HOME » NEWS » State » KARNATAKA RAIN HEAVY RAIN IN DAKSHINA KANNADA RED ALERT IN MANGALORE SCT

Mangaluru Rain: ಮಂಗಳೂರಿನಲ್ಲಿ ಮಹಾಮಳೆ; 50ಕ್ಕೂ ಹೆಚ್ಚು ಮನೆಗಳು ಮುಳುಗಡೆ

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಿನ್ನೆ ರಾತ್ರಿಯಿಂದಲೇ ಭಾರೀ ಮಳೆಯಾಗುತ್ತಿದೆ. ಎಡೆಬಿಡದೆ ಸುರಿದ ಮಳೆಯಿಂದ ಪರಿಸರದ 50ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಿದ್ದವು.

news18-kannada
Updated:September 11, 2020, 4:08 PM IST
Mangaluru Rain: ಮಂಗಳೂರಿನಲ್ಲಿ ಮಹಾಮಳೆ; 50ಕ್ಕೂ ಹೆಚ್ಚು ಮನೆಗಳು ಮುಳುಗಡೆ
ಮಂಗಳೂರಿನಲ್ಲಿ ಪ್ರವಾಹ
  • Share this:
ಮಂಗಳೂರು (ಸೆ. 11): ಕರಾವಳಿ ಜಿಲ್ಲೆಯಾ ದಕ್ಷಿಣ ಕನ್ನಡದಲ್ಲಿ ಸುರಿದ ಭಾರೀ ಮಳೆ ಹಲವು ಅವಾಂತರವನ್ನು ಸೃಷ್ಟಿಸಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಕ್ಕೆ ನೆರೆ ನೀರು ನುಗ್ಗಿ ಮನೆಗಳು ಜಲಾವೃತವಾಗಿತ್ತು. ಫ್ಲಾಟ್​ ಒಂದರ ಹಿಂಭಾಗದಲ್ಲಿ ಧರೆ ಕುಸಿದು ಆತಂಕಕ್ಕೆ ಕಾರಣವಾಗಿದೆ. ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಿನ್ನೆ ರಾತ್ರಿಯಿಂದಲೇ ಭಾರೀ ಮಳೆಯಾಗುತ್ತಿದೆ. ಪರಿಣಾಮ ಮಂಗಳೂರು ಹೊರವಲಯದ ಜಪ್ಪಿನಮೊಗರು ಪರಿಸರದಲ್ಲಿ ಕೃತಕ ನೆರೆ ಉಂಟಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದ ಪರಿಸರದ 50ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಿದ್ದವು.

ನೆರೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ, ಹೋಮ್ ಗಾರ್ಡ್, ಪೋಲೀಸ್ ಇಲಾಖೆಗಳ ಸಿಬ್ಬಂದಿಗಳು ದೌಡಾಯಿಸಿದರು. ಮನೆಯೊಳಗಿದ್ದ ಸಣ್ಣ ಮಕ್ಕಳು, ವೃದ್ದರು, ಅನಾರೋಗ್ಯ ಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದರು. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಬೋಟ್ ಮೂಲಕ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

2018ರಲ್ಲಿಯೂ ಈ ಭಾಗದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿತ್ತು. ಭಾರೀ ಪ್ರಮಾಣದಲ್ಲಿ ಮಳೆ ಸುರಿದಾಗ ನೀರು ಹೋಗುವುದಕ್ಕೆ ಜಾಗವಿಲ್ಲದೆ ರಸ್ತೆ ಯಾವುದು, ಚರಂಡಿ ಯಾವುದು, ಜನ ವಸತಿ ಪ್ರದೇಶ ಯಾವುದು ಎಂಬುವುದೇ ಇಲ್ಲಿ ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Dope Test: ಡೋಪ್ ಟೆಸ್ಟ್ ಎಂದರೇನು?; ದೇಹದಲ್ಲಿರುವ ಡ್ರಗ್ಸ್​ ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಪೂರ್ತಿ ಮಾಹಿತಿ

ಒಂದು ಕಡೆ ಮಳೆಯಿಂದ ತಗ್ಗು ಪ್ರದೇಶಕ್ಕೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೆ, ಇನ್ನೊಂದು ಕಡೆ ಫ್ಲ್ಯಾಟ್ ಹಿಂಭಾಗದ ಧರೆ ಕುಸಿದು ಹಲವು ವಾಹನಗಳು ಜಖಂ ಆದ ಘಟನೆಯೂ ನಡೆದಿದೆ. ಮಂಗಳೂರಿನ ಕೊಂಚಾಡಿಯಲ್ಲಿ 12 ಅಂತಸ್ತಿನ ಎಸೆಲ್ ಹೈಟ್ಸ್ ಫ್ಲ್ಯಾಟ್ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫ್ಲ್ಯಾಟ್​ನಲ್ಲಿದ್ದ ನೂರಾರು ಮಂದಿ ನಿವಾಸಿಗಳ ಸ್ಥಳಾಂತರ ಮಾಡಲಾಯಿತು. ಫ್ಲಾಟ್‌ನ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು ಸ್ಥಳಕ್ಕೆ SDRF, NDRF ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿಯೂ ಮಳೆಯಾಗಿದ್ದು, ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಒಮ್ಮೆ ವಿರಾಮ ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟವನ್ನು ತೋರ್ಪಡಿಸಿದ್ದಾನೆ.
Published by: Sushma Chakre
First published: September 11, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories