Karnataka Rain Updates: ಮೇ 15 ರಿಂದ 21ರವರೆಗಿನ ಮಳೆಯಲ್ಲಿ 12 ಜನರು, 430 ಪ್ರಾಣಿಗಳು ಮೃತ, 1431 ಮನೆ ಹಾನಿ
ಗ್ರಾ.ಪಂ. ಹಂತದಲ್ಲಿ ಪಿಡಿಒಗಳು ಸ್ಥಳದಲ್ಲೇ ಇದ್ದು ಮಳೆ ಹಾನಿ ಪರಿಶೀಲಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್ಡಿಆರ್ಎಫ್ ನಿಯಮಗಳಡಿ ಕೂಡಲೇ ಪರಿಹಾರ ಬಿಡುಗಡೆಗೆ ಸೂಚನೆ ನೀಡಿದ್ದಾರೆ.
ಮಳೆಹಾನಿಪರಿಹಾರದಬಗ್ಗೆಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಳೆಯಿಂದ ಉಂಟಾದ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.728ಕೋಟಿ ಹಣ ತುರ್ತುಸಂದರ್ಭದಲ್ಲಿಹಣಬಳಕೆಗೆ ಎಂದೇ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿದೆ. ಅಗತ್ಯ ತುರ್ತು ಸಂದರ್ಭಗಳಲ್ಲಿ ಹಣ ಬಳಕೆ (Emergency Fund) ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು ಮಳೆಯಿಂದಹಾನಿ (Karnataka Rain Updates) ಉಂಟಾದಪ್ರದೇಶಗಳಿಗೆಭೇಟಿನೀಡಬೇಕು. ಮೂರುದಿನದಲ್ಲಿಸರ್ಕಾರಕ್ಕೆ (Karnataka Government on Rain)ವರದಿಸಲ್ಲಿಸಬೇಕು. 15 ದಿನಗಳ ಕಾಲಅಧಿಕಾರಿಗಳಿಗೆರಜೆನೀಡಬೇಡಿ. ಮಳೆಯಿಂದ ಉಂಟಾದ ಹಾನಿ ಸರಿಪಡಿಸಲು ಸಮಾರೋಪಾದಿಯಲ್ಲಿಕೆಲಸಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸಭೆಯಲ್ಲಿಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಮಳೆಯಿಂದ ಉಂಟಾದ ಹಾನಿಗಳ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಲಾಗಿದೆ. ಮೇ 15 ರಿಂದ 21ರ ವರೆಗೆ ಸುರಿದ ಮಳೆಯಿಂದ 12 ಜನರು ಮೃತಪಟ್ಟಿದ್ದಾರೆ. 430 ಪ್ರಾಣಿಗಳು ಸಹ ಮೃತಪಟ್ಟಿದ್ದು, 1431 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. 4242 ಭಾಗಶಃ ಮನೆಗಳು ಹಾನಿಗೊಳಗಾಗಿವೆ. ಅಲ್ಲದೇ 7010 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ. 5736 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಎನ್ಡಿಆರ್ಎಫ್ ನಿಯಮಗಳಡಿ ಕೂಡಲೇ ಪರಿಹಾರ ಬಿಡುಗಡೆ ಗ್ರಾ.ಪಂ. ಹಂತದಲ್ಲಿಪಿಡಿಒಗಳುಸ್ಥಳದಲ್ಲೇಇದ್ದುಮಳೆಹಾನಿಪರಿಶೀಲಿಸಿಪರಿಹಾರಕಾರ್ಯಕೈಗೊಳ್ಳಬೇಕು ಎಂದು ಸೂಚನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್ಡಿಆರ್ಎಫ್ನಿಯಮಗಳಡಿಕೂಡಲೇಪರಿಹಾರಬಿಡುಗಡೆಗೆಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ, ಹೆಚ್ಡಿಕೆಗೆ ತಿರುಗೇಟು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಅವರುಗಳಿಂದಬೆಂಗಳೂರಿನಲ್ಲಿರೌಂಡ್ಸ್ವಿಚಾರವಾಗಿಯೂ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಅವರುಹಿಂದೆಅಭಿವೃದ್ಧಿಸರಿಯಾಗಿಮಾಡಿದ್ದಿದ್ರೆಈಸ್ಥಿತಿಬರ್ತಿರ್ಲಿಲ್ಲಎಂದುತಿರುಗೇಟುಕೊಟ್ಟಿದ್ದಾರೆ.
ಹಾನಿಗೊಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಎಸಿ, ಕೃಷಿ ಇಲಾಖೆ ಅಧಿಕಾರಿಗಳು, ಮುಂದಿನ 2-3 ದಿನಗಳಲ್ಲಿ ಕಡ್ಡಾಯವಾಗಿ ಹಾನಿಗೊಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮುಖ್ಯ ಕಾರ್ಯದರ್ಶಿಗಳಿಗೆ ಮೂರು ದಿನಗಳಲ್ಲಿ ವರದಿ ಸಲ್ಲಿಸಬೇಕು.
ಸಿಎಂ ಸಭೆಯ ಮುಖ್ಯಾಂಶಗಳು ಇಲ್ಲಿವೆ 1. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಬೇಕು.
2. ಕಂದಾಯ, ಆರ್.ಡಿ.ಪಿ.ಆರ್, ಸಣ್ಣ ನೀರಾವರಿ, ಮಾಹಿತಿ ಪಡೆದು ಪ್ರವಾಹಕ್ಕೆ ಸಂಬಂಧಿಸಿದ ಕಡತಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡುವುದು.
3. ಪೂರ್ಣ ಹಾನಿಯಾಗಿರುವ ಮನೆಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೂಡಲೇ ಪರಿಹಾರ ಬಿಡುಗಡೆ ಮಾಡುವುದು.
4. ಮುಂದಿನ 15 ದಿನಗಳ ಕಾಲ ಯಾವುದೇ ಅಧಿಕಾರಿಗೆ ರಜೆ ಮಂಜೂರು ಮಾಡುವಂತಿಲ್ಲ.
5. ಪಿ.ಡಿ.ಒ ಗಳು ಸ್ಥಳದಲ್ಲಿದ್ದು ಪರಿಶೀಲನೆ ಮಾಡುವುದು.
6. ಜಿಲ್ಲೆಗಳಲ್ಲಿ ಬೆಳೆ ಹಾನಿ, ಜಾನುವಾರು ಹಾಗೂ ಮಾನವ ಜೀವ ಹಾನಿ, ಮೂಲಸೌಕರ್ಯ ಸೌಲಭ್ಯಗಳಿಗೆ ಉಂಟಾಗಿರುವ ಹಾನಿ ಮತ್ತು ಕಾಳಜಿ ಕೇಂದ್ರಗಳನ್ನು ತೆರೆಯುವುದು.
7. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 728.85 ಕೋಟಿ ರೂ.ಗಳು ಲಭ್ಯವಿದೆ.
8. ಜಿಲ್ಲೆಗಳಲ್ಲಿ ಬೆಳೆ ಹಾನಿ, ಜಾನುವಾರು ಹಾಗೂ ಮಾನವ ಜೀವ ಹಾನಿ, ಮೂಲಸೌಕರ್ಯ ಸೌಲಭ್ಯಗಳಿಗೆ ಉಂಟಾಗಿರುವ ಹಾನಿ ಮತ್ತು ಕಾಳಜಿ ಕೇಂದ್ರಗಳನ್ನು ತೆರೆಯುವುದು.
9. ಬೆಳೆ ಹಾನಿ ಹಾಗೂ ಮನೆ ಹಾನಿಯ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸುವುದು. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುವುದು.
10. ಪಿ.ಡಿ.ಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೇ ಛಾಯಾಗ್ರಾಹಕರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಮನೆ ಹಾನಿಯ ಮಾಹಿತಿ ದಾಖಲಿಸಬೇಕು. ಹಾನಿಗೊಳಗಾಗಿರುವ ಮನೆಗಳ ವಿವರ ಬಿಟ್ಟು ಹೋಗಬಾರದು. ಅನಗತ್ಯ ಮನೆಗಳ ವಿವರ ಸೇರ್ಪಡೆಯಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
11. ಸಮೀಕ್ಷೆ ಕಾರ್ಯಕ್ಕೆ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಗಳನ್ನು ಹೆಚ್ಚಾಗಿ ಬಳಸುವುದು.
12. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಕೂಡಲೇ ಪರಿಹಾರ ವಿತರಿಸಲು ಸೂಚನೆ ನೀಡಲಾಗಿದೆ.
13. ಬೆಳೆ ಹಾನಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
14. ಜಿಲ್ಲಾಧಿಕಾರಿಗಳು ಮುಂಚೂಣಿಯಲ್ಲಿ ಇದ್ದು ಸಮೀಕ್ಷೆ ಕಾರ್ಯಗಳನ್ನು ನಡೆಸುವುದು.
15. ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಹೊರ ಬಿಡುವಾಗ ವ್ಯವಸ್ಥಿತವಾಗಿ ಮಾಡಬೇಕು. ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ. ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಬೇಕು.
16. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ದ್ವೀಪಗಳಾಗುವ ಗ್ರಾಮಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಗ್ರಾಮಸ್ಥರನ್ನು ಮುಂಚಿತವಾಗಿಯೇ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡಬೇಕು .
ಭೂಕುಸಿತದಿಂದ ಅಪಾಯ ತಡೆಗಟ್ಟಿ 17. ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು. ಭೂ ಕುಸಿತದಿಂದ ಸಾವು ಸಂಭವಿಸದಂತೆ ಜನರನ್ನು ಸ್ಥಳಾಂತರ ಮಾಡಲು ಸೂಚಿಸಿದರು.
18. ವಿಪತ್ತು ನಿರ್ವಹಣಾ ತಂಡದವರು ಈ ಬಗ್ಗೆ ಸಂಬಂಧಿಸಿ ಜಿಲ್ಲೆಗಳಿಗೆ ಮಾಹಿತಿ ಒದಗಿಸಬೇಕು.
19. ನಿಯಮಿತವಾಗಿ ಪ್ರವಾಹಕ್ಕೊಳಗಾಗುವ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು..
20. ನದಿಗಳು, ಅಣೆಕಟ್ಟುಗಳ ನೀರಿನ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು.
21. ಸ್ಥಳ ಪರಿಶೀಲನೆಯನ್ನು ಕೈಗೊಂಡು ಯಾವ ತಾಲ್ಲೂಕುಗಳಲ್ಲಿ, ಗ್ರಾಮಗಳಲ್ಲಿ ನಷ್ಟ ಉಂಟಾಗಿದೆ ಎಂಬ ಬಗ್ಗೆ ಸರ್ವೆ ಸಂಖ್ಯೆಯ ಸಮೇತ ಮಾಹಿತಿ ಒದಗಿಸಬೇಕು.