ಮಂಗಳವಾರ ರಾತ್ರಿ ಕೇಶವಕೃಪಾಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಭೇಟಿ ನೀಡಿದ್ದು RSS ಮುಖಂಡರ (RSS Leaders) ಜೊತೆ 1 ಗಂಟೆ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚರ್ಚೆ (Political Development) ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸಿದ್ದರಾಮೋತ್ಸವ (Siddaramotsava), ಕಾಂಗ್ರೆಸ್ ನಡಿಗೆ (Congress Padayatra) ಬಳಿಕ ರಾಜ್ಯ ಬಿಜೆಪಿ ಅಂಗಳದಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ ಎಂದು ಹೇಳಲಾಗ್ತಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ಕೋಮು ಸಂಘರ್ಷಗಳು (Communal Clash) ಹೆಚ್ಚಾಗುತ್ತಿರೋದಕ್ಕೆ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಕೇಶವಕೃಪಾಗೆ (Keshavakrupa) ಸಂಘದ ಪ್ರಮುಖರ ಜೊತೆ ಚರ್ಚೆ ನಡೆಸಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಸುಮಾರು 1 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಸಚಿವ ಆರ್ ಅಶೋಕ್ ಉಪಸ್ಥಿತರಿದ್ರು. ಇದೀಗ RSS ಮುಖಂಡರ ಜತೆ ಸಿಎಂ ಚರ್ಚೆ ಬಿಜೆಪಿ ಅಂಗಳದಲ್ಲಿ ಕುತೂಹಲ ಮೂಡಿಸಿದೆ.
ಸಂಘದ ಪ್ರಮುಖರ ಜೊತೆ ಸಿಎಂ ಚರ್ಚೆ ನಡೆಸಿದ್ದೇನು?
ರಾಜ್ಯದಲ್ಲಿ ಪದೇ ಪದೇ ಶಾಂತಿ ಕದಡುತ್ತಿದೆ. ಹರ್ಷ ಕೊಲೆ, ಪ್ರವೀಣ್ ಮರ್ಡರ್ ಬಳಿಕ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಮೇಲೆ ಚಾಕು ಇರಿತವಾಗಿದೆ. ಸಚಿವರಾದ ಮಾಧುಸ್ವಾಮಿ, ಶ್ರೀರಾಮುಲು ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಈ ಹೇಳಿಕೆಗಳನ್ನೇ ವಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮೋತ್ಸವ, ಕಾಂಗ್ರೆಸ್ ನಡಿಗೆ ಯಶಸ್ಸು, ಸಂಪುಟ ವಿಸ್ತರಣೆ ವಿಳಂಬ, ಶಾಸಕರ ಅಸಮಾಧಾನದ ಬಗ್ಗೆ ಸಂಘದ ಮುಖಂಡರು ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Shivamogga: ಚಾಕು ಇರಿತ ಕೇಸ್ಗೆ ಟ್ವಿಸ್ಟ್: ಪ್ರೇಮ್ ಸಿಂಗ್ಗೂ ಮೊದಲೇ ಸದ್ದಾಂ ಎಂಬಾತನ ಮೇಲೆ ಹಲ್ಲೆ
ಇಂದು ಬೆಂಗಳೂರಿಗೆ ಅರುಣ್ ಸಿಂಗ್
ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಇಂದು ಬೆಂಗಳೂರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ರಾಜ್ಯ ನಾಯಕರು, ನಾಳೆ ಪದಾಧಿಕಾರಿಗಳ ಜೊತೆ ಅರುಣ್ ಸಿಂಗ್ ಸಭೆ ನಡೆಸಲಿದ್ದಾರೆ.
ಸರ್ಕಾರದ ಬಗ್ಗೆ ವರದಿ ಕೇಳಿದ ಹೈಕಮಾಂಡ್
ಚುನಾವಣೆ ವೇಳೆ ಸಂಪುಟ ವಿಸ್ತರಣೆ ಅಗತ್ಯವಾ? ಸರ್ಕಾರದ ಮೇಲೆ ಹಲವು ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಪಕ್ಷ ಸಂಘಟನೆಗೆ ಹಿನ್ನಡೆ ಆಗ್ತಿದೆಯಾ? ಸಿಎಂ, ಸಚಿವರ ಕಾರ್ಯವೈಖರಿ ತೃಪ್ತಿದಾಯಕವೇ? ಕಾಂಗ್ರೆಸ್ ರಾಜಕೀಯ ತಂತ್ರಕ್ಕೆ ಪ್ರತಿತಂತ್ರ ಏನು? ಪಕ್ಷ ಸಂಘಟನೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ ಎನ್ನಲಾಗಿದೆ.
ಇನ್ನೂ ಸಚಿವರಾದ ಶ್ರೀರಾಮುಲು, ಮಾಧುಸ್ವಾಮಿ ಹೇಳಿಕೆಗಳು ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಈ ಸಂಬಂಧವೂ ಬಿಜೆಪಿ ಹೈಕಮಾಂಡ್ ಕೇಳಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ, ಬಾದಾಮಿ ಚುನಾವಣೆ ಒಳ ಒಪ್ಪಂದ ಎಂಬ ಹೇಳಿಕೆ ವಿಚಾರ ಹಾಗೂ ಮಾಧುಸ್ವಾಮಿ ಆಡಿಯೋ ಸಂಭಾಷಣೆ ವಿಷಯಗಳನ್ನು ಕಮಲ ಪಾಳಯ ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ಸಚಿವರ ಪ್ರಕರಣದ ಬಗ್ಗೆ ತಕ್ಷಣ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಪ್ರತ್ಯಕ್ಷ
ಇತ್ತ ಹೈಕಮಾಂಡ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ಕಚೇರಿಯಲ್ಲಿ ಸಚಿವ ಶ್ರೀರಾಮುಲು ಪ್ರತ್ಯಕ್ಷವಾಗಿದ್ದಾರೆ. ಇಂದು ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ಕೇಳುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ