Mysuru: ಏಕಾಏಕಿ ಕಬಿನಿ ಡ್ಯಾಂನಿಂದ ನೀರು ಬಿಡುಗಡೆ; ಕಪಿಲಾ ನದಿ ತೀರದಲ್ಲಿ ಪ್ರವಾಹ ಭೀತಿ
Kabini Dam: ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗುತ್ತಿದೆ ಎಂದು ಮಾಹಿತಿ ನೀಡದೆ ನದಿಗೆ ನೀರು ಬಿಟ್ಟ ಅಧಿಕಾರಿಗಳ ವರ್ತನೆಯಿಂದ ನದಿಪಾತ್ರದ ಜನರು ಆತಂಕಕ್ಕೊಳಗಾಗಿದ್ದರು.
news18-kannada Updated:September 20, 2020, 10:04 AM IST

ಕಬಿನಿ ಡ್ಯಾಂನ ಸಾಂದರ್ಭಿಕ ಚಿತ್ರ
- News18 Kannada
- Last Updated: September 20, 2020, 10:04 AM IST
ಮೈಸೂರು (ಸೆ. 20): ಕಬಿನಿ ಜಲಾಶಯದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಜಲಾಶಯದಿಂದ ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ರಾತ್ರಿ ನೀರು ಬಿಟ್ಟಿರುವ ನೀರಾವರಿ ಇಲಾಖೆ ಅಧಿಕಾರಿಗಳು ಬೆಳಗ್ಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆದೇಶ ಹೊರಡಿಸಿದ್ದಾರೆ.
ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗುತ್ತಿದೆ ಎಂದು ಮಾಹಿತಿ ನೀಡದೆ ನದಿಗೆ ನೀರು ಬಿಟ್ಟ ಅಧಿಕಾರಿಗಳ ವರ್ತನೆಗೆ ನದಿಪಾತ್ರದ ಜನರು ಆಕ್ರೋಶ ಹೊರಹಾಕಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ ನದಿಗೆ ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ನೀಡದೆ ಏಕಾಏಕಿ ನದಿಗೆ ನೀರು ಬಿಟ್ಟಿದ್ದರಿಂದ ಡ್ಯಾಂ ನೀರು ಸೇತುವೆ ಮೇಲೆ ಹರಿದಿದೆ. ಇದರಿಂದ ಅವಾಂತರ ಸೃಷ್ಟಿಯಾಗಿತ್ತು. ಜೀವಭಯದಲ್ಲಿ ಒಂದು ಬದಿಯಿಂದ ಮತ್ತೊಂದು ಕಡೆಗೆ ತೆರಳಿದ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Mandya: ಮಂಡ್ಯ ಅರ್ಚಕರ ಕೊಲೆ ಪ್ರಕರಣ; ಇದುವರೆಗೂ 9 ಆರೋಪಿಗಳ ಬಂಧನ
ಜನ-ಜಾನುವಾರು ಹಾಗೂ ಆಸ್ತಿ-ಪಾಸ್ತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ. ಕಬಿನಿ ಜಲಾಶಯದ ಇಂದಿನ ಒಳಹರಿವು 26,000 ಕ್ಯೂಸೆಕ್, ಇಂದಿನ ಹೊರಹರಿವು ಒಟ್ಟು 35,000 ಕ್ಯೂಸೆಕ್ ಇದೆ. ಜಲಾಶಯದ ಇಂದಿನ ನೀರಿನ ಮಟ್ಟ 2,284 ಅಡಿ ಇದೆ. ಜಲಾಶಯದಲ್ಲಿಂದು 19.52 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.
ನಿನ್ನೆ ತಡರಾತ್ರಿ ಎಚ್.ಡಿ.ಕೋಟೆಯ ಕಬಿನಿ ಡ್ಯಾಂನಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸ್ಥಳೀಯರಿಂದ ಡ್ಯಾಂನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ಎಚ್ಚೆತ್ತ ಅಧಿಕಾರಿಗಳು ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ. ಯಾವುದೇ ಅಳತೆ ಇಲ್ಲದೆ ನೀರು ಹರಿಸಿದ ಸಿಬ್ಬಂದಿಯ ವರ್ತನೆಯಿಂದ ಸೇತುವೆ ಮೇಲೆ ರಸ್ತೆ ಮಾರ್ಗದ ಸೇತುವೆ ಮೇಲೆ ತೆರಳುತ್ತಿದ್ದವರಿಗೆ ಶಾಕ್ ಎದುರಾಗಿದೆ. ಡ್ಯಾಂ ಮುಂಭಾದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆಯ ಮೇಲೆ ನೀರು ಹರಿದ ಕಾರಣದಿಂದ ಜನರು ಆತಂಕಗೊಂಡಿದ್ದರು.
ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗುತ್ತಿದೆ ಎಂದು ಮಾಹಿತಿ ನೀಡದೆ ನದಿಗೆ ನೀರು ಬಿಟ್ಟ ಅಧಿಕಾರಿಗಳ ವರ್ತನೆಗೆ ನದಿಪಾತ್ರದ ಜನರು ಆಕ್ರೋಶ ಹೊರಹಾಕಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ ನದಿಗೆ ನೀರು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ನೀಡದೆ ಏಕಾಏಕಿ ನದಿಗೆ ನೀರು ಬಿಟ್ಟಿದ್ದರಿಂದ ಡ್ಯಾಂ ನೀರು ಸೇತುವೆ ಮೇಲೆ ಹರಿದಿದೆ. ಇದರಿಂದ ಅವಾಂತರ ಸೃಷ್ಟಿಯಾಗಿತ್ತು. ಜೀವಭಯದಲ್ಲಿ ಒಂದು ಬದಿಯಿಂದ ಮತ್ತೊಂದು ಕಡೆಗೆ ತೆರಳಿದ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.