• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಕಾಂಗ್ರೆಸ್​​ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!

Karnataka Election 2023: ಕಾಂಗ್ರೆಸ್​​ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!

ಬೆಳಗಾವಿಗೆ ಆಗಮಿಸಿದ ರಾಹುಲ್​ ಗಾಂಧಿಗೆ ಡಿಕೆ ಶಿವಕುಮಾರ್ ಸ್ವಾಗತ ಕೋರಿದರು

ಬೆಳಗಾವಿಗೆ ಆಗಮಿಸಿದ ರಾಹುಲ್​ ಗಾಂಧಿಗೆ ಡಿಕೆ ಶಿವಕುಮಾರ್ ಸ್ವಾಗತ ಕೋರಿದರು

ಕಾಂಗ್ರೆಸ್​ನ 4ನೇ ಗ್ಯಾರಂಟಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು, 2 ವರ್ಷ ಕಾಲ 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಘೋಷಣೆ ಮಾಡಲಾಗಿದೆ.

  • News18 Kannada
  • 5-MIN READ
  • Last Updated :
  • Belgaum, India
  • Share this:

ಬೆಳಗಾವಿ: ರಾಜ್ಯ ಕಾಂಗ್ರೆಸ್ (Congress) ಪಕ್ಷಕ್ಕೆ ಬಲ ತುಂಬಲು ರಾಹುಲ್ ಗಾಂಧಿ (Rahul Gandhi) ಕರ್ನಾಟಕಕ್ಕೆ (Karnataka) ಆಗಮಿಸಿದ್ದಾರೆ. ಬೆಳಗಾವಿಯಲ್ಲಿ (Belagavi ಇಂದು ಯುವ ಕ್ರಾಂತಿ ರ್ಯಾಲಿ ನಡೆಯುತ್ತಿದ್ದು, 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಯುವಕ್ರಾಂತಿ ಸಮಾವೇಶದಲ್ಲಿ ನಿರುದ್ಯೋಗ ಹೋಗಲಾಡಿಸುವ ಅಭಯ ನೀಡಲಾಗಿದೆ. ಯುವಕರಿಗಾಗಿ ವಿಶೇಷ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್​ನ 4ನೇ ಗ್ಯಾರಂಟಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು, 2 ವರ್ಷ ಕಾಲ 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಘೋಷಣೆ ಮಾಡಲಾಗಿದೆ.


ಕರ್ನಾಟಕದಲ್ಲಿ ಎಲ್ಲಿ ಕರೆದರೂ ನಾನು ಬರುತ್ತೇನೆ


ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕರ್ನಾಟಕದ ಮೂಲಕ ಭಾರತ್ ಜೋಡೋ ಯಾತ್ರೆ ಸಾಗಿದಾಗ ನಿಮ್ಮ ಸಂಪೂರ್ಣ ಬೆಂಬಲ ಸಿಕ್ಕಿತ್ತು. ದೇಶದ ವಿವಿಧೆಡೆಯೂ ಯಾತ್ರೆಗೆ ವ್ಯಾಪಕ ಬೆಂಬಲ ಸಿಕ್ಕಿತು. ನಮಗೆ ದ್ವೇಷ ಬೇಡ
ಲಕ್ಷಾಂತರ ಜನ ಪ್ರೀತಿಯ ಅಂಗಡಿ ತೆರೆದಿಟ್ಟರು.


ಇದನ್ನೂ ಓದಿ: Bengaluru: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ


ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಕರ್ನಾಟಕ ಸರ್ಕಾರ ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ಕರ್ನಾಟಕ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ. ಇಲ್ಲಿ ಕೆಲಸ ನಡೆಯಬೇಕಂದರೆ 40 ಪರ್ಸೆಂಟೇಜ್ ಕಮಿಷನ್ ಕೊಡಲೇಬೇಕು ಎಂದು ಆರೋಪಿಸಿದರು.



ಕಾಂಗ್ರೆಸ್ ಯುವಕರ ಪರವಾಗಿ ನಿಂತಿದೆ


40 ಪರ್ಸೆಂಟ್​​​ ಕಮಿಷನ್​​ ಬಗ್ಗೆ ಗುತ್ತಿಗೆದಾರರು ಕೊಟ್ಟ ದೂರಿಗೆ ಇದುವರೆಗೂ ಮೋದಿ ಪ್ರತ್ಯುತ್ತರ ಕೊಟ್ಟಿಲ್ಲ. ಶಾಸಕರ ಪುತ್ರನ ಮೇಲೆ ಲೋಕಾಯುಕ್ತ ದಾಳಿಯಾಗುತ್ತೆ, ಕೋಟ್ಯಾಂತರ ರೂಪಾಯಿ ಸಿಗುತ್ತೆ. ಆದರೂ ಶಾಸಕರ ಮೇಲೆ ಕ್ರಮವಿಲ್ಲ. ದೇಶದ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಅದಾನಿಗೆ ಕೊಟ್ಟ ಬಗ್ಗೆ ಲೋಕಸಭೆಯಲ್ಲಿ ಹೇಳಿದೆ. ಆ ಮೂಲಕ ಯುವಕರ ಉದ್ಯೋಗ ಕಸಿದುಕೊಳ್ಳಲಾಗಿದೆ.


ಆದರೆ ಕಾಂಗ್ರೆಸ್ ಯುವಕರ ಪರವಾಗಿ ನಿಂತಿದೆ. ಯುವನಿಧಿ ಯೋಜನೆ ಮೂಲಕ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ಕೊಡುತ್ತೇವೆ ಎಂದು ಭರವಸೆ ನೀಡಿದರು.


ಇದನ್ನೂ ಓದಿ: Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ


ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಿದಲ್ಲಿ ಕ್ಲೀನ್ ಸ್ವೀಪ್ ಆಗುತ್ತೆ. ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ ಎಂದು ರಾಜ್ಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಜಪಿಸಿದರು.


ಪ್ರವಾಹ, ಕೋವಿಡ್ ಬಂದಾಗ ಮೋದಿ ಬರಲಿಲ್ಲ


ಇದಕ್ಕೂ ಮುನ್ನ ಮಾತನಾಡಿದ ಮಾಜಕಿ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಯುವ ವಿರೋಧಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು, ಜಗತ್ತಿನ ಯಾವುದೇ ಬದಲಾವಣೆಯಾಗಬೇಕಿದ್ದರೆ ಅದು ಯುವಕ, ಯುವತಿಯರಿಂದ ಸಾಧ್ಯ. 18 ವರ್ಷ ಪೂರೈಸಿದವರಿಗೆ ಮತದಾನದ ಹಕ್ಕು ನೀಡಿದರು, ಕಂಪ್ಯೂಟರ್ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಕ್ರಾಂತಿ ಮಾಡಿದರು. ಮೋದಿ ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತಾರೆ ಆದರೆ ಒಂಬತ್ತು ವರ್ಷದಲ್ಲಿ ನಿರುದ್ಯೋಗ ನಿವಾರಣೆಗೆ, ಯುವಕ-ಯುವತಿಯರಿಗೆ ಏನು ಮಾಡಿದ್ದಾರೆ?

top videos


    ಪ್ರವಾಹ, ಕೋವಿಡ್ ಬಂದಾಗ ಮೋದಿ ಬರಲಿಲ್ಲ. ಅಧಿಕಾರಕ್ಕಾಗಿ, ಮತಕ್ಕಾಗಿ ಮೋದಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಜನರ ಮುಂದೆ ಹೋಗೋಕೆ ಮುಖವಿಲ್ಲ. ಹಾಗಾಗಿ ಮೋದಿ ಬರುತ್ತಿದ್ದಾರೆ. ಆದರೆ ಒಮ್ಮೆ ಮರಳು ಮಾಡಬಹುದು, ಪದೇ ಪದೇ ಮಾಡಲು ಸಾಧ್ಯವಿಲ್ಲ ಎಂದು ಮಾತಿನಲ್ಲೇ ತಿವಿದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು