LIVE NOW

Karnataka Rains LIVE: ಉತ್ತರ ಕರ್ನಾಟಕದಲ್ಲಿ ಪ್ರವಾಹ; ಮೃತರ ಸಂಖ್ಯೆ 54ಕ್ಕೇರಿಕೆ

Karnataka Rains Live Updates: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Kannada.news18.com | August 13, 2019, 9:21 PM IST
facebook Twitter Linkedin
Last Updated August 13, 2019
auto-refresh
Karnataka Rains Live: ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಾಜ್ಯದಲ್ಲಿ ಒಟ್ಟು 80 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದ್ದು, 2,738 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದೆ. ಇದುವರೆಗೂ ಸುಮಾರು 7 ಲಕ್ಷ ಜನರನ್ನು ರಕ್ಷಿಸಲಾಗಿದೆ. 40 ಸಾವಿರ ಮನೆಗಳು ಹಾನಿಗೊಳಗಾಗಿವೆ. ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ...
8:25 pm (IST)


ಮಲಪ್ರಭಾ ನದಿ ಪ್ರವಾಹ ಹಿನ್ನಲೆ..

ಅಂಗಡಿ,ಮನೆ ಪ್ರವಾಹಕ್ಕೆ ತುತ್ತಾಗಿದ್ದಕ್ಕೆ ಮನನೊಂದು ವಯೋವೃದ್ಧೆ  ನದಿಗೆ ಜಿಗಿದಿರುವ ಶಂಕೆ...

ವ್ಯಾಪಾರದ ಮೂಲಕ ಬದುಕು ಸಾಗಿಸುತ್ತಿದ್ದ ವಯೋವೃದ್ಧೆ ವ್ಯಾಪಾರಸ್ಥೆ...

ರೇಣುಕಾ ಯರನಾಳ (60) ಮಲಪ್ರಭಾ ನದಿಗೆ ಜಿಗಿದಿರುವ ವಯೋವೃದ್ಧೆ ವ್ಯಾಪಾರಸ್ಥೆ...

ಎನ್ ಡಿ ಆರ್ ಎಫ್ 24,ಜನ,ಎಸ್ ಡಿ ಆರ್ ಎಫ್ 5ಜನ  ತಂಡದಿಂದ ಎರಡು ಬೋಟ್ ಮೂಲಕ ತೀವ್ರ  ಹುಡುಕಾಟ..

7ಜನ ಕಾರ್ಯಾಚರಣೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಾಥ್..

8ಗಂಟೆಯಿಂದ ತೀವ್ರ ಶೋಧ...

ನಾಳೆಯೂ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಕೆ..

ಸೇತುವೆ ಬಳಿ  ಟಾರ್ಚ್,ಚಪ್ಪಲಿ,ಚೆಂಬು ಪತ್ತೆ ಹಿನ್ನೆಲೆ ನದಿಗೆ ಜಿಗಿದಿರೋ ಶಂಕೆ..

ಕುಟುಂಬಸ್ಥರಲ್ಲಿ ಮನೆಮಾಡಿದ ಆತಂಕ...

ಸೇತುವೆ ಬಳಿ ಜಮಾಯಿಸಿದ ಗ್ರಾಮಸ್ಥರು...

ರಾಮಥಾಳ ಗ್ರಾಮದ ವ್ಯಾಪಾರಸ್ಥೆ ರೇಣುಕಾ..

ಕಮತಗಿ ಬಳಿಯ ಸೇತುವೆಯಿಂದ ನದಿಗೆ ಜಿಗಿದ ವ್ಯಾಪಾರಸ್ಥೆ..

ಸ್ಥಳಕ್ಕೆ ಸಂಸದ ಪಿ ಸಿ ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ತಹಶೀಲ್ದಾರ್, ಉಪವಿಭಾಗಾಧಿಕಾರಿ ಭೇಟಿ ಪರಿಶೀಲನೆ.

ಬಾಗಲಕೋಟೆ ಜಿಲ್ಲೆ ರಾಮಥಾಳ ಪ್ರವಾಹ ಪೀಡಿತ ಗ್ರಾಮ..

7:46 pm (IST)

ಮಲೆನಾಡಲ್ಲಿ ಇನ್ನೂ ನಿಂತಿಲ್ಲ ನಿರಾಶ್ರಿತರ ರಕ್ಷಣೆ

ಅಗ್ನಿಶಾಮಕ ಸಿಬ್ಬಂದಿಗಳಿಂದ 12 ಜನರ ರಕ್ಷಣೆ

ಮೂಡಿಗೆರೆಯ ಆಲೇಖಾನ್ ಹೊರಟ್ಟಿಯಲ್ಲಿ ರಕ್ಷಣೆ

ಹೊರಬರಲಾಗದೆ ಕಳೆದೊಂದು ವಾರದಿಂದ ಗ್ರಾಮದಲ್ಲೇ ಇದ್ದ ಜನ

ಗ್ರಾಮದ ಸುತ್ತಲೂ ಗುಡ್ಡ ಕುಸಿದಿದ್ರಿಂದ ಗ್ರಾಮದಲ್ಲೇ ಇದ್ರು

ಇಬ್ಬರು ರೋಗಿಗಳನ್ನ ಹೊತ್ತುಕೊಂಡೇ ಬಂದ ಅಗ್ನಿಶಾಮಕ ಸಿಬ್ಬಂದಿ

ಇಬ್ಬರನ್ನ ಸುಮಾರು 2 ಕಿ.ಮೀ. ಹೊತ್ತುಕೊಂಡೇ ಬಂದ ಸಿಬ್ಬಂದಿಗಳು

ದುರ್ಗಮ ಹಾದಿಯಲ್ಲಿ ತೆರಳಿ ಸುರಕ್ಷಿತ ಸ್ಥಳಕ್ಕೆ ತಂದ ಸಿಬ್ಬಂದಿಗಳು

ಮನೆಯಲ್ಲಿದ್ದ ನಾಯಿಗಳನ್ನು ರಕ್ಷಿಸಿದ ಸಿಬ್ಬಂದಿ

ಇದೇ ಗ್ರಾಮದಲ್ಲಿ ಸೈನಿಕರು 76 ಜನರನ್ನ ರಕ್ಷಿಸಿದ್ರು

ಅಂದು ನಾವು ಇಲ್ಲೇ ಸಾಯ್ತೀವಿ ಬರಲ್ಲ ಎಂದಿದ್ರು

ಸ್ಥಳೀಯರ ಮನವಿಯಿಂದ ಇಂದು 12 ಜನರ ರಕ್ಷಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

7:12 pm (IST)

ಸಂಕಷ್ಟದಲ್ಲಿದ್ದ ಆಲೇಖಾನ್ ಹೊರಟ್ಟಿ ಗ್ರಾಮದ 8 ಜನರ ರಕ್ಷಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗ್ರಾಮ

ಅಗ್ನಿಶಾಮಕ ಸಿಬ್ಬಂದಿಯಿಂದ 8 ಮಂದಿ ರಕ್ಷಣೆ

ದುರ್ಗಮ ಹಾದಿಯಲ್ಲಿ ನಡೆದು ಗ್ರಾಮಕ್ಕೆ ತಲುಪಿದ್ದ ಅಗ್ನಿಶಾಮಕ ಸಿಬ್ಬಂದಿ 

ಸಂತ್ರಸ್ಥರನ್ನ ಅಗ್ನಿಶಾಮಕ ವಾಹನದಲ್ಲಿ ಕರೆತಂದ ಸಿಬ್ಬಂದಿ

ಮೊನ್ನೆ ಇದೇ ಗ್ರಾಮದ 76 ಜನರನ್ನು ರಕ್ಷಣೆ ಮಾಡಲಾಗಿತ್ತು

ನಾವು ಮನೆ ಬಿಟ್ಟು ಬರಲ್ಲ ಎಂದು 8 ಜನ ಅಲ್ಲೇ ಇದ್ರು 

ಕೊನೆಗೂ ಮನವೊಲಿಸಿ 8 ಜನರನ್ನ ಕರೆತಂದ ಅಗ್ನಿಶಾಮಕ ಸಿಬ್ಬಂದಿ

ಬರಲ್ಲ ಎಂದು ಮನೆಯಲ್ಲಿದ್ದ ಎಂಟು ಜನರ ರಕ್ಷಣೆ 

ಯುವತಿವೊಬ್ಬಳು ಅಗ್ನಿಶಾಮಕ ಸಿಬ್ಬಂದಿ ಜೊತೆ ತೆರಳಿ ಅಜ್ಜ, ಅಜ್ಜಿ ಮನವೊಲಿಸಿ ಕರೆತಂದ್ಲು

ಅಜ್ಜ, ಅಜ್ಜಿ ಯನ್ನ ಕರೆತರೋಕೆ 8 ಕಿ.ಮೀ ಅಗ್ನಿಶಾಮಕ ಸಿಬ್ಬಂದಿ ಜೊತೆ ನಡೆದುಹೋದ ಯುವತಿ 
ಕೊನೆಗೂ ಮನವೊಲಿಸಿ ಅಜ್ಜ,ಅಜ್ಜಿ ಯನ್ನ ಕರೆತಂದ ಯುವತಿ

ಮನೆ ಬಿಟ್ಟು ಬರಲ್ಲ ಅಂತಾ ಕೂತಿದ್ದ ವೃದ್ಧರು 

ಗ್ರಾಮಕ್ಕೆ ಸಂಪರ್ಕ ಕಲ್ಪಿಸೋ ರಸ್ತೆ, ಕಾಫಿ ತೋಟ ಸಂಪೂರ್ಣ ನಾಶವಾಗಿತ್ತು

7:12 pm (IST)

ಪತ್ತೆಯಾಗಿಲ್ಲ ಮಧುಗುಂಡಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ
ನೋಡನೋಡುತ್ತಿದ್ದಂತೆ ಮಣ್ಣಿನಲ್ಲಿ ಊತಿ ಹೋಗಿದ್ದ ವ್ಯಕ್ತಿ 
ಮಧುಗುಂಡಿ ಗ್ರಾಮದ ನಾಗಪ್ಪಗೌಡ ಮೃತ ವ್ಯಕ್ತಿ
ನ್ಯೂಸ್ 18 ಜೊತೆ ಮಾತಾನಾಡುವಾಗ ಮಾವನನ್ನ ನೆನೆದು ಬಾವುಕರಾದ ಸೊಸೆ
ನಾಗಪ್ಪಗೌಡ ಸೊಸೆ ಶಾರದ ಕಣ್ಣೀರು
ನೋಡನೋಡುತ್ತಿದಂತೆ ನಮ್ಮ ಮಾವ ಮಾಯವಾದ್ರು
ಗುಡ್ಡ ಕುಸಿದು ಒಂದೇ ಸಲ ಜೋರಾಗಿ ಮನೆಗೆ ನುಗ್ಗೇ ಬಿಡ್ತು 
ಮಾವ ಮನೆಯಿಂದ ಹೊರ ಬರ್ತಿದ್ರು ಅಷ್ಟರಲ್ಲಿ ಮಣ್ಣು ಅವರನ್ನ ಮುಚ್ಚುಕೊಳ್ತು
ಮಾವನನ್ನೇ ಉಳಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ರು ಉಳಿಸಿಕೊಳ್ಳೊಕೆ ಆಗಿಲ್ಲ
ನಮ್ಮ ಮನೆ, ಕಾಫಿ ಬೆಳೆ ಎಲ್ಲಾ ಸರ್ವನಾಶವಾಗಿದೆ
ನಮ್ಮ ಬದುಕು ಸರ್ವನಾಶವಾಯ್ತು
ನಮ್ಮ ಮಾವನ ಮೃತದೇಹ ಬೇಗಾ ಹುಡುಕಿಕೊಡಿ ಎಂದು ಪೋಲೀಸರಿಗೆ ಮನವಿ ಮಾಡಿದ ಮಹಿಳೆ

 

Load More