• Home
  • »
  • News
  • »
  • state
  • »
  • Mangalore Rain: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ನದಿಗಳಲ್ಲಿ ನೀರಿನ ಮಟ್ಟ ಏರಿಕೆ

Mangalore Rain: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ನದಿಗಳಲ್ಲಿ ನೀರಿನ ಮಟ್ಟ ಏರಿಕೆ

ಮಂಗಳೂರಿನಲ್ಲಿ ಮಳೆ

ಮಂಗಳೂರಿನಲ್ಲಿ ಮಳೆ

Mangalore Rains: ಚಾರ್ಮಾಡಿ ಘಾಟ್​ನ ಎರಡನೇ ತಿರುವಿನಲ್ಲಿ ಮರ ಬಿದ್ದಿದ್ದು, ಬಳಿಕ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಪಾಯಕಾರಿ ಎಂದು ಗುರುತಿಸಿಕೊಂಡಿರುವ ಚಾರ್ಮಾಡಿ ಘಾಟ್ ನಲ್ಲಿ ವಾಹನಗಳ ರಾತ್ರಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

  • Share this:

ಮಂಗಳೂರು (ಆ. 4): ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ- ಗಾಳಿ ಇಂದೂ ಮುಂದುವರಿದಿದೆ.  ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.


ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ಸ್ನಾನಘಟ್ಟ ಎರಡನೇ ದಿನವಾದ ಇಂದೂ ಕೂಡ ಮುಳುಗಡೆಗೊಂಡಿದೆ. ಸ್ನಾನಘಟ್ಟದ ಬಳಿ ನದಿ ಅಪಾಯಕಾರಿಯಾಗಿ ಹರಿಯುತ್ತಿದ್ದು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ತೀರ್ಥಸ್ನಾನಕ್ಕಾಗಿಯೂ ಸ್ನಾನಘಟ್ಟಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನಾನಘಟ್ಟದ ಬಳಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಾರ್ವಜನಿಕರು ದೇವಸ್ಥಾನದ ಆಡಳಿತವನ್ನು ಕೋರಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲೂ ಮಳೆಯು ಎಡೆಬಿಡದೆ ಸುರಿಯುತ್ತಿದ್ದು, ಭಾರೀ ಗಾಳಿ-ಮಳೆಗೆ ಹಲವು ಮರಗಳು ಧರೆಗುರುಳಿವೆ. ಮಂಗಳೂರು- ಕಡೂರು ಸಂಪರ್ಕಿಸುವ ರಸ್ತೆಯ ಚಾರ್ಮಾಡಿ ಘಾಟ್​ನಲ್ಲೂ ಮರ ಉರುಳಿ ರಸ್ತೆ‌ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆಯೂ ನಡೆದಿದೆ.


ಇದನ್ನೂ ಓದಿ: Mumbai Rains: ಮುಂಬೈ ಮಳೆಗೆ ಒಂದು ಬಲಿ; ಹೆದ್ದಾರಿಯಲ್ಲೇ ಗುಡ್ಡ ಕುಸಿತ, ಅಂಗಡಿಗಳು ಬಂದ್, ರೈಲು ಸಂಚಾರ ಸ್ಥಗಿತ


ಚಾರ್ಮಾಡಿ ಘಾಟ್​ನ ಎರಡನೇ ತಿರುವಿನಲ್ಲಿ ಮರ ಬಿದ್ದಿದ್ದು, ಬಳಿಕ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೊಟ್ಟಿಗೆಹಾರದ ಸಮೀಪವೂ ಘಾಟ್ ರಸ್ತೆಗೆ ಗುಡ್ಡ ಕುಸಿದ ಘಟನೆಯೂ ನಡೆಸಿದೆ. ಅಪಾಯಕಾರಿ ಎಂದು ಗುರುತಿಸಿಕೊಂಡಿರುವ ಚಾರ್ಮಾಡಿ ಘಾಟ್ ನಲ್ಲಿ ವಾಹನಗಳ ರಾತ್ರಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಳೆ ಹಾಗೂ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಪರಿಣಾಮ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕರಾವಳಿಯಾದ್ಯಂತ 5 ದಿನಗಳ‌ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಈಗಾಗಲೇ ನೀಡಿದೆ. ಸಮುದ್ರದಲ್ಲೂ ಭಾರೀ ಗಾಳಿ ಏಳುವ ಎಚ್ಚರಿಕೆಯನ್ನೂ ನೀಡಿದೆ. ಸಮುದ್ರದಲ್ಲಿ ಅಲೆಗಳು ಭಾರೀ ಎತ್ತರದಲ್ಲಿ ಏಳುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಎಚ್ಚರಿಕೆ ನೀಡಲಾಗಿದೆ. ಕಡಲ ತೀರದಲ್ಲಿ ಮಳೆ-ಗಾಳಿಯ ಪರಿಣಾಮ ಕಡಲ ಕೊರೆತವೂ ಆರಂಭಗೊಂಡಿದೆ. ಸೋಮೇಶ್ವರದ ಬಟ್ಟಪ್ಪಾಡಿ, ಉಚ್ಚಿಲ ಮೊದಲಾದ ಕಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸಮುದ್ರ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ.

Published by:Sushma Chakre
First published: