ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ-ಭೂ ಕುಸಿತ; 102 ಗ್ರಾಮಗಳು ಅಪಾಯದಲ್ಲಿ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಮುಂಡಾಜೆ, ಲಾಯಿಲ, ಕೊಯ್ಯೊರು, ನಾಡ, ಇಂದಬೆಟ್ಟು, ನಾವೂರು, ಚಾರ್ಮಾಡಿ, ನೆರಿಯ, ಕಲ್ಮಂಜ, ಧರ್ಮಸ್ಥಳ, ಬೆಳಾಲು, ಬಂದಾರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ವೇಣೂರು, ಅಳದಂಗಡಿ, ಶಿರ್ಲಾಲು ಹಾಗೂ ಅರಂಬೋಡಿ ಗ್ರಾಮಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.

news18-kannada
Updated:August 10, 2020, 12:57 PM IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ-ಭೂ ಕುಸಿತ; 102 ಗ್ರಾಮಗಳು ಅಪಾಯದಲ್ಲಿ
ಧಾರಾಕಾರ ಮಳೆ
  • Share this:
ದಕ್ಷಿಣ ಕನ್ನಡ(ಆ.10): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಗೂ ಭೂಕುಸಿತವಾಗುವ ಭೀತಿ ಎದುರಾಗಿದೆ‌. ಕಳೆದ ಬಾರಿ ಪ್ರವಾಹದ ಜೊತೆಗೆ ಅಲ್ಲಲ್ಲಿ ಭೂಕುಸಿತ ಪ್ರಕರಣಗಳೂ ಕಂಡು ಬಂದಿದ್ದು, ಜಿಲ್ಲಾಡಳಿತ ಪರಿಸ್ಥಿತಿ ಯನ್ನು ಎದುರಿಸಲು ಹರಸಾಹಸ ಪಡಬೇಕಾಗಿತ್ತು. ಆದರೆ ಈ ಭಾರಿ ಎಂತಹ ಪರಿಸ್ಥಿತಿ ಎದುರಾದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಅಪಾಯವನ್ನು ಎದುರಿಸುವ 102 ಗ್ರಾಮಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಿದೆ. ಆ 102 ಗ್ರಾಮಗಳನ್ನು ಗುರುತಿಸಿ, ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಆಯಾ ಗ್ರಾಮ ಪಂಚಾಯತ್ ಗಳಿಗೆ ಸೂಚನೆ ನೀಡಲಾಗಿದೆ‌. ಒಟ್ಟು 70 ಗ್ರಾಮಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿ ಯನ್ನು ರಚಿಸಲಾಗಿದೆ.

ಮತ್ತೆ ನಿಜವಾಗುತ್ತಿದೆ ಹೊಳೆ ಬಬಲಾದಿ ಸದಾಶಿವನ ಮುತ್ಯಾನ ಕಾಲಜ್ಞಾನದ ಹೊತ್ತಿಗೆ ಭವಿಷ್ಯ

ಸಂಭಾವ್ಯ ಗ್ರಾಮ ಪಂಚಾಯತ್ ಪಟ್ಟಿ:

ಮಂಗಳೂರು ತಾಲೂಕಿನ ಹರೇಕಳ, ಗುರುಪುರ, ಉಳಾಯಿಬೆಟ್ಟು, ಮಳವೂರು, ಚೇಳ್ವಾರಯ, ಸೂರಿಂಜೆ, ಬಂಟ್ಬಾಳ ತಾಲೂಕಿನ ಬಿ ಕಸಬಾ, ನಾವೂರು, ಅಮ್ಟಾಡಿ, ಮಣಿನಾಲ್ಕೂರು, ಸರಪಾಡಿ, ಪೆರ್ನೆ, ಸಜಿಪ ಬಿ ಮೂಡ, ಪಾಣೆ ಮಂಗಳೂರು, ಕಡೆಶಿವಾಲಯ, ಬರಿಮಾರು, ಸಜಿಪ ಮುನ್ನೂರು, ಪುದು, ಸಜಿಪಮೂಡ, ಸಜಿಪನಡು, ಕರಿಯಂಗಳ, ಮೂಲ್ಕಿ ತಾಲೂಕಿನ ಬಳ್ಕುಂಜೆ, ಅತಿಕಾರಿಬೆಟ್ಟು, ಐಕಳ,ಕಟೀಲು,ಕಿಲ್ಪಾಡಿ, ಹಳೆಯಂಗಡಿ,ಕೆಮ್ರಾಲ್, ಮೂಲ್ಕಿ, ಐಕಳ, ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಅಲೆಟ್ಟಿ,ಮರ್ಕಂಜ, ಹರಿಹರ, ಪಳ್ಳತಡ್ಕ, ಕಡಬ ತಾಲೂಕಿನ ಹರಿಹರ, ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಕುಟ್ರುಪ್ಪಾಡಿ, ಶಿರಾಡಿ, ಕೌಕ್ರಾಡಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ,ನೆಕ್ಕಿಲಾಡಿ,ಬೆಳ್ಳಿಪಾಡಿ,ಬಜತ್ತೂರು,ಪುತ್ತೂರು ಕಸಬಾ ಗ್ರಾಮಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಮುಂಡಾಜೆ, ಲಾಯಿಲ, ಕೊಯ್ಯೊರು, ನಾಡ, ಇಂದಬೆಟ್ಟು, ನಾವೂರು, ಚಾರ್ಮಾಡಿ, ನೆರಿಯ, ಕಲ್ಮಂಜ, ಧರ್ಮಸ್ಥಳ, ಬೆಳಾಲು, ಬಂದಾರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ವೇಣೂರು, ಅಳದಂಗಡಿ, ಶಿರ್ಲಾಲು ಹಾಗೂ ಅರಂಬೋಡಿ ಗ್ರಾಮಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಬಂಟ್ವಾಳದ 15, ಮಂಗಳೂರಿನ13, ಮೂಲ್ಕಿಯ 17, ಸುಳ್ಯದ 7, ಕಡಬದ9, ಪುತ್ತೂರಿನ6, ಬೆಳ್ತಂಗಡಿಯ 35 ಗ್ರಾಮಗಳನ್ನು ಒಳಗೊಂಡಂತೆ 102 ಗ್ರಾಮಗಳನ್ನು ಅಪಾಯದ ಗ್ರಾಮಗಳೆಂದು ಗುರುತಿಸಲಾಗಿದೆ.
Published by: Latha CG
First published: August 10, 2020, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading