Karnataka Rain: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ; ಉ. ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ

Monsoon 2020: ಮೇ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ, ಈಗ ಮತ್ತೆ ಮಳೆ ಆಗುತ್ತಿರುವದರಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Monsoon 2020: ಬೆಂಗಳೂರು (ಜು.7): ಜೂನ್ ತಿಂಗಳಲ್ಲಿ ಕೈ ಕೊಟ್ಟಿದ್ದ ಮಾನ್ಸೂನ್ ಕೊನೆಗೂ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಮುಂದುವರಿದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡದ ಕವಿದ ವಾತಾವರಣ ಇದೆ. ಇನ್ನು, ಅಣೆಕಟ್ಟುಗಳು ಕೂಡ ಅಂದುಕೊಂಡ ಮಟ್ಟಿಗೆ ತುಂಬಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಮಳೆ ಆಗುತ್ತಿದ್ದ ರೈತರಲ್ಲಿ ಸಂತಸ ಮೂಡಿಸಿದೆ.

  ದಕ್ಷಿಣ ಕನ್ನಡ, ಮಂಗಳೂರು, ಬೆಳ್ತಂಗಡಿ, ಉಡುಪಿ, ಕುಮಟ, ಕಾರವಾರ, ಶಿರಸಿ, ಸಾಗರ ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆ ಆಗುತ್ತಿದೆ. ಹೀಗಾಗಿ, ಕೃಷಿ ಚಟುವುಟಿಕೆಗೆ ಚುರುಕು ಸಿಕ್ಕಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಬೆಳಗಾವಿ ಸೇರಿ ಕೆಲವು ಭಾಗಗಳಲ್ಲಿ ತುಂತುರು ಮಳೆ ಆಗುತ್ತಿದೆ.

  ಈವಾರ ಪೂರ್ತಿ ಮಳೆ:

  ಇಂದಿನಿಂದ 5 ದಿನಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಹೀಗಾಗಿ ಈ ವಾರ ಪೂರ್ತಿ ಮಳೆ ಆಗಲಿದೆ.

  ಜೂನ್ನಲ್ಲಿ ಕೈ ಕೊಟ್ಟಿದ್ದ ಮಳೆ:
  ಮೇ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ, ಈಗ ಮತ್ತೆ ಮಳೆ ಆಗುತ್ತಿರುವದರಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ.

  ಇಂದು ಯಾವ ಜಿಲ್ಲೆಯಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ...
  ಬೆಂಗಳೂರು- ಮೋಡ ಕವಿದ ವಾತಾವರಣ
  ಉಡುಪಿ- ಸಾಧಾರಣ ಮಳೆ
  ದಕ್ಷಿಣ ಕನ್ನಡ- ಮಳೆ
  ಕೋಲಾರ- ಮೋಡ ಕವಿದ ವಾತಾವರಣ
  ಕಲಬುರ್ಗಿ- ಮೋಡ ಕವಿದ ವಾತಾವರಣ
  ವಿಜಯಪುರ- ಮೋಡ ಕವಿದ ವಾತಾವರಣ
  ಬಾಗಲಕೋಟೆ- ಮೋಡ ಕವಿದ ವಾತಾವರಣ
  ಧಾರವಾಡ- ಮೋಡ ಕವಿದ ವಾತಾವರಣ
  ರಾಯಚೂರು- ಬಿಸಿಲು
  ಗದಗ- ಮೋಡ ಕವಿದ ವಾತಾವರಣ
  ಹುಬ್ಬಳ್ಳಿ- ಮೋಡ ಕವಿದ ವಾತಾವರಣ
  ದೊಡ್ಡಬಳ್ಳಾಪುರ-ಮೋಡ ಕವಿದ ವಾತಾವರಣ
  ಬೆಳಗಾವಿ- ತುಂತುರು ಮಳೆ
  Published by:Rajesh Duggumane
  First published: