• Home
  • »
  • News
  • »
  • state
  • »
  • PSI Recruitment Scam: ಕಿಂಗ್​ಪಿನ್​ಗಾಗಿ ಶೋಧ; ನನ್ನನ್ನು ಅರೆಸ್ಟ್​ ಮಾಡಿದ್ರೆ ಹುಷಾರ್​, ಡಿವೈಎಸ್​ಪಿಗೆ ಆರೋಪಿ ಆವಾಜ್​

PSI Recruitment Scam: ಕಿಂಗ್​ಪಿನ್​ಗಾಗಿ ಶೋಧ; ನನ್ನನ್ನು ಅರೆಸ್ಟ್​ ಮಾಡಿದ್ರೆ ಹುಷಾರ್​, ಡಿವೈಎಸ್​ಪಿಗೆ ಆರೋಪಿ ಆವಾಜ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಅಣ್ಣನನ್ನು ಬಂಧಿಸಿದ್ರೆ ಹುಷಾರ್​, ನಮ್ಮ ಹಿಂದೆ ಕೈ ನಾಯಕರಿದ್ದಾರೆ ಅರೆಸ್ಟ್ ಮಾಡುವ ಮುನ್ನ ಎಚ್ಚರ ಅಂತಾ ಸಿಐಡಿ ಡಿವೈಎಸ್​ಪಿಗೆ ಆರೋಪಿ‌ ಮಹಾಂತೇಶ್​ ಪಾಟೀಲ್ ತಮ್ಮ ಆವಾಜ್ ಹಾಕಿದ್ದಾರೆ.

  • Share this:

ಬೆಂಗಳೂರು (ಏ.22): ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ (PSI Recruitment) ಅಕ್ರಮ (Illegal) ಭಾರೀ ಸುದ್ದಿಯಾಗಿದ್ದು, ಅನೇಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಒಂದೊಂದೆ ವಿಚಾರ ಬಯಲಾಗ್ತಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಒಟ್ಟು 13 ಜನರ ಬಂಧನ (Arrest) ಮಾಡಲಾಗಿದೆ. ಪಿಎಸ್ ಐ ಪರೀಕ್ಷೆಯಲ್ಲಿ ಬ್ಲೂ ಟೂತ್ (Blue Tooth) ಬಳಸಿ ಪರೀಕ್ಷೆ ಬರೆದಿದ್ದ ಹಯ್ಯಾಳಿ ದೇಸಾಯಿಗೆ ಸಹಾಯ ಮಾಡಿದ್ದ ರುದ್ರಗೌಡ  ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್​ ಪಾಟೀಲ್​ನನ್ನು(Mahantesh Patil)  ಬಂಧಿಸಲಾಗಿದೆ. ರುದ್ರಗೌಡನ ಮೂಲಕ ಮಹಾಂತೇಶ್ ಪಾಟೀಲ್​ನನ್ನು ಹಯ್ಯಾಳಿ ದೇಸಾಯಿ ಭೇಟಿ ಮಾಡಿದ್ದ, ಮಹಾಂತೇಶ್ ಡಿ ಪಾಟೀಲ್ ಸುಮಾರು 5ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ (Candidates) ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ.


13 ಅಭ್ಯರ್ಥಿಗಳ ಬಂಧನ


ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು 13 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ವೀರೇಶ್ , ಪ್ರವೀಣ್, ಚೇತನ್ ನಂದಗಾಂವ್, ಅರುಣ್ ಬಂಧನ ಮಾಡಲಾಗಿದೆ. ಡಿಎಆರ್ ಹೆಡ್ ಕಾನ್ಸಟೇಬಲ್​ ಹಯ್ಯಾಳಿ ದೇಸಾಯಿ , ಸಿಎಆರ್ ಕಾನ್ಸಟೇಬಲ್ ರುದ್ರಗೌಡ ಪಾಟೀಲ್ , ಶರಣಬಸ್ಸಪ್ಪವಿಶಾಲ್ , ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್ ಹಾಗರಗಿ ಅಕ್ರಮಕ್ಕೆ ಸಾಥ್ ಕೊಟ್ಟವರಾಗಿದ್ದಾರೆ. ಜೊತೆಗೆ ಮೇಲ್ವಿಚಾರಕರಾದ ಸುಮಾ, ಸಾವಿತ್ರಿ, ಸಿದ್ದಮ್ಮ ಅಕ್ರಮದಲ್ಲಿ ಭಾಗಿಯಾಗಿದ್ದ ಮಹಾಂತೇಶ್ ಪಾಟೀಲ್ ಬಂಧನ ಮಾಡಲಾಗಿದೆ.


ಡಿವೈಎಸ್ ಪಿ ಶಂಕರಗೌಡಗೆ ಆರೋಪಿ ಆವಾಜ್​


ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಷ್ ಪಾಟೀಲ್ ಬಂಧನ ಹಿನ್ನೆಲೆ  ಸಿಐಡಿ ಡಿವೈಎಸ್ ಪಿ ಶಂಕರಗೌಡ ಅವರಿಗೆ ಆರೋಪಿ ಆವಾಜ್ ಹಾಕಿರೋದು ತಿಳಿದುಬಂದಿದೆ. ಮಹಾಂತೇಷ್ ಪಾಟೀಲ್ ಡಿವೈಎಸ್ ಪಿಗೇ ಬಂಧಿಸದಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೆ ಅಲ್ಲ ಈತನ ತಮ್ಮ  ಸಿಐಡಿ ಡಿವೈಎಸ್ ಪಿ ಶಂಕರಗೌಡ ಅವರಿಗೆ ಕರೆ ಮಾಡಿ ಆವಾಜ್​ ಹಾಕಿದ್ದಾರೆ. ನಮ್ಮ ಅಣ್ಣನನ್ನು ಬಂಧಿಸಿದ್ರೆ ಹುಷಾರ್​, ನಮ್ಮ ಹಿಂದೆ ಕೈ ನಾಯಕರಿದ್ದಾರೆ ಅರೆಸ್ಟ್ ಮಾಡುವ ಮುನ್ನ ಎಚ್ಚರ ಅಂತಾ ಸಿಐಡಿ ಡಿವೈಎಸ್​ಪಿಗೆ  ಆವಾಜ್ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿವೈಎಸ್ ಪಿ ಶಂಕರಗೌಡ, ಆರೋಪಿ‌ ಮಹಾಂತೇಶ್​ ಪಾಟೀಲ್ ಕೊರಳ ಪಟ್ಟಿ ಹಿಡಿದು ಎಳೆದೊಯ್ದಿದ್ದಾರೆ.


ಇದನ್ನೂ ಓದಿ: PSI Exam Scam: ಕಾಂಗ್ರೆಸ್​ ಶಾಸಕರ ಗನ್​ ಮ್ಯಾನ್ ಸೇರಿ ಇಬ್ಬರ ಬಂಧನ; ಪ್ರಕರಣದ ಆಳ ತನಿಖೆಗೆ ಸಿಎಂ ಸೂಚನೆ


​ಯಾರೇ ಆಗಿದ್ರು ಅವರ ವಿರುದ್ಧ ಕ್ರಮಕೈಗೊಳ್ಳಿ​


ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಧನ ವಿಚಾರಕ್ಕೆ ಸಂಬಂಧಿಸಿದ ಡಿ.ಕೆ ಶಿವಕುಮಾರ್​, ಯಾರೇ ಆಗಿದ್ರು ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದ್ರು. ಇನ್ನು ಈ ಹಗರಣವನ್ನ ಬಯಲಿಗೆಳೆದಿದ್ದೆ ಕಾಂಗ್ರೆಸ್‌, ಮೊದಲು ಪ್ರಿಯಾಂಕ ಖರ್ಗೆ ಅವರು ಹಗರಣ ಕುರಿತು ಮಾತಾಡಿದ್ದರು ಎಂದ್ರು. ಅಕ್ರಮದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಡಿಕೆಶಿ ಹೇಳಿದ್ದಾರೆ


ತಲೆ ಮರೆಸಿಕೊಂಡಿರೋ ದಿವ್ಯಾ ಹಾಗರಗಿ


ಪ್ರಮುಖ ಆರೋಪಿಯಾಗಿರುವ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ, ಶಾಲೆಯ ಮುಖ್ಯಗುರು ಕಾಶಿನಾಥ, ಸಹ ಶಿಕ್ಷಕಿ ಅಶ್ವಿನಿ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ವಿಚಾರಣೆಗೆ ಹಾಜರಾಗದೇ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದಾರೆ. ಈಗ ಬಂಧನದಲ್ಲಿರುವ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಮೇಲ್ವಿಚಾರಕರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.


ಎಬಿವಿಪಿ ಮುಖಂಡನೇ ಅಕ್ರಮದಲ್ಲಿ ಭಾಗಿ


545 ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿ ಅಧಿಕಾರಿಗಳು ಬಗೆದಷ್ಟು ಆಳವಾಗತೊಡಗಿದೆ. ಇದರೊಂದಿಗೆ ಎಬಿವಿಪಿ ಮುಖಂಡನೇ ಅಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೆ ಹಲವರನ್ನು ಕಿಂಗ್‌ಪಿನ್‌ ವ್ಯಕ್ತಿಗೆ ಪರಿಚಯಿಸಿರುವ ಸಾಧ್ಯತೆ ಇದೆ ಎನ್ನುವ ಸತ್ಯ ಕೊನೆಯ ಹಂತದ ವಿಚಾರಣೆಯಲ್ಲಿ ಬಯಲಾಗಿದೆ.


ಇದನ್ನೂ ಓದಿ: Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು


ವಿಚಾರಣೆ ವೇಳೆಯಲ್ಲಿ ಬಂಧಿತ ಅರುಣ್‌ ಪಾಟೀಲ ತಾನು ತುಂಬಾ ಬಡವ, ಲಕ್ಷಾಂತರ ರೂ. ನೀಡುವುದು ಸಾಧ್ಯವಿರಲಿಲ್ಲ. ನಾನು ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತನಾಗಿರುವ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥರ ಪರಿಚಯವಾಗಿತ್ತು. ನನಗೆ ಉಚಿತವಾಗಿ ಓಎಂಆರ್‌ ಶೀಟ್‌ ತಿದ್ದಿ ಅಂಕಗಳನ್ನು ಬರುವಂತೆ ಮಾಡಲಾಗಿದೆ. ಇದರಿಂದಾಗಿ ನಾನು ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಅರುಣ್‌ ಮಾಹಿತಿ ನೀಡಿದ್ದಾನೆಂದು ಮೂಲಗಳು ತಿಳಿಸಿವೆ.

Published by:ಪಾವನ ಎಚ್ ಎಸ್
First published: