LIVE NOW

Karnataka Rains LIVE: ವಿರಾಜಪೇಟೆಯ ತೋರಾ ಗುಡ್ಡ ಕುಸಿತ; ಈವರೆಗೆ 4 ಮೃತದೇಹ ಪತ್ತೆ; ಇನ್ನೂ ನಾಲ್ವರಿಗಾಗಿ ಶೋಧ

Karnataka Rains Live Updates: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Kannada.news18.com | August 12, 2019, 8:53 PM IST
facebook Twitter Linkedin
Last Updated August 12, 2019
auto-refresh
Karnataka Rains Live: ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಾಜ್ಯದಲ್ಲಿ ಒಟ್ಟು 80 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. Read More
8:53 pm (IST)

ಕೊಡಗಿನಲ್ಲಿ ಮಹಾಮಳೆಗೆ ಈವರೆಗೆ 9 ಬಲಿ

ಅಧಿಕೃತ 9 ಮಂದಿ ಮಳೆಯಿಂದಾಗಿ ಸಾವನ್ನಪ್ಪಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ‌

7ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ

ಆಗಸ್ಟ್ 9ರಂದು ಮಡಿಕೇರಿ ತಾಲ್ಲೂಕಿನ ಕೊರಂಗಾಲದಲ್ಲಿ ಗುಡ್ಡಕುಸಿದು 5 ಮಂದಿ ಸಾವು.

ಯಶವಂತ್(40),ಬಾಲಕೃಷ್ಣ(50), ಯಮುನ(45),ಉದಯ್(40),ರಾಜು(56)

ಕೊರಂಗಾಲ ಗ್ರಾಮದಲ್ಲಿ ಗುಡ್ಡಕುಸಿತಕ್ಕೆ ಬಲಿಯಾದವರು.

ಆಗಸ್ಟ್ 10ರಂದು ಗುಡ್ಡಕುಸಿದು ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ 2 ಸಾವು.

ಮಮತ(45),ಲಿಖಿತಾ(14) ತೋರ ಗ್ರಾಮದಲ್ಲಿ ಗುಡ್ಡಕುಸಿತಕ್ಕೆ ಬಲಿಯಾದವರು

ಆಗಸ್ಟ್ 12ರಂದು ಮಣ್ಣಿನಡಿಯಲ್ಲಿ ಸಿಲುಕಿದ್ದ 8ಮಂದಿಯಲ್ಲಿ 1 ಮಹಿಳೆ ಶವ ಪತ್ತೆ.

ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಅನಸೂಯ(35) ಶವವಾಗಿ ಪತ್ತೆ.

ತೋರ ಗ್ರಾಮದಲ್ಲಿ ಇನ್ನು 7 ಮಂದಿ ನಾಪತ್ತೆಯಾಗಿರುವ ತಹಶಿಲ್ದಾರ್ ಪುರಂದರ್ ಅಧಿಕೃತ ಮಾಹಿತಿ.

ಆಗಸ್ಟ್ 12ರಂದು ಮಡಿಕೇರಿ ತಾಲ್ಲೂಕಿನ ಪರಂಬು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಓರ್ವ ಸಾವು.

ಕುಂಞಣ್ಣ(68) ಶವವಾಗಿ ಪತ್ತೆ.

ಒಟ್ಟು ಕೊಡಗಿನಲ್ಲಿ ಮಳೆಗೆ 9 ಮಂದಿ ಸಾವು, 7ಮಂದಿ ನಾಪತ್ತೆ.

ನ್ಯೂಸ್‌18ಗೆ ವಿರಾಜಪೇಟೆ ತಹಶಿಲ್ದಾರ್ ಪುರಂದರ್ ಮಾಹಿತಿ.

Load More