ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಕೈ ಪಾಳಯಕ್ಕೆ ಸ್ಪಷ್ಟಮತ ಸಿಕ್ಕಿದೆ. ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದ್ದು, ಸಿಹಿ ಹಂಚಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅತ್ತ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಖುದ್ದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ರಾಜ್ಯದೆಲ್ಲೆಡೆ ಪ್ರವಾಸ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾದ್ರೆ ಬಿಜೆಪಿ ರಾಷ್ಟ್ರೀಯ ನಾಯಕರು ಪ್ರಚಾರ ನಡೆಸಿದ್ದ ಕ್ಷೇತ್ರದ ಫಲಿತಾಂಶ ಏನಾಗಿದೆ? ಎಲ್ಲೆಲ್ಲಿ ಗೆಲುವಾಗಿದೆ? ಸೋಲಾಗಿದೆ? ಇಲ್ಲಿದೆ ಸಂಪೂರ್ಣ ವಿವರ
ಮೋದಿ ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲೇನಾಗಿದೆ?
* ಹುಮ್ನಾಬಾದ್- ಸಿದ್ದು ಪಾಟೀಲ್- ಗೆಲುವು
* ವಿಜಯಪುರ- ಬಸನಗೌಡ ಪಾಟೀಲ್ ಯತ್ನಾಳ್- ಗೆಲುವು
* ಕುಡಚಿ- ಪಿ. ರಾಜೀವ್-ಸೋಲು
* ಯಲಹಂಕ- ಎಸ್.ಆರ್. ವಿಶ್ವನಾಥ್- ಗೆಲುವು
* ಕೋಲಾರ- ವರ್ತೂರು ಪ್ರಕಾಶ್- ಸೋಲು
* ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್-ಸೋಲು
* ಬೇಲೂರು- ಹುಲ್ಲಹಳ್ಳಿ ಸುರೇಶ್- ಗೆಲುವು
* ಚಿತ್ರದುರ್ಗ- ಜಿ.ಎಚ್. ತಿಪ್ಪಾರೆಡ್ಡಿ- ಸೋಲು
* ವಿಜಯನಗರ- ಸಿದ್ಧಾರ್ಥ್ ಸಿಂಗ್-ಸೋಲು
* ಸಿಂಧನೂರು- ಕೆ. ಕರಿಯಪ್ಪ- ಸೋಲು
* ಮೂಡಬಿದ್ರಿ- ಸುನಿಲ್ ಕುಮಾರ್- ಗೆಲುವು
* ಕಾರವಾರ- ರೂಪಾಲಿ ನಾಯ್ಕ್-ಸೋಲು
* ಕಿತ್ತೂರು- ಮಹಾಂತೇಶ್ ದೊಡ್ಡಗೌಡರ್- ಸೋಲು
* ಚಿತ್ತಾಪುರ- ಮಣಿಕಂಠ ರಾಠೋಡ್-ಸೋಲು
* ನಂಜನಗೂಡು- ಬಿ. ಹರ್ಷವರ್ಧನ್-ಸೋಲು
* ತುಮಕೂರು ಗ್ರಾಮಾಂತರ- ಬಿ. ಸುರೇಶ್ ಗೌಡ- ಗೆಲುವು
* ಬೆಂಗಳೂರು ದಕ್ಷಿಣ- ಎಂ. ಕೃಷ್ಣಪ್ಪ- ಗೆಲುವು
* ಬಾದಾಮಿ- ಶಾಂತಾಗೌಡ ಪಾಟೀಲ್-ಸೋಲು
* ಹಾವೇರಿ- ಗವಿಸಿದ್ದಪ್ಪ ದ್ಯಾಮಣ್ಣವರ್ಲ-ಸೋಲು
* ಶಿವಮೊಗ್ಗ ಗ್ರಾಮಾಂತರ- ಅಶೋಕ್ ನಾಯ್ಕ್- ಸೋಲು
* ಚಿಕ್ಕೋಡಿ- ರಮೇಶ್ ಕತ್ತಿ- ಸೋಲು
ಇದನ್ನೂ ಓದಿ: Siddaramaiah: ನಾನು ಹೇಳಿದ್ದೇ ನಿಜವಾಯ್ತು ಎಂದ ಸಿದ್ದರಾಮಯ್ಯ! ಫಲಿತಾಂಶದ ಬಗ್ಗೆ ಸಿದ್ದು ಮಾತು
ಅಮಿತ್ ಶಾ ಪ್ರಚಾರ ನಡೆಸಿದ್ದ ಕ್ಷೇತ್ರಗಳಿವು
* ತೇರದಾಳ- ಗೆಲುವು
* ದೇವರ ಹಿಪ್ಪರಗಿ- ಸೋಲು
* ಅಫಜಲ್ಪುರ- ಸೋಲು
* ಯಾದಗಿರಿ- ಸೋಲು
* ವಿರಾಜಪೇಟೆ- ಸೋಲು
* ಬಂಟ್ವಾಳ- ಗೆಲುವು
* ಕುಂದಾಪುರ- ಸೋಲು
* ಮಂಗಳೂರು ನಗರ- ಗೆಲುವು
* ನಂಜನಗೂಡು- ಸೋಲು
* ಹಗರಿಬೊಮ್ಮನಹಳ್ಳಿ- ಸೋಲು
* ದಾವಣಗೆರೆ- ಸೋಲು
* ರಾಣೇಬೆನ್ನೂರು- ಸೋಲು
* ಬ್ಯಾಡಗಿ- ಸೋಲು
* ಹಳಿಯಾಳ- ಸೋಲು
* ಶಿವಮೊಗ್ಗ- ಗೆಲುವು
* ಚನ್ನಗಿರಿ- ಸೋಲು
* ಚಿಕ್ಕಮಗಳೂರು- ಸೋಲು
* ಮಾಗಡಿ- ಸೋಲು
* ಶಿಡ್ಲಘಟ್ಟ- ಸೋಲು
* ಮಾಲೂರು- ಸೋಲು
* ದೊಡ್ಡಬಳ್ಳಾಪುರ-ಗೆಲುವು
* ವರುಣಾ- ಸೋಲು
* ಕಡೂರು- ಗೆಲುವು
* ಗುಬ್ಬಿ- ಸೋಲು
* ನಾಗಮಂಗಲ-ಗೆಲುವು
* ಚಿಕ್ಕೋಡಿ- ಸೋಲು
* ಸೌದತ್ತಿ ಯಲ್ಲಮ್ಮ- ಗೆಲುವು
* ರಾಮದುರ್ಗ- ಗೆಲುವು
* ಬಳ್ಳಾರಿ- ಸೋಲು
* ಬೀದರ್ ನಗರ- ಸೋಲು
* ಮಸ್ಕಿ- ಸೋಲು
* ಧಾರವಾಡ ನಗರ- ಸೋಲು
* ಶಿರಹಟ್ಟಿ- ಗೆಲುವು
ಯೋಗಿ ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲೇನಾಗಿದೆ?
* ಇಂಡಿ- ಸೋಲು
* ಬಸವನಬಾಗೇವಾಡಿ- ಸೋಲು
* ಶೃಂಗೇರಿ- ಗೆಲುವು
* ಪುತ್ತೂರು- ಸೋಲು
* ಕಾರ್ಕಳ- ಗೆಲುವು
* ಬೈಂದೂರು- ಗೆಲುವು
* ಭಟ್ಕಳ- ಸೋಲು
* ಗಂಗಾವತಿ- ಸೋಲು
* ಜೇವರ್ಗಿ- ಸೋಲು
* ಶಹಪೂರ- ಸೋಲು
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ!
ಜೆ. ಪಿ. ನಡ್ಡಾ ಪ್ರಚಾರ ನಡೆಸಿದ್ದ ಕ್ಷೇತ್ರಗಳ ಕತೆ ಏನು?
* ಶಿರಸಿ- ಸೋಲು
* ಸೊರಬ- ಸೋಲು
* ಮೂಡಿಗೆರೆ-ಸೋಲು
* ಹಾಸನ- ಸೋಲು
* ಕೊಪ್ಪಳ- ಸೋಲು
* ಸುರಪುರ- ಸೋಲು
* ಸೇಡಂ- ಸೋಲು
* ಬೀದರ್ ನಗರ-ಸೋಲು
* ಮುದ್ದೇಬಿಹಾಳ- ಸೋಲು
* ರೋಣ- ಸೋಲು
* ಹರಪನಹಳ್ಳಿ- ಸೋಲು
* ಸುಳ್ಯ- ಗೆಲುವು
* ಕಾಪು- ಗೆಲುವು
* ತೀರ್ಥಹಳ್ಳಿ- ಗೆಲುವು
* ಕೆಜಿಎಫ್- ಸೋಲು
* ಕೊರಟಗೆರೆ- ಸೋಲು
* ಹೊಸದುರ್ಗ- ಸೋಲು
* ಹೊನ್ನಾಳಿ- ಸೋಲು
* ಚಾಮುಂಡೇಶ್ವರಿ- ಸೋಲು
* ಎಚ್ಡಿ ಕೋಟೆ- ಸೋಲು
* ರಾಮನಗರ- ಸೋಲು
* ಸಿರಗುಪ್ಪ- ಸೋಲು
* ರಾಯಚೂರು ನಗರ- ಗೆಲುವು
* ರಾಯಚೂರು ಗ್ರಾಮಾಂತರ- ಸೋಲು
* ಮಳವಳ್ಳಿ- ಸೋಲು
* ಮೇಲುಕೋಟೆ- ಸೋಲು
* ಮಡಿಕೇರಿ- ಸೋಲು
ಕರ್ನಾಟಕ ರಾಜ್ಯ ಚುನಾವಣೆ 2023ರ ಫಲಿತಾಂಶಕ್ಕೆ ಇಡೀ ಕರುನಾಡೇ ಕಾತುರದಿಂದ ಕಾಯುತ್ತಿತ್ತು. ಕಳೆದೊಂದು ತಿಂಗಳ ಹಿಂದೆ ಅಭಿಯಾನದಿಂದ ಆರಂಭವಾದ ಚುನಾವಣಾ ಭರಾಟೆ ಇಂದಿನ ಫಲಿತಾಂಶದ ಬಳಿಕ ಒಂದು ಹಂತದಲ್ಲಿ ಮುಕ್ತಾಯ ಕಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ.
ಅಭ್ಯರ್ಥಿಗಳು ಮತ್ತು ಅರ್ಹ ಮತದಾರರು
ಕರ್ನಾಟಕ ಚುನಾವಣೆಯಲ್ಲಿ ಒಟ್ಟು 2,615 ಅಭ್ಯರ್ಥಿಗಳು ಕಣದಲ್ಲಿದ್ದು, 58,545 ಮತಗಟ್ಟೆಗಳಲ್ಲಿ ಒಟ್ಟು 5.31 ಕೋಟಿ ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಒಟ್ಟು ಮತದಾರರಲ್ಲಿ 2.67 ಕೋಟಿ ಪುರುಷರು, 2.64 ಕೋಟಿ ಮಹಿಳೆಯರು ಮತ್ತು 4,927 ಇತರರು ಇದ್ದು, ಅಭ್ಯರ್ಥಿಗಳ ಪೈಕಿ 2430 ಪುರುಷರು, 184 ಮಹಿಳೆಯರು ಮತ್ತು ತೃತೀಯಲಿಂಗಿ ಒಬ್ಬರು ಕಣದಲ್ಲಿದ್ದರು.
ಸ್ಟಾರ್ ಅಭ್ಯರ್ಥಿಗಳು
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (ವರುಣಾ), ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (ಚನ್ನಪಟ್ಟಣ) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಕನಕಪುರ) ಕಣದಲ್ಲಿರುವ ಪ್ರಮುಖರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೊರತುಪಡಿಸಿ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಶೆಟ್ಟರ್ ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆಂಬುವುದು ಉಲ್ಲೇಖನೀಯ.
ಕರ್ನಾಟಕದಲ್ಲಿ 1985 ರಿಂದ ಆಡಳಿತ ಪಕ್ಷ ಎಂದೂ ಗೆದ್ದ ಇತಿಹಾಸವಿಲ್ಲ. 38 ವರ್ಷಗಳ ಹಿಂದಿನ ಈ ಪದ್ಧತಿಯನ್ನು ಮುರಿಯುವುದಾಗಿ ಆಡಳಿತಾರೂಢ ಬಿಜೆಪಿ ಹೇಳಿಕೊಂಡಿತ್ತಾದರೂ, ಈ ಬಾರಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಮತ್ತೆ ಹಳೇ ಸಂಪ್ರದಾಯ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ