Tumkur: ವಿದ್ಯಾರ್ಥಿನಿಯ ಕಣ್ಣಿಗೆ ಗಾಯ ಮಾಡಿದ್ದ Teacherಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ Court..!

ತುಮಕೂರಿನ ಈದ್ಗಾ ಮೊಹಲ್ಲಾದಲ್ಲಿರುವ ಭಾರತ್ ಮಾತಾ ಶಾಲೆಯ ಶಿಕ್ಷಕಿ ರಹತ್ ಫಾತಿಮಾ ತನ್ನ ವಿದ್ಯಾರ್ಥಿನಿಯೊಬ್ಬಳ ಎಡಗಣ್ಣಿಗೆ ಕೋಲಿನಿಂದ ಹೊಡೆದು ಗಾಯಗೊಳಿಸಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಓದಿನಲ್ಲಿ ತನ್ನನ್ನು ತಾನು ಸರಿಯಾಗಿ ತೊಡಗಿಸಿಕೊಂಡಿಲ್ಲ ಎಂಬ ಕಾರಣಕ್ಕೆ 2011ರಲ್ಲಿ 7 ವರ್ಷದ ವಿದ್ಯಾರ್ಥಿನಿಯನ್ನು ಕಠಿಣವಾಗಿ ಶಿಕ್ಷಿಸಿ, ಆಕೆಯ ಎಡಗಣ್ಣು ಕಳೆದುಕೊಳ್ಳುವುದಕ್ಕೆ ರಾಜ್ಯದ ತುಮಕೂರಿನ (Tumkur) ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರು ಕಾರಣರಾದರು. ಈ ಸಂಬಂಧ ವಿಚಾರಣೆ ನಡೆಸಿದ ತುಮಕೂರಿನ ಮೂರನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ (JMFC Court Judge) ನ್ಯಾಯಾಧೀಶರಾದ ಶಾರದ ಕೊಪ್ಪದ್ (Shara Koppad) ಅವರು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಆರೋಪಿ ಶಿಕ್ಷಕಿಗೆ(Teacher) ಶಿಕ್ಷೆಗೆ ಗುರಿಪಡಿಸಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆ
ಇನ್ನು, ಶಿಕ್ಷಕಿ ರಹತ್‌ ಫಾತಿಮಾಗೆ ಜಾಮೀನು ದೊರೆತಿದ್ದು, ಆಕೆ ಬಿಡುಗಡೆಯಾಗಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಜಿ. ಬಸವರಾಜ್, ಶಿಕ್ಷಕಿ ದಂಡ ಪಾವತಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದರು . ಫೆಬ್ರವರಿ 17, 2011 ರಂದು ತುಮಕೂರಿನ ಈದ್ಗಾ ಮೊಹಲ್ಲಾದಲ್ಲಿರುವ ಭಾರತ್ ಮಾತಾ ಶಾಲೆಯ ಶಿಕ್ಷಕಿ ರಹತ್ ಫಾತಿಮಾ ತನ್ನ ವಿದ್ಯಾರ್ಥಿನಿಯೊಬ್ಬಳ ಎಡಗಣ್ಣಿಗೆ ಕೋಲಿನಿಂದ ಹೊಡೆದು ಗಾಯಗೊಳಿಸಿದರು. ಇದೀಗ ಪ್ರಥಮ ಪಿಯುಸಿ ಓದುತ್ತಿರುವ ಕೂಲಿ ಕಾರ್ಮಿಕನ ಮಗಳಾದ ಈ ಬಾಲಕಿಗೆ ಹಲವು ಬಾರಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿತ್ತು.

ಈ ಸಂಬಂಧ ತುಮಕೂರಿನ ತಿಲಕ್ ಪಾರ್ಕ್‌ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿ ತನಿಖೆ ನಡೆಸಿದ್ದಾರೆ. ಹಾಗೂ, ಸಬ್‌ ಇನ್ಸ್‌ಪೆಕ್ಟರ್ ದಿನೇಶ್ ಪಾಟೀಲ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ತುಮಕೂರಿನ ಜೆಂಎಫ್‌ಸಿ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್‌ನಲ್ಲೇ ತೀರ್ಪು ನೀಡಿತ್ತು. ಆದರೆ, ಈ ತೀರ್ಪು ಮಂಗಳವಾರವಷ್ಟೇ ಬಿಡುಗಡೆಯಾಯಿತು.

ಇದನ್ನೂ ಓದಿ: Rape: ಹೆಂಡತಿಯನ್ನು ರೇಪ್ ಮಾಡಲು ಸ್ನೇಹಿತನನ್ನು ಮನೆಗೆ ಕರೆಸಿಕೊಂಡ ಗಂಡ! ಮುಂದೇನಾಯ್ತು ಗೊತ್ತಾ?

ಶಿಕ್ಷಕನ ಹೊಡೆತದಿಂದ ಸಾವನ್ನಪ್ಪಿದ ವಿದ್ಯಾರ್ಥಿ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಇದೇ ರೀತಿಯ ಘಟನೆಯೊಂದರಲ್ಲಿ , ರಾಜಸ್ಥಾನದ ಚುರು ಜಿಲ್ಲೆಯಲ್ಲಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಹೋಮ್‌ವರ್ಕ್ ಅನ್ನು ಪೂರ್ಣಗೊಳಿಸದ ಕಾರಣಕ್ಕೆ 13 ವರ್ಷದ ವಿದ್ಯಾರ್ಥಿಯನ್ನು ಅಮಾನುಷವಾಗಿ ಥಳಿಸಿ ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ ನಂತರ ಶಿಕ್ಷಕನನ್ನು ಬಂಧಿಸಲಾಯಿತು.

ಪೆನ್ನಿನಿಂದ ವಿದ್ಯಾರ್ಥಿಯ ಕಣ್ಣಿಗೆ ಚುಚ್ಚಿ ಗಾಯ ಮಾಡಿದ ಕೇರಳದ ಶಿಕ್ಷಕಿಯೊಬ್ಬರು ಜೈಲು ಪಾಲು:
ಇಂತಹದೇ ಮತ್ತೊಂದು ಘಟನೆ ಕೇರಳದಲ್ಲೂ ನಡೆದಿತ್ತು . 3ನೇ ತರಗತಿಯ ವಿದ್ಯಾರ್ಥಿ, ತರಗತಿಯಲ್ಲಿ ಸರಿಯಾಗಿ ಗಮನ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಅವನ ಮೇಲೆ ಪೆನ್ನು ಎಸೆದು ಕಣ್ಣಿಗೆ ಗಾಯವನ್ನು ಉಂಟುಮಾಡಿದ ಕೇರಳದ ಶಾಲೆಯೊಂದರ ಶಿಕ್ಷಕಿಯೊಬ್ಬರನ್ನು ತಪ್ಪಿತಸ್ಥರೆಂದು ಗುರುತಿಸಲಾಗಿತ್ತು. ಆಕೆಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂ ದಂಡ ವಿಧಿಸಲಾಗಿತ್ತು .

ಮೂರು ಬಾರಿ ಶಸ್ತ್ರಚಿಕಿತ್ಸೆ
2005ರಲ್ಲಿ ಜನವರಿ 18ರಂದು ತಿರುವನಂತಪುರದ ಕಂದಾಳ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು ಎಂದು ಪ್ರಾಸಿಕ್ಯೂಟರ್ ಪರ ವಕೀಲರಾದ ಜೆ ಕೆ ಅಜಿತ್ ಪ್ರಸಾದ್ ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದರು. ತರಗತಿಯ ವೇಳೆ ವಿದ್ಯಾರ್ಥಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕಿ ಆತನ ಮೇಲೆ ಬಾಲ್ ಪಾಯಿಂಟ್ ಪೆನ್ ಎಸೆದು ಹಲ್ಲೆ ನಡೆಸಿದರು .

ಬಾಲಕನಿಗೆ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿದರೂ ಎಡಗಣ್ಣಿನ ದೃಷ್ಟಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ. ಇದೀಗ 25 ವರ್ಷ ವಯಸ್ಸಿನ ಮಾರನಲ್ಲೂರು ಮೂಲದ ಅಲ್ ಅಮೀನ್ ಹಲ್ಲೆಗೊಳಗಾದ ವಿದ್ಯಾರ್ಥಿ. ಪ್ರಾಸಿಕ್ಯೂಷನ್ ವಕೀಲರ ಪ್ರಕಾರ, ಈ ಘಟನೆ ಆತನ ಓದಿಗೆ ಅಡ್ಡಿಯಾಗಿದ್ದು ಮಾತ್ರವಲ್ಲದೆ ಆತನಿಗೆ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೂಡ ಸಾಧ್ಯವಾಗಲಿಲ್ಲ. ಅಪರಾಧಿ ಶೆರಿಫಾ ಶಾಜಹಾನ್ ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ .

ಇದನ್ನೂ ಓದಿ: ಪೊಲೀಸರು ಬಂದಾಕ್ಷಣ Mobile ನುಂಗಿದ ವಿಚಾರಣಾಧೀನ ಕೈದಿ; ಮುಂದೆ...

ಮಗು ಆಟವಾಡುವಾಗ ಈ ದುರಂತ ನಡೆದಿದೆ ಎಂದು ಹೇಳುವ ಮೂಲಕ ಶಾಲಾ ಅಧಿಕಾರಿಗಳು ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಪ್ರಸಾದ್ ಹೇಳಿದರು. ಶಿಕ್ಷಕ ಎಸೆದ ಪೆನ್‌ನಿಂದ ಗಾಯವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಬಾಲಕ ತಿಳಿಸಿದ . ಎಲ್ಲಾ ಸಾಕ್ಷಿಗಳು ಮತ್ತು ಶಾಲೆಯ ಇತರ ಶಿಕ್ಷಕರಿಂದ ಪ್ರತಿಕೂಲವಾದ ಸಾಕ್ಷ್ಯದ ಹೊರತಾಗಿಯೂ, ವೈದ್ಯಕೀಯ ದಾಖಲೆಗಳು ಮತ್ತು ಹುಡುಗನ ಪೋಷಕರ ಸಾಕ್ಷ್ಯದ ಕಾರಣದಿಂದಾಗಿ ಪ್ರಕರಣವು ಸಾಬೀತಾಯಿತು. ಘಟನೆಯ ನಂತರ, ಶಿಕ್ಷಕಿಯನ್ನು ಅಮಾನತುಗೊಳಿಸಲಾಯಿತು. ಆದರೆ ಇಲಾಖೆಯ ತನಿಖೆಯು ಆಕೆಯದು ಏನೂ ತಪ್ಪಿಲ್ಲ ಎಂದು ಹೇಳುವ ಮೂಲಕ ಅವಳನ್ನು ತೆರವುಗೊಳಿಸಿತು.
Published by:vanithasanjevani vanithasanjevani
First published: