ 56 ಸಾವಿರ ಕ್ಯೂಸೆಕ್ ನೀರು ಹೊರಹರಿದಿದೆ. ಇದರಿಂದಾಗಿ ಕಬಿನಿ ಜಲಾಶಯದ ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೆಚ್.ಡಿ.ಕೋಟೆ ಮಾದಾಪುರ ಸೇತುವೆ ಮುಳುಗಡೆಯಾಗಿದೆ. ನಂಜನಗೂಡಿನಲ್ಲಿ ಕಪಿಲಾ ನದಿ ಉಕ್ಕಿ ಹರಿದು, ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. 16 ಕಾಲು ಕಂಬದ ಮಂಟಪವು ಮುಳುಗಡೆಯಾಗಿದೆ. ಮೇದಾರ್ಗೇರಿ, ಕುರುಬಗೇರಿ, ಸರಸ್ವತಿ ಕಾಲೋನಿ ಬಡಾವಣೆಗಳಿಗೆ ನೀರು ನುಗ್ಗಿದೆ. ನದಿ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿವೆ.