• Home
 • »
 • News
 • »
 • state
 • »
 • Karnataka PSI Scam: ಪೊಲೀಸರ ತಳ್ಳಿ ಎಸ್ಕೇಪ್​ ಆಗಿದ್ದ PSI ಹಗರಣ ಕಿಂಗ್‌ಪಿನ್‌ ಆರ್​​ಡಿ ಪಾಟೀಲ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷ!

Karnataka PSI Scam: ಪೊಲೀಸರ ತಳ್ಳಿ ಎಸ್ಕೇಪ್​ ಆಗಿದ್ದ PSI ಹಗರಣ ಕಿಂಗ್‌ಪಿನ್‌ ಆರ್​​ಡಿ ಪಾಟೀಲ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷ!

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್

ಪ್ರಕರಣದಲ್ಲಿ ನನ್ನನ್ನು ಪ್ರಭಾವಿಗಳು ರಾಜಕೀಯ ಕುತಂತ್ರದಿಂದ ಸಿಲುಕಿಸಿದ್ದಾರೆ. ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ನನ್ನ ಮೇಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರ್​​ಡಿ ಪಾಟೀಲ್​ ಆರೋಪಿಸಿದ್ದಾರೆ.

 • News18 Kannada
 • 5-MIN READ
 • Last Updated :
 • Gulbarga, India
 • Share this:

ಕಲಬುರಗಿ: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Scam) ನಡೆದ ಅಕ್ರಮದ ಸಂಪೂರ್ಣ ರೂವಾರಿಯಾಗಿರುವ ಆರ್​ಡಿ ಪಾಟೀಲ್ (RD Patil)​​ ಸಿಐಡಿ ಪೊಲೀಸರನ್ನು (CID) ತಳ್ಳಿ ಎಸ್ಕೇಫ್​ ಆಗಿದ್ದಾರೆ. ಪೊಲೀಸರ ತಪ್ಪಿಸಿಕೊಂಡು ಎಸ್ಕೇಫ್​ ಆದ ಬಳಿಕ ಆರೋಪಿ ಸಾಮಾಜಿಕ ಜಾಲತಾಣದಲ್ಲಿ (Social Media) ಪತ್ತೆಯಾಗಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ (Video) ಮಾಡಿ ಪ್ರಕರಣದ ಬಗ್ಗೆ ಮಾತನಾಡಿದ್ದಾನೆ. ಅಲ್ಲದೇ ಪ್ರಕರಣದಲ್ಲಿ ನನ್ನನ್ನು ಪ್ರಭಾವಿಗಳು ರಾಜಕೀಯ ಕುತಂತ್ರದಿಂದ ಸಿಲುಕಿಸಿದ್ದಾರೆ. ನನ್ನ ಸಾಮಾಜಿಕ ಸೇವೆ (Social Service) ನೋಡಿ ರಾಜಕೀಯಕ್ಕೆ ಬರಬಹುದೆಂದು ನನ್ನ ಮೇಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ


ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿರುವ ಆರ್‌ಡಿ ಪಾಟೀಲ್‌, ವಿಶೇಷವಾಗಿ ನನ್ನ ಅಭಿಮಾನಿಗಳಿಗೆ ನಿಮ್ಮ ಆರ್‌ಡಿ ಪಾಟೀಲ್‌ ಮಾಡುವ ನಮಸ್ಕಾರಗಳು. ಕಳೆದ 9 ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ.


mysuru women psi ashwini anantapur suspended over psi scam
ಕರ್ನಾಟಕ ಲೋಕಸೇವಾ ಆಯೋಗ


ಇದನ್ನೂ ಓದಿ: Karnataka PSI Scam: ಪಿಎಸ್​ಐ ಅಕ್ರಮ ನೇಮಕಾತಿ ಹಗರಣ ಮುಚ್ಚಿ ಹಾಕಲು ಗೃಹ ಸಚಿವರ ಯತ್ನ; ಪ್ರಿಯಾಂಕ್​ ಖರ್ಗೆ ಆರೋಪ


ಕೆಲವೊಂದು ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ. ಯಾರೆನೇ ಕುತಂತ್ರ ಮಾಡಿದರೂ ನನ್ನ ಸಾಮಾಜಿಕ ಸೇವೆ ಮುಂದುವರಿಯುತ್ತೆ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ನನ್ನನ್ನ ಬಗ್ಗು ಬಡಿಯುವುದಕ್ಕೆ ಕೆಲ ರಾಜಕೀಯ ನಾಯಕರು ಮುಂದಾಗಿದ್ದಾರೆ. ಇಂತಹ ಹತ್ತು ಪ್ರಕರಣಗಳಲ್ಲಿ ಸಿಲುಕಿಸಿದ್ದರು ನನ್ನ ಸಾಮಾಜಿಕ ಕಾರ್ಯ ಮುಂದುವರಿಯುತ್ತೆ ಎಂದಿದ್ದಾರೆ.
ನಾನು ಓಡಿಹೋಗಿದ್ದೇನೆ ಅನ್ನೋದು ಸತ್ಯಕ್ಕೆ ದೂರ


ನಾನು ಅಫಜಲಪುರ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಯತ್ನಿಸಿಲ್ಲ. ನನ್ನನ್ನ ಈ ಪ್ರಕರಣದಲ್ಲಿ ಸಿಲುಕಿಸಿದ ಜನರಿಗೆ ಒಂದು ಮಾತು ಹೇಳುತ್ತೇನೆ. ನಮ್ಮ ಅಫಜಲಪುರ ಕ್ಷೇತ್ರದ ಜನತೆ ಬಯಸಿದರೆ 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ. ಸಿಐಡಿಯವರು ನನ್ನನ್ನ ಸುದೀರ್ಘ ವಿಚಾರಣೆ ನಡೆಸಿದ್ದು, ಸಂಪೂರ್ಣ ಸಹಕಾರ ನೀಡಿದ್ದೇನೆ.


ಸಿಐಡಿಯವರು ಮನೆಗೆ ಬಂದಾಗ ನಾನು ಹೊರಗಡೆ ಹೋಗಿದ್ದೆ. ನಾನು ಸಿಐಡಿ ಅಧಿಕಾರಿಯನ್ನ ತಳ್ಳಿ ಓಡಿಹೋಗಿದ್ದೀನಿ ಅನ್ನೊದು ಶುದ್ಧ ಸುಳ್ಳು. ನಾನು ಓಡಿಹೋಗಿದ್ದೇನೆ ಅಂತಾ ಮಾಧ್ಯಮಗಳಲ್ಲಿನ ವರದಿ ಸತ್ಯಕ್ಕೆ ದೂರ. ನಾನು ಇಲಾಖೆ ವಿರುದ್ಧ ನಡೆದುಕೊಳ್ಳುವ ವ್ಯಕ್ತಿಯೇ ಅಲ್ಲ. ಈ ನೆಲದ ಕಾನೂನಿಗೆ ಗೌರವ ಕೊಡುವ ಮನುಷ್ಯನಾಗಿದ್ದೇನೆ ಎಂದು ತಿಳಿಸಿದ್ದಾರೆ.


ಪಿಎಸ್​ಐ ಹಗರಣದ ಸಂಪೂರ್ಣ ರೂವಾರಿ ಆರ್​ಡಿ ಪಾಟೀಲ್​​ 


ಪಿಎಸ್ಐ ನೇಮಕಾತಿ ಪರೀಕ್ಷೆಯ ಹಗರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದ ಆರ್​ಡಿ ಪಾಟೀಲ್​ನನ್ನು ಮಹಾರಾಷ್ಟ್ರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದರು. ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಸಂಪೂರ್ಣ ರೂವಾರಿ ಈ ಆರ್​ಡಿ ಪಾಟೀಲ್​​. ಅಭ್ಯರ್ಥಿಗಳನ್ನ ಕಾಂಟ್ಯಾಕ್ಟ್ ಮಾಡಿ ಬ್ಲೂಟೂತ್​​ ಡಿವೈಸ್ ನೀಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: PSI Recruitment Scam: ನೇಮಕಾತಿ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್‌ ಬಂದಿದ್ದ ಯುವತಿ ಅರೆಸ್ಟ್


ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಆರ್​ಡಿ ಪಾಟೀಲ್​ ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಈ ನಡುವೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಲಾಗಿದೆ ಹಾಗೂ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು.


ಇದಕ್ಕೆ ಯಾವುದೇ ಪ್ರಕ್ರಿಯೆ ಸಿಗದ ಕಾರಣ ಆರ್​​​ಡಿ ಪಾಟೀಲ್​​ರನ್ನು ಬಂಧನ ಮಾಡಲು ನಿನ್ನೆ ರಾತ್ರಿ ಸಿಐಡಿ ಅಧೀಕಾರಿಗಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಆರ್​ಡಿ ಪಾಟೀಲ್​ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದರು ಎನ್ನಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Published by:Sumanth SN
First published: