Karnataka Rain Updates: ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಊರು ಯಾವುದು? ಲೇಟೆಸ್ಟ್ ಉತ್ತರ ಇಲ್ಲಿದೆ
ಕರ್ನಾಟಕದಲ್ಲಿ ಈಗ ಮಳೆಯ ಆರ್ಭಟ. ಮಳೆಯಿಂದ ಬೆಂಗಳೂರಂತೂ ನಲುಗಿಹೋಗಿದೆ. ಬೆಂಗಳೂರು ಒಂದೇ ಅಲ್ಲ, ರಾಜ್ಯದ ವಿವಿಧ ಪ್ರದೇಶಗಳು ಮೊದಲ ಮಳೆಗೆ ಕಂಗಾಲಾಗಿವೆ. ಹಾಗಾದರೆ ಸದ್ಯ ಯಾವ ಊರಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ? ಉತ್ತರ ಇಲ್ಲಿದೆ.
ಮಳೆ ಅಂದ ತಕ್ಷಣ ನೆನಪಾಗುವ ಆಗುಂಬೆ, ಚಿರಾಪುಂಜಿ ಊರುಗಳ ಸಾಲುಗೆ ಮತ್ತೊಂದು ಊರಿನ ಹೆಸರು ಸೇರ್ಪಡೆಯಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ (Shivamogga District) ಪುರದಾಳು ಗ್ರಾಮದಲ್ಲಿ 24 ಗಂಟೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಸುರಿದಿದೆ. ಅಂಕಿ ಅಂಶಗಳನ್ನು ಗಮನಿಸುವುದಾದರೆ ಮೇ 19ರ ಬೆಳಗ್ಗೆ 8:30ರಿಂದ ಮೇ 20ರ ಬೆಳಗ್ಗೆ 8:30 ರ ಒಳಗೆ ಪುರದಾಳು ಗ್ರಾಮದಲ್ಲಿ (Shivamogga Puradalu Village) 215.5 ಮಿಲಿ ಮೀಟರ್ ಮಳೆ ಸುರಿದ್ದು ರಾಜ್ಯದಲ್ಲೇ ಅತಿ ಹೆಚ್ಚಿನ ಮಳೆ (Karnataka Rain Updates)ಸುರಿದಂತಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಮೊದಲ ಮಳೆ ಅನಾಹುತಗಳನ್ನೂ ಸೃಷ್ಟಿಸುತ್ತಿದೆ. ವಿಪರೀತ ಮಳೆಯ ಪರಿಣಾಮ ಪುರದಾಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿದೆಡೆ ವಿಕೋಪ ಸಂಭವಿಸಿದೆ. ಬೆಳೆ ನಾಶದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಶಿಕಾರಿಪುರ ತಾಲೂಕಿನ ಮುರುಗಣ್ಣನ ಕೆರೆ ಕೋಡಿ ಒಡೆದು ಅಡಿಕೆ ತೋಟ ನಾಶವಾಗಿದೆ. ಸಂಸದ ಬಿ ವೈ ರಾಘವೇಂದ್ರ ಸ್ಥಳ ವೀಕ್ಷಣೆಗೆ ಬಂದ ವೇಳೆ ಹಾನಿಗೊಳಗಾದ ಕೃಷಿಕರಿಗೆ ಸಮಾಧಾನ ಹೇಳಿ ತೋಟಗಾರಿಕೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಶಿವಮೊಗ್ಗ ಒಂದೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ಮಳೆಯಿಂದ ಹಾನಿ ಸಂಭವಿಸುತ್ತಿದೆ.
24hrs☔ Map of #Karnataka from 8.30 am on 19th May 2022 to 8.30 am on 20th May 2022, highest 215.5mm ☔️
@Shivamogga_Puradalu. pic.twitter.com/JNrsYHlotD
ಉತ್ತರ ಕನ್ನಡದಲ್ಲಿ ಭೂಕುಸಿತದ ಆತಂಕ ಮಳೆಗಾಲ (Rainy Season) ಪ್ರಾರಂಭವಾಲು ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ (Rain) ಸುರಿಯುವ ಮುನ್ನವೇ ಭೂ ಕುಸಿತದ (Land Slides) ಆತಂಕ ಇನ್ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಭೂ ಕುಸಿತದಿಂದ ಸಾಕಷ್ಟು ಹಾನಿ ಆಗಿದ್ದು ಭೂ ಕುಸಿತಕ್ಕೆ ಕಾರಣ ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತ GSI ನೇಮಕ ಮಾಡಿತ್ತು. ಜಿಲ್ಲೆಯ ಹಲವೆಡೆ ಪರಿಶೀಲನೆ ಮಾಡಿರುವ ಈ ತಂಡ, ಈ ಬಾರಿ ಐದು ಕಡೆ ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ (Report) ನೀಡಿದೆ. ಜತೆಗೆ ಭೂ ಕುಸಿತಕ್ಕೆ ಅತಿಯಾದ ಮಳೆಯೇ ಕಾರಣ ಎನ್ನಲಾಗಿದೆ. ಮತ್ತೆ ಭೂ ಕುಸಿತದ ಸುದ್ದಿ ಕೇಳಿ ಉತ್ತರ ಕನ್ನಡ ಜಿಲ್ಲೆಯ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಎಲ್ಲೆಲ್ಲಿ ಭೂಕುಸಿತದ ಎಚ್ಚರಿಕೆ? ಕಳೆದ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಭೂ ಕುಸಿತದಿಂದ ಸಾಕಷ್ಟು ಹಾನಿ ಆಗಿತ್ತು. ಇದಕ್ಕೆ ಅತಿಯಾದ ಮಳೆಯೇ ಕಾರಣ ಎಂಬ ವರದಿ GSI ನಿಂದ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಮತ್ತು ಕಳಚೆ, ಜೋಯಿಡಾದ ಅಣಶಿ ಘಾಟ್, ಶಿರಸಿ ತಾಲೂಕಿನ ಜಾಜಿಗುಡ್ಡ, ಸಿದ್ದಾಪುರ ತಾಲೂಕಿನ ವಿವೇಕಾನಂದ ನಗರ, ಕಾನಸೂರು ಭಾಗದಲ್ಲಿ ಈ ಮಳೆಯಲ್ಲಿ ಭೂ ಕುಸಿತ ಸಂಭವಿಸುವ ಎಚ್ಚರಿಕೆ ನೀಡಿದೆ ಅಧ್ಯಯನ ತಂಡ.
ಮಳೆಯಿಂದ ತತ್ತರಿಸುತ್ತಿರುವ ಉತ್ತರ ಕನ್ನಡ ಉತ್ತರ ಕನ್ನಡ ಜಿಲ್ಲೆಯ ಕಳೆದ ಮೂರು ವರ್ಷದಿಂದ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಮಳೆಗಾಲದ ಆರಂಭದಲ್ಲೆ ಕುಮಟಾ, ಮುಂಡಗೋಡು, ಯಲ್ಲಾಪುರ ಭಾಗದಲ್ಲಿ ಮನೆ ಹಾನಿ, ವಿದ್ಯುತ್ ಕಂಬಗಳು ಧರೆಗುರುಳಿದೆ. ಮುಂಡಗೋಡು, ಕುಮಟಾ ಭಾಗದಲ್ಲಿ ಮಳೆಯಿಂದ ಮೂವತ್ತು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ