Bengaluru Rain Updates: ಮಳೆ ಹಾನಿ ತಡೆಯಲು ಟಾಸ್ಕ್​ ಫೋರ್ಸ್ ರಚನೆ, ಯಾವ ವಲಯಕ್ಕೆ ಯಾರ ನೇತೃತ್ವ? ಮಾಹಿತಿ ಇಲ್ಲಿದೆ

Bengaluru Rain Problem Solution Task Force: ಶಾಸಕರು, ಸಂಸದರು, ಅಧಿಕಾರಿಗಳನ್ನೊಳಗೊಂಡ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ ಸಚಿವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ವಿವಿಧ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ ಯಾವ ಸಚಿವರು ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂಬ ವಿವರ ಇಲ್ಲಿದೆ.

ಭಾರೀ ಮಳೆ (ಸಂಗ್ರಹ ಚಿತ್ರ)

ಭಾರೀ ಮಳೆ (ಸಂಗ್ರಹ ಚಿತ್ರ)

  • Share this:
    ಬೆಂಗಳೂರು: ಮಳೆಯಿಂದ ಉಂಟಾದ ಹಾನಿ ತಡೆಯಲು ರಾಜ್ಯ ಸರ್ಕಾರ ಸಚಿವರ ನೇತೃತ್ವದಲ್ಲಿ ಮಳೆ ವಿಪತ್ತು ನಿರ್ವಹಣೆಗೆ 8 ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಬೆಂಗಳೂರು ಮಳೆ ಅನಾಹುತ ತಡೆಯುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ (Karnataka Government) ಏಳು ಸಚಿವರಿಗೆ ವಹಿಸಿದೆ. ಬೆಂಗಳೂರು ಎಂಟು ವಲಯಗಳ ಜವಾಬ್ದಾರಿಯನ್ನು ಸಪ್ತ ಸಚಿವರಿಗೆ (Karnataka Ministers) ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ ರಾಜ್ಯ ಸರ್ಕಾರ. ಶಾಸಕರು, ಸಂಸದರು, ಅಧಿಕಾರಿಗಳನ್ನೊಳಗೊಂಡ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ (Bengaluru Rain Problem Solution Task Force) ಸಚಿವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ವಿವಿಧ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ ಯಾವ ಸಚಿವರು ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂಬ ವಿವರ ಇಲ್ಲಿದೆ.

    ದಕ್ಷಿಣ ವಲಯ ಟಾಸ್ಕ್ ಫೋರ್ಸ್​- ಸಚಿವ ಆರ್. ಅಶೋಕ್ ಅಧ್ಯಕ್ಷತೆ

    ಪೂರ್ವ ವಲಯ ಟಾಸ್ಕ್ ಫೋರ್ಸ್​- ಸಚಿವ ಡಾ.ಅಶ್ವಥ್ ನಾರಾಯಣ್ ಅಧ್ಯಕ್ಷತೆ

    ಪಶ್ಚಿಮ ವಲಯ ಟಾಸ್ಕ್ ಫೋರ್ಸ್ ಜವಾಬ್ದಾರಿ – ಸಚಿವ ವಿ. ಸೋಮಣ್ಣ

    ಆರ್ ಆರ್ ನಗರ ವಲಯ ಜವಾಬ್ದಾರಿ – ಎಸ್. ಟಿ. ಸೋಮಶೇಖರ್

    ಮಹದೇವಪುರ ವಲಯ ಟಾಸ್ಕ್ ಫೋರ್ಸ್ ಅಧ್ಯಕ್ಷತೆ - ಬೈರತಿ ಬಸವರಾಜ್

    ಬೊಮ್ಮನಹಳ್ಳಿ ವಲಯ ಜವಾಬ್ದಾರಿ - ಗೋಪಾಲಯ್ಯ

    ಯಲಹಂಕ ಮತ್ತು ದಾಸರಹಳ್ಳಿ ಎರಡೂ ವಲಯಗಳ ಟಾಸ್ಕ್ ಫೋರ್ಸ್ ಅಧ್ಯಕ್ಷತೆ - ಮುನಿರತ್ನ

    ಮೇ 15 ರಿಂದ 21ರವರೆಗಿನ ಮಳೆಯಲ್ಲಿ 12 ಜನರು, 430 ಪ್ರಾಣಿಗಳು ಮೃತ, 1431 ಮನೆ ಹಾನಿ
    ಮಳೆ ಹಾನಿ ಪರಿಹಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಳೆಯಿಂದ ಉಂಟಾದ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಸಭೆಯಲ್ಲಿ ಮಳೆಯಿಂದ ಉಂಟಾದ ಹಾನಿಗಳ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಲಾಗಿದೆ. ಮೇ 15 ರಿಂದ 21ರ ವರೆಗೆ ಸುರಿದ ಮಳೆಯಿಂದ 12 ಜನರು ಮೃತಪಟ್ಟಿದ್ದಾರೆ. 430 ಪ್ರಾಣಿಗಳು ಸಹ ಮೃತಪಟ್ಟಿದ್ದು, 1431 ಮನೆಗಳಿಗೆ‌ ನೀರು ನುಗ್ಗಿ ಹಾನಿಯಾಗಿದೆ. 4242 ಭಾಗಶಃ ಮನೆಗಳು ಹಾನಿಗೊಳಗಾಗಿವೆ. ಅಲ್ಲದೇ 7010 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ. 5736 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.

    ಇದನ್ನೂ ಓದಿ: Karnataka Rain Updates: ಮೇ 15 ರಿಂದ 21ರವರೆಗಿನ ಮಳೆಯಲ್ಲಿ 12 ಜನರು, 430 ಪ್ರಾಣಿಗಳು ಮೃತ, 1431 ಮನೆ ಹಾನಿ

    728 ಕೋಟಿ ಹಣ ತುರ್ತು ಸಂದರ್ಭದಲ್ಲಿ ಹಣ ಬಳಕೆಗೆ ಎಂದೇ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿದೆ ಎಂದು ತಿಳಿಸಿದ್ದಾರೆ.ಎನ್‌ಡಿಆರ್‌ಎಫ್ ನಿಯಮಗಳಡಿ ಕೂಡಲೇ ಪರಿಹಾರ ಬಿಡುಗಡೆ ಮಾಡಲು ತಿಳಿಸಿದ್ದಾರೆ. ಗ್ರಾ.ಪಂ. ಹಂತದಲ್ಲಿ ಪಿಡಿಒಗಳು ಸ್ಥಳದಲ್ಲೇ ಇದ್ದು ಮಳೆ ಹಾನಿ ಪರಿಶೀಲಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್‌ಡಿಆರ್‌ಎಫ್ ನಿಯಮಗಳಡಿ ಕೂಡಲೇ ಪರಿಹಾರ ಬಿಡುಗಡೆಗೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: Karnataka Rain Updates: ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಊರು ಯಾವುದು? ಲೇಟೆಸ್ಟ್ ಉತ್ತರ ಇಲ್ಲಿದೆ

    15 ದಿನಗಳ ಕಾಲ ಅಧಿಕಾರಿಗಳಿಗೆ ರಜೆ ಇಲ್ಲ
    ಅಗತ್ಯ ತುರ್ತು ಸಂದರ್ಭಗಳಲ್ಲಿ ಹಣ ಬಳಕೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿ‌ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಮೂರು ದಿನದಲ್ಲಿ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು. 15 ದಿನಗಳ ಕಾಲ ಅಧಿಕಾರಿಗಳಿಗೆ ರಜೆ ನೀಡಬೇಡಿ. ಮಳೆಯಿಂದ ಉಂಟಾದ ಹಾನಿ ಸರಿಪಡಿಸಲು ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
    Published by:guruganesh bhat
    First published: