• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Elections: ‘ಕರ್ನಾಟಕ ಚುನಾವಣೆಯಲ್ಲಿ ಸಿದ್ದು ಸೋಲಿಗೆ ಕಾಂಗ್ರೆಸ್​ನಲ್ಲೇ ಹುನ್ನಾರ!’ ನ್ಯೂಸ್​​18ಗೆ ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ

Karnataka Elections: ‘ಕರ್ನಾಟಕ ಚುನಾವಣೆಯಲ್ಲಿ ಸಿದ್ದು ಸೋಲಿಗೆ ಕಾಂಗ್ರೆಸ್​ನಲ್ಲೇ ಹುನ್ನಾರ!’ ನ್ಯೂಸ್​​18ಗೆ ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ

ಸಚಿವ ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿ

ಸಚಿವ ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿ

ಮಂಡ್ಯದ ನೆಲದಲೇ ಬಿಜೆಪಿ ಹೊಸ ಅಭಿಯಾನ ಶುರು ಮಾಡಿದ್ದು, ಕಾಂಗ್ರೆಸ್ ತನ್ನ ಮ್ಯಾನೋಫಸ್ಟ್ ನಲ್ಲಿ ಭಜರಂಗದಳ ನಿಷೇಧದ ಕುರಿತು ಪ್ರಸ್ಥಾಪಿಸಿರುವುದನ್ನೇ ಬಿಜೆಪಿ ನಾಯಕರು ಅಸ್ತ್ರವಾಗಿಸಿಕೊಂಡಿದ್ದಾರೆ.

 • News18 Kannada
 • 5-MIN READ
 • Last Updated :
 • Mandya, India
 • Share this:

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸೋಲಿಗೆ ಅವರದ್ದೇ ಪಕ್ಷದಲ್ಲಿ ಹುನ್ನಾರ ನಡೆದಿತ್ತಾ ಎಂಬ ಬಗ್ಗೆ ನ್ಯೂಸ್ 18ಗೆ ಅಶ್ವಥ್ ನಾರಾಯಣ್ (Ashwath Narayan) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ (Mandya) ಸಚಿವ ಅಶ್ವಥ್ ನಾರಾಯಣ್, ಸಿದ್ದರಾಮಯ್ಯ ಸೋಲಿಸುವ ರಹಸ್ಯ (Secret) ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಪಕ್ಷದಲ್ಲಿ ಸಿದ್ದರಾಮಯ್ಯ ಸೋಲಿಗೆ (Defeat) ಷಡ್ಯಂತರ ನಡೆದಿದ್ಯಂತೆ, ಆದರೆ ಷಡ್ಯಂತರದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಅವರ ಪಕ್ಷದಲ್ಲಿ ಕುತಂತ್ರ ನಡೆದಿದೆ. ಇದು ಸಿದ್ದರಾಮಯ್ಯ ಅವರಿಗೂ ತಿಳಿದಿದೆ ಎಂದು ಹೇಳಿದ್ದಾರೆ.


ಸೋಲಿಸಬೇಕು ಅಂತಿರೋದ್ರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ


ಯಾರು ಕುತಂತ್ರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೂ ತಿಳಿಸಿದೆ. ಸಿದ್ದರಾಮಯ್ಯ ಅವರ ಸೋಲಿಗೆ ಅವರ ಪಕ್ಷದವರೇ ಕಾದು ಕುಳಿತಿದ್ದಾರೆ. ಅವರ ಸೋಲಿಗೆ ಬೇಕಾದ್ದನ್ನು ಅವರ ನಾಯಕರ ಮಾಡ್ತಿದ್ದಾರೆ. ಅವರನ್ನು ಸೋಲಿಸಬೇಕು ಅಂತಿರೋದ್ರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ.
ಇದನ್ನೂ ಓದಿ: Karnataka Election 2023: ಮಂಡ್ಯದಲ್ಲಿ JDS​​​, ಕೈ ಕಾರ್ಯಕರ್ತರ ನಡುವೆ ಡಿಶುಂ ಡಿಶುಂ; ಕಲ್ಲು ತೂರಾಟ, ವಾಹನದ ಗಾಜು ಪುಡಿ ಪುಡಿ


ಸಿದ್ದರಾಮಯ್ಯರಿಗೆ ತುಂಬಾ ಆತಂಕ ಇದೆ, ಹೀಗಾಗಿ ವರುಣಾ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಮೈಕ್ರೋ ಡಿಟೈಲ್ಸ್ ಅನ್ನು ನಾನು ಹೇಳೋದಿಕ್ಕೆ ಆಗಲ್ಲ. ಒಟ್ಟಿನಲ್ಲಿ ಅವರ ಪಕ್ಷದಲ್ಲಿ ಅವರನ್ನು ಸೋಲಿಗೆ ಕುತಂತ್ರವಾಗಿದೆ. ಸಿದ್ದರಾಮಯ್ಯ ಸೋಲಿಗೆ ಏನು ಏನೇನು ಮಾಡಬೇಕೋ ಅದನ್ನೆಲ್ಲ ಅವರ ಪಕ್ಷದವರು ಮಾಡಿದ್ದಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.


ಹನುಮನ ಮುಸುಕು ಧಾರಣೆ ಅಭಿಯಾನ


ಇದಕ್ಕೂ ಮುನ್ನ ಸಚಿವ ಸಿ.ಎನ್ ಅಶ್ವಥ್ ನಾರಾಯಣ್​ ಅವರು ಹನುಮನ ಮುಸುಕು ಧಾರಣೆ ಅಭಿಯಾನಕ್ಕೆ ಚಾಲನೆ ನೀಡಿದರು. ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್ ಘೋಷಣೆ ಮೂಲಕ ಮತದಾನಕ್ಕೆ ಇನ್ನೊಂದು ದಿನ ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ.
ಮಂಡ್ಯದ ನೆಲದಲೇ ಬಿಜೆಪಿ ಹೊಸ ಅಭಿಯಾನ ಶುರು ಮಾಡಿದ್ದು, ಕಾಂಗ್ರೆಸ್ ತನ್ನ ಮ್ಯಾನೋಫಸ್ಟ್ ನಲ್ಲಿ ಭಜರಂಗದಳ ನಿಷೇಧದ ಕುರಿತು ಪ್ರಸ್ಥಾಪಿಸಿರುವುದನ್ನೇ ಬಿಜೆಪಿ ನಾಯಕರು ಅಸ್ತ್ರವಾಗಿಸಿಕೊಂಡಿದ್ದಾರೆ. ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್ ಹೆಸರಿನಲ್ಲಿ ಅಭಿಯಾನ ಶುರು ಮಾಡಿ ಮಂಡ್ಯದ ಸಂಜಯ ಸರ್ಕಲ್ ನಿಂದ 2 ಕಿಲೋಮೀಟರ್ ಗಳ ವರೆಗೆ ಬೈಕ್ ರ್ಯಾಲಿ ನಡೆಸಿದ್ದಾರೆ.

First published: