HOME » NEWS » State » KARNATAKA RAIN HEAVY RAIN IN VIJAYAPURA YOUTHS PLANTED SAPLINGS IN POTHOLE SCT

ವಿಜಯಪುರದಲ್ಲಿ ಧಾರಾಕಾರ ಮಳೆ; ರಸ್ತೆ ಗುಂಡಿಗಳಲ್ಲಿ ರಾತ್ರಿ ಸಸಿ ನೆಟ್ಟ ಯುವಕರು!

Vijayapura Rain: ವಿಜಯಪುರ ನಗರದ ಯಾವುದೇ ರಸ್ತೆಗಳಿಗೆ ಹೋದರೂ ಒಂದು ಕಿ. ಮೀ. ಸುರಕ್ಷಿತ ರಸ್ತೆ ಸಿಗುತ್ತಿಲ್ಲ. ಈ ರಸ್ತೆಗಳ ದುಸ್ಥಿತಿಯನ್ನು ಸಾರ್ವಜನಿಕರು ವಾಟ್ಸಾಪ್ ಗ್ರೂಪ್, ಫೇಸ್‌ ಬುಕ್ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡುವ ಮೂಲಕ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಚಾಟಿ ಬೀಸುತ್ತಿದ್ದಾರೆ. 

news18-kannada
Updated:September 10, 2020, 9:16 AM IST
ವಿಜಯಪುರದಲ್ಲಿ ಧಾರಾಕಾರ ಮಳೆ; ರಸ್ತೆ ಗುಂಡಿಗಳಲ್ಲಿ ರಾತ್ರಿ ಸಸಿ ನೆಟ್ಟ ಯುವಕರು!
ವಿಜಯಪುರದ ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟ ಯುವಕರು
  • Share this:
ವಿಜಯಪುರ (ಸೆ. 10): ಐತಿಹಾಸಿಕ ನಗರಿ ವಿಜಯಪುರದಲ್ಲಿರುವ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದೆ. ಅಲ್ಲಿನ ರಸ್ತೆಗಳ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರತಿಬಾರಿ ಮಳೆಗಾಲ ಬಂದರೆ ಈ ರಸ್ತೆಗಳ ಅಧೋಗತಿ ಸ್ಥಿತಿ ಬಹಿರಂಗವಾಗುತ್ತಿದೆ.  ಮಳೆಗಾಲ ಮುಗಿಯುತ್ತಿದ್ದಂತೆ ಈ ರಸ್ತೆಗಳನ್ನು ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಗಳು ದುರಸ್ತಿ ಮಾಡುತ್ತಿವೆ. ಆದರೆ, ಮತ್ತೆ ಮಳೆಗಾಲ ಬಂತೆಂದರೆ ಸಾಕು ಕಳಪೆ ಕಾಮಗಾರಿಗಳು ಕಣ್ತೆರೆದು ನಿಲ್ಲುತ್ತಿವೆ. ಒಂದು ಸಲ ಮಾಡಿದ ರಸ್ತೆ ಕನಿಷ್ಠ ಒಂದೆರಡು ವರ್ಷವಾದರೂ ಬಾಳಿಕೆ ಬರುವಂತೆ ಮಾಡದಷ್ಟು ಈ ಕೆಲಸಗಳನ್ನು ಗುತ್ತಿಗೆ ಪಡೆದವರು ಅಸಮರ್ಥರಿದ್ದಾರಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ವಿಜಯಪುರ ನಗರದ ಯಾವುದೇ ರಸ್ತೆಗಳಿಗೆ ಹೋದರೂ ಒಂದು ಕಿ. ಮೀ. ಸುರಕ್ಷಿತ ರಸ್ತೆ ಸಿಗುತ್ತಿಲ್ಲ.  ಎಲ್ಲ ರಸ್ತೆಗಳೂ ತಗ್ಗು, ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕು ಎಂಬ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ. 

ಈ ರಸ್ತೆಗಳ ದುಸ್ಥಿತಿಯನ್ನು ಸಾರ್ವಜನಿಕರು ವಾಟ್ಸಾಪ್ ಗ್ರೂಪ್, ಫೇಸ್‌ ಬುಕ್ ಸೇರಿದಂತೆ ನಾನಾ ಸಾಮಾಜಿಕ ಜಾಲಾತಾಣಗಳಲ್ಲಿ ಹರಿ ಬಿಡುವ ಮೂಲಕ ತುಕ್ಕು ಹಿಡಿದಿರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಚಾಟಿ ಬೀಸುತ್ತಿದ್ದಾರೆ. ಸಿಟಿಜನ್ ಫೋರಮ್ ವಿಜಯಪುರ ವಾಟ್ಸಾಪ್ ಗ್ರೂಪ್​ನಲ್ಲಿ ಶೇರ್ ಮಾಡಲಾಗಿರುವ ಹದಗೆಟ್ಟ ರಸ್ತೆಗಳ ಸ್ಥಿತಿ ಎಂಥವರನ್ನೂ ಕೆರಳಿಸುವಂತಿವೆ.  ಜನ ಕ್ಯಾಕರಿಸಿ ಉಗಿದರೂ ರಸ್ತೆಗಳು ಮಾತ್ರ ದುರಸ್ಥಿ ಕಾಣುತ್ತಿಲ್ಲ.

Heavy Rain in Vijayapura Youths Planted Saplings in Pothole.
ವಿಜಯಪುರದ ರಸ್ತೆ ಗುಂಡಿ


ಈ ಮಧ್ಯೆ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿರುವ ಬಿದನೂರ ಪೆಟ್ರೋಲ್ ಬಂಕ್ ಬಳಿಯ ರಸ್ತೆಯಲ್ಲಿ ಹಲವಾರು ಜನ ವಾಹನ ಸವಾರರು ಬಿದ್ದು ಅಪಘಾತದಲ್ಲಿ ಗಾಯಗೊಂಡಿರುವುದರಿಂದ ನಿನ್ನೆ ಸಂಜೆಯಿಂದ ರಾತ್ರಿಯವರೆಗೆ ಕಾಲೇಜು ಯುವಕರು ವಿನೂತನ ಜಾಗೃತಿ ಮೂಡಿಸಿ ತಮ್ಮದೇ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯ ಗುಂಡಿಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಅಲ್ಲಿ ಅಪಾಯವಿದೆ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದಾರೆ.  ಅಲ್ಲದೆ, ಗಿಡ ನೆಡುವಷ್ಟು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೂ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯ ಕೈಗೊಳ್ಳದ ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ವಿರುದ್ಧವೂ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ; ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್​ಮಳೆಗಾಲದಲ್ಲಿ ಈ ಮಟ್ಟದಲ್ಲಿ ರಸ್ತೆಗಳು ಹದಗೆಟ್ಟಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.  ಮಹಾನಗರ ಪಾಲಿಕೆಯಲ್ಲಂತೂ ಜನಪ್ರತಿನಿಧಿಗಳಿಲ್ಲ. ಅಧಿಕಾರಿಗಳದ್ದೇ ಕಾರುಬಾರು ಜೋರಾಗಿದೆ.  ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಬಡಿಕಮಾನ ರಸ್ತೆ, ಬಬಲೇಶ್ವರ ನಾಕಾ ರಸ್ತೆ, ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ರಸ್ತೆ, ತಗ್ಗು ಪ್ರದೇಶಗಳ ರಸ್ತೆಗಳು, ಅಥಣಿ ರಸ್ತೆ, ಆಶ್ರಮ ರಸ್ತೆಯಲ್ಲಿರುವ ಬಿಎಲ್‌ಡಿಇ ಆಸ್ಪತ್ರೆ ರಸ್ತೆ, ಬಬಲೇಶ್ವರ ನಾಕಾ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿವೆ.
Youtube Video

ಒಂದೆಡೆ ರಸ್ತೆಗಳ ಕಾಮಗಾರಿ ನಡೆಯುತ್ತಿದೆಯಾದರೂ ಅವು ಪೂರ್ಣವಾಗುವವರೆಗಾದರೂ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶವನ್ನು ಹೆಚ್ಚಿಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ, ತಮ್ಮ ನಾಗಠಾಣ(ಮೀ) ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಲ್ಕು ವಾರ್ಡುಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಗಮನ ಸೆಳೆದು ಮಹಾನಗರ ಪಾಲಿಕೆಯ ಆಯುಕ್ತರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಪ್ರಸ್ತುತ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
Published by: Sushma Chakre
First published: September 10, 2020, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories