ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ: ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ

ಪ್ರಥಮ ದರ್ಜೆ ಸಹಾಯಕರು /ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಜೂನ್ 8 ಶನಿವಾರದಂದು ನಡೆಯಲಿದ್ದು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಜೂನ್ 9 ಭಾನುವಾರದಂದು ನಡೆಯಲಿದೆ.

zahir | news18
Updated:May 17, 2019, 7:30 PM IST
ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ: ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ
@KPSC
zahir | news18
Updated: May 17, 2019, 7:30 PM IST
ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕರು (FDA) ಹಾಗೂ ದ್ವಿತೀಯ ದರ್ಜೆ ಸಹಾಯಕರು (SDA) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಈ ಹಿಂದೆ ಕೆಪಿಎಸ್​ಸಿಯಲ್ಲಿ ಖಾಲಿ ಇರುವ 844 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಆನ್​ಲೈನ್ ಮುಖಾಂತರ ನಡೆದಿದ್ದ ಅರ್ಜಿ ಪ್ರಕ್ರಿಯೆಯು ಮಾರ್ಚ್​ 20, 2019 ರಂದು ಕೊನೆಗೊಂಡಿತು. ಈ ವೇಳೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಜೂನ್ 8, 9 ಹಾಗೂ 16 ರಂದು ಪರೀಕ್ಷೆ ಇರಲಿದೆ ಎಂದು ತಿಳಿಸಿದೆ.

ಪ್ರಥಮ ದರ್ಜೆ ಸಹಾಯಕರು /ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಜೂನ್ 8 ಶನಿವಾರದಂದು ನಡೆಯಲಿದ್ದು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಜೂನ್ 9 ಭಾನುವಾರದಂದು ನಡೆಯಲಿದೆ. ಹಾಗೆಯೇ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜೂನ್ 16, 2019 ಭಾನವಾರದಂದು ನಡೆಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಪಂದ್ಯ: ಕೇವಲ ನಾಲ್ಕು ರನ್ನಿಗೆ ಆಲೌಟ್..!

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಲಿದ್ದು, ಈ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಕೆಪಿಎಸ್​ಸಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಕೆಪಿಎಸ್​ಸಿ ಪರೀಕ್ಷಾ ದಿನಾಂಕ


ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ