Karnataka HSC Board Result 2021: ನಾಳೆ ಸಂಜೆ 4.30ಕ್ಕೆ ಪಿಯು ಫಲಿತಾಂಶ; ರಿಜಿಸ್ಟರ್​​ ನಂಬರ್​​, ರಿಸಲ್ಟ್​​​​ ಪಡೆಯುವ ವಿಧಾನ ಇಲ್ಲಿದೆ

(Karnataka 2nd PUC result, Karnataka HSC Board Result 2021): ನಾಳೆ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳಿಗೆ ಒಪ್ಪಿಗೆ ಇಲ್ಲವಾದರೆ ಅವರು ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    2020-21ನೇ ಸಾಲಿನ ಪಿಯುಸಿ ಫಲಿತಾಂಶ (Karnataka 2nd PU Result) ನಾಳೆ ಸಂಜೆ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ. ನಾಳೆ ಸಂಜೆ 4. 30ಕ್ಕೆ ಪಿಯು ಮಂಡಳಿ ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಿದೆ. http://pue.kar.nic.in/ ವೈಬ್ ಸೈಟ್ ಮೂಲಕ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶಕ್ಕೂ ಮುನ್ನ Know my register numbar ಮೂಲಕ ರಿಜಿಸ್ಟರ್​ ನಂಬರ್ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಕೊರೋನಾ ಹಿನ್ನಲೆ ಈ ಬಾರಿ ಪರೀಕ್ಷೆ ನಡೆಸದೇ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಹಾಗೂ ಆಂತರಿಕ ಅಂಕಗಳ ಮೌಲ್ಯ ಮಾಪನ ನಡೆಸಿ ಫಲಿತಾಂಶ ಪ್ರಕಟ ಮಾಡಲಾಗುತ್ತಿದೆ. ನಾಳೆ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳಿಗೆ ಒಪ್ಪಿಗೆ ಇಲ್ಲವಾದರೆ ಅವರು ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಮತ್ತೆ ಹಳೆ ಅಂಕ ಪಡೆಯಲು ಅವಕಾಶ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

    ಈ ವರ್ಷ 5 ಲಕ್ಷ 90 ಸಾವಿರದ 153 ಹೊಸ ವಿದ್ಯಾರ್ಥಿಗಳು ಮತ್ತು 76 ಸಾವಿರ 344 ರಿಪೀಟರ್ಸ್ ಸೇರಿದಂತೆ ಒಟ್ಟು 6 ಲಕ್ಷ 66 ಸಾವಿರದ 497 ವಿದ್ಯಾರ್ಥಿಗಳ ಫಲಿತಾಂಶ ನಾಳೆ ಪ್ರಕಟವಾಗಲಿದೆ.

    ಈ ವರ್ಷ ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಎಸ್​ಎಸ್​ಎಲ್​ಸಿ, ಪ್ರಥಮ ಪಿಯುಸಿ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸಿ, ವೃತ್ತಿಪರ ಕೋರ್ಸ್​ಗೆ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಮಾತ್ರ ಪರಿಗಣಿಸುವುದಾಗಿ ಘೋಷಿಸಲಾಗಿದೆ.

    ಫಲಿತಾಂಶ ನೋಡುವುದು ಹೇಗೆ? (how to Check PU Result)
    ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದ ರಿಜಿಸ್ಟರ್​ ನಂ ಮೂಲಕ ಫಲಿತಾಂಶವನ್ನು ನೋಡುತ್ತಿದ್ದರು. ಆದರೆ, ಈ ಬಾರಿ ಪರೀಕ್ಷೆ ಬರೆಯದೇ ಯಾವ ರಿಜಿಸ್ಟರ್​ ನಂಬರ್​ ಮೂಲಕ ಫಲಿತಾಂಶ ನೋಡುವುದು ಎಂಬ ಅನುಮಾನ ಇದೆ. ಇದೇ ಕಾರಣಕ್ಕೆ ಪಿಯು ಮಂಡಳಿ ಈ ಬಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ರಿಜಿಸ್ಟರ್​ ನಂಬರ್​ ಸೃಷ್ಟಿಸಿದೆ. ಇದನ್ನು ಕೂಡ ಮಂಡಳಿಯ ವೆಬ್​ಸೈಟ್​ ಮೂಲಕವೇ ಪಡೆಯ ಬೇಕಾಗಿದೆ, ಈಗಾಗಲೇ ಈ ರಿಜಿಸ್ಟರ್​ ನಂಬರ್​ ಪಡೆಯಲು ಅವಕಾಶ ನೀಡಲಾಗಿದೆ.

    ಮಂಡಳಿಯ ವೆಬ್​ಸೈಟ್ http://pue.kar.nic.in/​ ತೆರೆದಾಕ್ಷಣ ನಿಮಗೆ Know my register numbar ಎಂಬ ಲಿಂಕ್​ ಸಿಗುತ್ತದೆ. ಅದನ್ನು ಕ್ಲಿಕ್​ ಮಾಡಿದರೆ ಅದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ರಿಜಿಸ್ಟರ್ ನಂಬರ್​ ಸಿಗಲಿದೆ. ಈ ಲಿಂಕ್​ ಮೂಲಕ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದು.

    ಪಿಯು ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್​ ಮಾಡಿ. https://dpue-exam.karnataka.gov.in/iipu2021_registrationnumber/regnumber
    Published by:Seema R
    First published: