Karnataka Rains: ಕರಾವಳಿಯಲ್ಲಿ ನಿಲ್ಲದ ಮಳೆಯ ಆರ್ಭಟ; ಪುತ್ತೂರಿನ ಚೇಳ್ಯಡ್ಕ ಸೇತುವೆ ಮುಳುಗಡೆ; ನಾಳೆ ರೆಡ್​ ಅಲರ್ಟ್​ ಘೋಷಣೆ

ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಸಂಗಮ ಪ್ರದೇಶವಾಗ ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯದ ಮಟ್ಟಕ್ಕೆ ತಲುಪಲು ಕೆಲವೇ ಮೀಟರ್ ಅಂತರವಿದೆ. ಈಗಾಗಲೇ ಸುಮಾರು 27.6 ಅಡಿ ನೀರಿದ್ದು, ಉಪ್ಪಿನಂಗಡಿಯಲ್ಲಿ ನದಿ ನೀರಿನ ಅಪಾಯದ ಮಟ್ಟ 30 ಅಡಿಗಳಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ

  • Share this:
ದಕ್ಷಿಣ ಕನ್ನಡ(ಜು.15): ಕರಾವಳಿಯಲ್ಲಿ ಇಂದು ಕೂಡಾ ಭಾರಿ ಮಳೆ ಮುಂದುವರೆದಿದ್ದು, ಮುಂದಿನ ನಾಲ್ಕೈದು ದಿ‌ನ ಮಳೆ ಇದೇ ರೀತಿ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16 ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಭಾರೀ ಮಳೆಯ ಸಾಧ್ಯತೆಯಿದೆ. ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ನದಿಗಳಾದ ನೇತ್ರಾವತಿ ‌ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಇಂದು ಎರಡನೇ ದಿನವೂ ಮುಳುಗಡೆಯಾಗಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಸಂಗಮ ಪ್ರದೇಶವಾಗ ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯದ ಮಟ್ಟಕ್ಕೆ ತಲುಪಲು ಕೆಲವೇ ಮೀಟರ್ ಅಂತರವಿದೆ. ಈಗಾಗಲೇ ಸುಮಾರು 27.6 ಅಡಿ ನೀರಿದ್ದು, ಉಪ್ಪಿನಂಗಡಿಯಲ್ಲಿ ನದಿ ನೀರಿನ ಅಪಾಯದ ಮಟ್ಟ 30 ಅಡಿಗಳಾಗಿವೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಗೃಹರಕ್ಷಕ ದಳ ಸೇರಿದಂತೆ ಕಂದಾಯ ಅಧಿಕಾರಿಗಳೂ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಇದನ್ನೂ ಓದಿ:ಕೆಆರ್​​ಎಸ್​ ಕಲಹ: ಸರ್ಕಾರ ಮುಲಾಜಿಲ್ಲದೇ ಅಕ್ರಮ ಗಣಿಗಾರಿಕೆ ಬಂದ್ ಮಾಡಬೇಕು; ಶಾಸಕ ರಾಜೂಗೌಡ ಆಗ್ರಹ

ಐದು ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಮೂವರು ನುರಿತ ಈಜುಗಾರರ ತಂಡ ಉಪ್ಪಿನಂಗಡಿಯಲ್ಲಿದ್ದು, ಎರಡು ಬೋಟ್ ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ  ನಿಲ್ಲಿಸಲಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಗುಡ್ಡ ಜರಿತ, ಮರ ಬಿದ್ದ‌ ಸೇರಿದಂತೆ ಸಣ್ಣಪುಟ್ಟ ಘಟನೆಗಳು ನಡೆದಿದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ದೇವಿನಗರ‌ ಎಂಬಲ್ಲಿ ಮನೆಯೊಂದರ ತಡೆಗೋಡೆ ಭಾರೀ‌ ಮಳೆಗೆ ಕುಸಿದಿದ್ಧು, ಮನೆಯೂ ಅಪಾಯಕಾರಿ ಸ್ಥಿತಿಯಲ್ಲಿದೆ.

ಮನೆ ಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗಿದ್ದು, ಕುಸಿಯುತ್ತಿರುವ ಮಣ್ಣನ್ನು ತಡೆಯಲು ಪ್ಲಾಸ್ಟಿಕ್ ಹೊದಿಕೆಗಳನ್ನು ಅಳವಡಿಸುವ ಕಾರ್ಯವನ್ನು ಪಂಚಾಯತ್ ಮೂಲಕ ನಡೆಸಲಾಗಿದೆ. ಪುತ್ತೂರು- ಪಾಣಾಜೆ ಸಂಪರ್ಕಿಸುವ ರಸ್ತೆಯ ಚೇಳ್ಯಡ್ಕದಲ್ಲಿ ಭಾರೀ ಮಳೆಗೆ ಸೇತುವೆ ಮುಳುಗಡೆಯಾಗಿದ್ದು, ರಸ್ತೆಯ‌ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ತನ್ನ ಎಲ್ಲಾ ಅವಶ್ಯಕತೆಗಳಿಗಾಗಿ ಈ ರಸ್ತೆಯನ್ನೇ ಅವಲಂಭಿಸಿರುವ ಸ್ಥಳೀಯ ನಿವಾಸಿಗಳು ಸೇತುವೆ ಮುಳುಗಡೆಯಿಂದಾಗಿ ಸುತ್ತುಬಳಸಿ ಕ್ರಮಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಮಳೆಯ ಜೊತೆಗೆ ಭಾರೀ ಗಾಳಿಯೂ ಬೀಸಿದ ಪರಿಣಾಮ ಜಿಲ್ಲೆಯ ಹಲವು ಕಡೆಗಳಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯುಂಟಾದ ಘಟನೆಯೂ ನಡೆದಿದೆ. ಅಲ್ಲದೆ ಮರಗಳು ವಿದ್ಯುತ್ ಕಂಬಗಳ‌ ಮೇಲೆ ಉರುಳಿದ ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯೂ ವೆತ್ಯಯವಾಗಿದೆ. ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಹಾಗು ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತವಾಗಿರುವಂತೆ‌ ಸೂಚಿಸಲಾಗಿದೆ.

ಇದನ್ನೂ ಓದಿ:ಬಾಳೆಹಣ್ಣಿನಿಂದ ಹಿಟ್ಟು ಮಾಡ್ತಾರೆ.. ಆ ಹಿಟ್ಟಿನಲ್ಲಿ ಥರಾವರಿ ತಿಂಡಿ-ತಿನಿಸೂ ಮಾಡ್ತಾರೆ.. ನಿಮಗೆ ಗೊತ್ತಾ ಬಾಳೆಹಿಟ್ಟಿನ ಗುಟ್ಟು?

ನದಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಯೂ ಇರುವ ಕಾರಣ ಬಂಟ್ವಾಳ, ಮಂಗಳೂರು ತಾಲೂಕಿನ ನದಿ ಅಂಚಿನಲ್ಲಿರುವ ಮನೆಗಳಿಗೂ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆ‌ ಇನ್ನೂ‌ ನಾಲ್ಕೈದು ದಿನ ಮುಂದುವರಿಯಲಿದ್ದು, ಜುಲೈ 16( ನಾಳೆ) ಜಿಲ್ಲೆಯಾದ್ಯಂತ ರೆಟ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲೂ ಮಳೆಯಿಂದಾಗಿ ಅಲೆಗಳು ಹೆಚ್ಚಾಗುವ ಕಾರಣಕ್ಕಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡುವ ಸಾಧ್ಯತೆಯೂ ಹೆಚ್ಚಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: