HOME » NEWS » State » KARNATAKA RAIN FLOOD SCARE IN YADAGIRI BHIMA RIVER NORTH KARNATAKA FLOODS SCT

Karnataka Flood: ಭೀಮಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ; ಯಾದಗಿರಿಯ ದೇಗುಲಗಳಿಗೆ ಜಲದಿಗ್ಬಂಧನ

ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ತೀರದಲ್ಲಿರುವ ಕಂಗೇಶ್ವರ ಹಾಗೂ ವೀರಾಂಜನೇಯ ದೇಗುಲಗಳು ಜಲಾವೃತವಾಗಿವೆ. ಕಳೆದ ತಿಂಗಳು ದೇಗುಲಗಳು ಜಲಾವೃತಗೊಂಡಿದ್ದವು. ಈಗ ಮತ್ತೆ ದೇವಸ್ಥಾನಗಳಿಗೆ ಜಲದಿಗ್ಬಂಧನ ಹಾಕಲಾಗಿದೆ.

news18-kannada
Updated:September 12, 2020, 7:53 AM IST
Karnataka Flood: ಭೀಮಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ; ಯಾದಗಿರಿಯ ದೇಗುಲಗಳಿಗೆ ಜಲದಿಗ್ಬಂಧನ
ಭೀಮಾ ನದಿಯಲ್ಲಿ ಮುಳುಗಿರುವ ದೇವಸ್ಥಾನಗಳು
  • Share this:
ಯಾದಗಿರಿ: ಕಳೆದ ತಿಂಗಳು ತಾನೇ ಕೃಷ್ಣಾ ಹಾಗೂ ಭೀಮಾ ನದಿಯ ಪ್ರವಾಹಕ್ಕೆ ನದಿ ತೀರದ ಜಮೀನುಗಳಿಗೆ  ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಕೂಡ ಹಾನಿಯಾಗಿತ್ತು. ನೀರಿನ ಹರಿವು ಕಡೆಯಾಗಿದೆ ಎಂದು ನದಿ ತೀರದ ಗ್ರಾಮಸ್ಥರು ನೆಮ್ಮದಿಯಾಗಿರುವಷ್ಟರಲ್ಲಿಯೇ ಮತ್ತೆ ಭೀಮಾ ನದಿಯು ಉಕ್ಕಿ ಹರಿಯುತ್ತಿರುವ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತೆ ಭಾರೀ ಮಳೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜ್ಜಯಿನಿ, ವೀರ್ ಜಲಾಶಯಗಳಿಂದ ನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್​ನಿಂದ ಭೀಮಾ ನದಿಗೆ ಮತ್ತೆ 25 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಭೀಮಾ ನದಿಯು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನಿನ್ನೆಯಿಂದ ಭೀಮಾ ನದಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ.

ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ತೀರದಲ್ಲಿರುವ ಕಂಗೇಶ್ವರ ಹಾಗೂ ವೀರಾಂಜನೇಯ ದೇಗುಲಗಳು ಜಲಾವೃತವಾಗಿವೆ. ಕಳೆದ ತಿಂಗಳು ದೇಗುಲಗಳು ಜಲಾವೃತಗೊಂಡಿದ್ದವು. ಈಗ ಮತ್ತೆ ದೇವಸ್ಥಾನಗಳಿಗೆ ಜಲದಿಗ್ಬಂಧನ ಹಾಕಲಾಗಿದೆ. ಭಕ್ತರಿಗೆ ದೇವರ ದರ್ಶನ ಭಾಗ್ಯ ಮರೀಚಿಕೆಯಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸಹಾಯಕ ಆಯುಕ್ತ ಶಂಕರ ಗೌಡ ಸೋಮನಾಳ ಮಾತನಾಡಿ, ಭೀಮಾ ನದಿಯಲ್ಲಿ ಮತ್ತೆ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು ನದಿ ತೀರಕ್ಕೆ  ಹೋಗಬಾರದೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಭೀತಿ; ಈ ವರ್ಷ ಉತ್ತರ ಕರ್ನಾಟಕದ ಜನಪ್ರಿಯ ಕೃಷಿ‌ ಮೇಳ ರದ್ದು

ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್!:

ಸೆ.6 ರಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನ ಮುಂಭಾಗದಲ್ಲಿ ನಾಲ್ವರು ಬಾಲಕರು ಭೀಮಾ ನದಿ ಪಾಲಾಗಿದ್ದರು. ಈ ಘಟನೆ ನಂತರ ಖುದ್ದು‌‌ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅವರು ಕೂಡ ಭೇಟಿ ನೀಡಿ‌ ಪರಿಶೀಲನೆ ಮಾಡಿ ನದಿ ತೀರಕ್ಕೆ ‌ಜನರು ತೆರಳದಂತೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಅವರ ಸೂಚನೆ ನಂತರ ಬ್ರಿಡ್ಜ್  ಕಂ ಬ್ಯಾರೇಜ್ ನಲ್ಲಿ ನದಿಯೊಳಗೆ ತೆರಳದಂತೆ ಮುಳ್ಳು ಕಂಟಿ ಹಾಕಿ ಜನರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ.

Flood Scare in Yadagiri Bhima River North Karnataka Floods.
ಭೀಮಾ ತೀರದಲ್ಲಿ ಸ್ನಾನ ಮಾಡುತ್ತಿರುವ ಜನರು


ಆದರೆ, ಇದೆ ಬ್ಯಾರೇಜ್ ಮುಂಭಾಗದ ಸ್ವಲ್ಪ ದೂರದಲ್ಲಿರುವ ಭೀಮಾನದಿ ಸೇತುವೆ ಭಾಗದ ಸಮೀಪದ ಕಂಗಳೇಶ್ವರ ಮಂದಿರ ಸಮೀಪ ಸಾಕಷ್ಟು ಜನರು ಆಗಮಿಸಿ ನದಿಯ ಒಳಗೆ ಇಳಿದು ಸ್ನಾನ ಮಾಡುವ ಜೊತೆ ನದಿ ಪಾತ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುತ್ತಿದ್ದಾರೆ. ಕೆಲ ಮದ್ಯವ್ಯಸನಿಗಳು ಮದ್ಯ ಸೇವಿಸಿ ನದಿ ಪಾತ್ರಕ್ಕೆ ಆಗಮಿಸಿ ಸ್ನಾನ ಮಾಡುತ್ತಿದ್ದಾರೆ .

ಯಾದಗಿರಿ ನಗರದ ಹೊರಭಾಗದ ಭೀಮಾ ನದಿಯು ಈಗ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ‌ಜಿಲ್ಲಾಡಳಿತ ನದಿ ಪಾತ್ರಕ್ಕೆ ಯಾರು ತೆರಳಬಾರದೆಂದು ಸೂಚನೆ ನೀಡಿದೆ. ಆದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಕೆಲ ಮಂತ್ರವಾದಿಗಳು ನದಿ ತೀರದಲ್ಲಿಯೇ ಮಾಟಮಂತ್ರ‌ ಮಾಡುತ್ತಿದ್ದಾರೆ. ಒಂದು ವೇಳೆ ಮತ್ತೆ ಏನಾದರೂ ದುರ್ಘಟನೆ ಆದರೆ ಇದಕ್ಕೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ‌ನದಿ ತೀರಕ್ಕೆ ಜನರು ತೆರಳುತ್ತಿದ್ದಾರೆ. ಜನರು ಜಿಲ್ಲಾಡಳಿತ ದ ಆದೇಶ ಪಾಲನೆ ಮಾಡಿ ಅಮೂಲ್ಯ ಜೀವನದ ಕಾಳಜಿ ತೊರಬೇಕಿದೆ.
Published by: Sushma Chakre
First published: September 12, 2020, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories