ರಾಜ್ಯದಲ್ಲಿ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 62, ಕಾಣೆಯಾದವರು 14; ನೆರೆಯಿಂದಾದ ನಷ್ಟದ ಬಗ್ಗೆ ಇಲ್ಲಿದೆ ಮಾಹಿತಿ

22 ಜಿಲ್ಲೆಯ 103 ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದೆ. ಈ ನೆರೆಯಿಂದ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿಕೆ ಆಗಿದೆ. ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವರ ಸಂಖ್ಯೆ 14. ಇವರನ್ನು ರಕ್ಷಣಾ ತಂಡದವರು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.

Rajesh Duggumane | news18
Updated:August 16, 2019, 8:00 AM IST
ರಾಜ್ಯದಲ್ಲಿ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 62, ಕಾಣೆಯಾದವರು 14; ನೆರೆಯಿಂದಾದ ನಷ್ಟದ ಬಗ್ಗೆ ಇಲ್ಲಿದೆ ಮಾಹಿತಿ
ಕರ್ನಾಟಕ ಪ್ರವಾಹ
  • News18
  • Last Updated: August 16, 2019, 8:00 AM IST
  • Share this:
ಬೆಂಗಳೂರು (ಆ.16): ರಾಜ್ಯದಲ್ಲಿ ಭಾರೀ ಪ್ರವಾಹ ಸೃಷ್ಟಿಸಿದ್ದ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಇದರಿಂದ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಆದರೆ, ನೆರೆಗೆ ಕೊಚ್ಚಿಹೋದ ಜನರ ಬದುಕು ಮಾತ್ರ ಇಂದು ನಾಳೆಗೆ ಸರಿಯಾಗುವ ಲಕ್ಷಣ ಗೋಚರವಾಗುತ್ತಿಲ್ಲ. ಪ್ರವಾಹದಿಂದ ರಾಜ್ಯದಲ್ಲಿ ಆದ ಹಾನಿಗಳೇನು ಎನ್ನುವ ಬಗ್ಗೆ ಸರ್ಕಾರ ಸಂಪೂರ್ಣ ಮಾಹಿತಿ ನೀಡಿದೆ.

22 ಜಿಲ್ಲೆಯ 103 ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದೆ. ಈ ನೆರೆಯಿಂದ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿಕೆ ಆಗಿದೆ. ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವರ ಸಂಖ್ಯೆ 14. ಇವರನ್ನು ರಕ್ಷಣಾ ತಂಡದವರು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ಮಳೆಯಿಂದಾಗಿ ಸರಿಯಾಗಿ ರಕ್ಷಣೆ, ಆಶ್ರಯ ಸಿಗದೆ ಒಟ್ಟು 867 ಪ್ರಾಣಿಗಳು ಅಸುನೀಗಿವೆ. 6,97,948 ಜನರನ್ನು ಸ್ಥಳಾಂತರ ಮಾಡಲಾಗಿದೆ. 51,460 ಜಾನುವಾರುಗಳ ರಕ್ಷಣೆ ಮಾಡಲಾಗಿದೆ. 943 ಸಂತ್ರಸ್ತರ ಕೇಂದ್ರ ತೆರೆಯಲಾಗಿದ್ದು, ಇದರಲ್ಲಿ 3,57,243 ಆಶ್ರಯ ಪಡೆದಿದ್ದಾರೆ. 5.35ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. 71,234 ಮನೆಗಳು ನೆಲಸಮವಾಗಿವೆ ಎಂಬುದು ಸರ್ಕಾರ ನೀಡುವ ವರದಿ.

ಇದನ್ನೂ ಓದಿ: ಭಾರೀ ಪ್ರವಾಹಕ್ಕೆ ತತ್ತರಿಸಿದ ಚಿಕ್ಕಮಗಳೂರು; ನೆಲಕ್ಕುರುಳಿದ 600ಕ್ಕೂ ಹೆಚ್ಚು ಮನೆಗಳು!

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈಗ ಮಳೆಯ ಪ್ರಮಾಣ ಕಡಿಮೆ ಆಗಿದೆ. ಸೋಮವಾರ, ಮಂಗಳವಾರ ಕೊಂಚ ತಗ್ಗಿದ್ದ ಮಳೆಯ ಅಬ್ಬರ ಇಂದು ಮತ್ತಷ್ಟು ಕುಗ್ಗಿದೆ. ಕರಾವಳಿ, ಮಲೆನಾಡು ಹಾಗು ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...