• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election Results: 38 ವರ್ಷಗಳ ದಾಖಲೆ ಮುರಿಯುತ್ತಾ ಬಿಜೆಪಿ? ಕಾಂಗ್ರೆಸ್​ಗೆ ಸಿಗುತ್ತಾ ರಾಜ್ಯದ ಚುಕ್ಕಾಣಿ? ಕಿಂಗ್ ಮೇಕರ್ ಆಗ್ತಾರಾ ಕುಮಾರಸ್ವಾಮಿ?

Karnataka Election Results: 38 ವರ್ಷಗಳ ದಾಖಲೆ ಮುರಿಯುತ್ತಾ ಬಿಜೆಪಿ? ಕಾಂಗ್ರೆಸ್​ಗೆ ಸಿಗುತ್ತಾ ರಾಜ್ಯದ ಚುಕ್ಕಾಣಿ? ಕಿಂಗ್ ಮೇಕರ್ ಆಗ್ತಾರಾ ಕುಮಾರಸ್ವಾಮಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಇಂದು ನಡೆಯಲಿರುವ ಮತ ಎಣಿಕೆ ಬಗ್ಗೆ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದೆ. ಕಳೆದ 38 ವರ್ಷಗಳಿಂದ ಇಲ್ಲಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತಿದೆ, ಬಿಜೆಪಿ ಈ ಪ್ರವೃತ್ತಿಯನ್ನು ಮುರಿಯಬಹುದೇ ಅಥವಾ ಕಾಂಗ್ರೆಸ್ ಈ ಬಾರಿ ಸರ್ಕಾರ ರಚಿಸುತ್ತದೆಯೇ? ಅಥವಾ ಜೆಡಿಎಸ್ ಕಿಂಗ್​ ಮೇಕರ್​ ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.

ಮುಂದೆ ಓದಿ ...
  • Share this:

ಬೆಂಗಳೂರು(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election 2023) ಮತದಾನ ಪೂರ್ಣಗೊಂಡಿದ್ದು, ಸದ್ಯ ಎಲ್ಲರ ಚಿತ್ತ ಮತ ಎಣಿಕೆಯ ಮೇಲಿದೆ. ಈ ಬಾರಿಯ ಚುನಾವಣಾ ಪ್ರಚಾರದ ವೇಳೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಅಧಿಕಾರದ ಚುಕ್ಕಾಣಿ ಯಾರದ್ದು ಎಂಬುವುದು ಮತ ಎಣಿಕೆ ಆರಂಭವಾದ ಬಳಿಕ ತಿಳಿಯಲಿದೆ. ಇನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖ ದೊಡ್ಡ ನಾಯಕರ ಪ್ರತಿಷ್ಠೆ ಪಣಕ್ಕಿಟ್ಟಿದೆ.


ರಾಜ್ಯಾದ್ಯಂತ 36 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ರಾಜ್ಯದ ಭವಿಷ್ಯದ ರಾಜಕೀಯ ಚಿತ್ರಣ ಸ್ಪಷ್ಟವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ, ವಿಶೇಷವಾಗಿ ಮತ ಎಣಿಕೆ ಕೇಂದ್ರಗಳು ಮತ್ತು ಸುತ್ತಮುತ್ತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಇದನ್ನೂ ಓದಿ:  Karnataka Election Results 2023 Live: ಕರ್ನಾಟಕ ಚುನಾವಣಾ ಫಲಿತಾಂಶ, ಸ್ಟ್ರಾಂಗ್ ರೂಂನಲ್ಲಿ ನಾಯಕರ ಭವಿಷ್ಯ ಭದ್ರ - ಮತಗಣನೆಗೆ ಕೌಂಟ್ಡೌನ್ ಆರಂಭ


ರಾಜ್ಯದಲ್ಲಿ 224 ಸದಸ್ಯ ಬಲದ ವಿಧಾನಸಭೆಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ಶೇ.73.19ರಷ್ಟು ಮತದಾನವಾಗಿದೆ. ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ತೋರಿಸಿವೆ. ಹೀಗಿದ್ದರೂ ಅತಂತ್ರ ಸ್ಥಿತಿಯ ಸುಳಿವೂ ಲಭಿಸಿದೆ. ಹೀಗಾದರೆ ಜೆಡಿಎಸ್​ ಈ ರೇಸ್​ನಲ್ಲಿ ಎಲ್ಲರ ಎಲ್ಲರ ಗಮನ ಸೆಳೆಯಲಿದೆ.




ಬಿಜೆಪಿ 38 ವರ್ಷಗಳ ಸಂಪ್ರದಾಯ ಮುರಿಯುತ್ತಾ ಬಿಜೆಪಿ?


ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜ್ಯದಲ್ಲಿ 38 ವರ್ಷಗಳ ಹಿಂದಿನ ಸಂಪ್ರದಾಯ ಮುರಿದು ಮತ್ತೆ ಅಧಿಕ್ಕಾರಕ್ಕೇರುವ ಕನಸು ಹೊತ್ತಿದೆ. ಇದಕ್ಕಾಗಿ ಪಕ್ಷವು ಮೋದಿ ಫೇಮ್​ನ್ನು ವ್ಯಾಪಕವಾಗಿ ಬಳಸಿಕೊಂಡಿದೆ. ಅದೇ ಸಮಯದಲ್ಲಿ, 2024 ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಲು ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲುವ ಗುರಿ ಹೊಂದಿದೆ.




ಇದನ್ನೂ ಓದಿ: Election Results 2023: ತಡರಾತ್ರಿ ಬೆಂಗಳೂರಿಗೆ HDK; ಷರತ್ತು ಬದ್ಧ ಮೈತ್ರಿಗೆ ಕುಮಾರಸ್ವಾಮಿ ಹೇಳಿದ್ದೇನು?


ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ?

top videos


    ಅದೇ ಸಮಯದಲ್ಲಿ ಅತಂತ್ರ ಸಂದರ್ಭದಲ್ಲಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜೆಡಿ (ಎಸ್) ಕಿಂಗ್ ಮೇಕರ್ ಆಗಲಿದೆ. ಇನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದಲ್ಲದೇ ಕೆಲವು ಕ್ಷೇತ್ರಗಳಲ್ಲಿ ಸಣ್ಣ ಪಕ್ಷಗಳೂ ಕಣದಲ್ಲಿದ್ದವು.

    First published: