• Home
  • »
  • News
  • »
  • state
  • »
  • Congress Vs BJP: ಎಲ್ಲವೂ ಪೇಮೆಂಟ್ ವ್ಯವಹಾರವೇ ಎಂದ ಕಾಂಗ್ರೆಸ್; ಬಿಜೆಪಿ ನಾಯಕರ ತಿರುಗೇಟು ಹೀಗಿತ್ತು

Congress Vs BJP: ಎಲ್ಲವೂ ಪೇಮೆಂಟ್ ವ್ಯವಹಾರವೇ ಎಂದ ಕಾಂಗ್ರೆಸ್; ಬಿಜೆಪಿ ನಾಯಕರ ತಿರುಗೇಟು ಹೀಗಿತ್ತು

ಕಾಂಗ್ರೆಸ್ ಬಿಜೆಪಿ

ಕಾಂಗ್ರೆಸ್ ಬಿಜೆಪಿ

ಇನ್ನು ಕಾಂಗ್ರೆಸ್ ನಾಯಕರಿಗೆ ರಾಯಚೂರಿನಲ್ಲಿ ಎಂಟಿಬಿ ನಾಗರಾಜ್ ಟಾಂಗ್​ ಕೊಟ್ಟಿದ್ದಾರೆ. ಕಾಂಗ್ರೆಸ್​ನವರಿಗೆ ಬೇರೆ ಕೆಲಸ ಇಲ್ಲ ಅಂತ ಗುಡುಗಿದರು.

  • Share this:

ರಾಜ್ಯ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಾಂಗ್ರೆಸ್‌ ಟ್ವೀಟ್‌ (Congress Tweet) ವಾರ್ ನಡೆಸಿದೆ. 40% ಸರ್ಕಾರದಲ್ಲಿ ಎಲ್ಲವೂ ಪೇಮೆಂಟ್ ವ್ಯವಹಾರವೇ ಅಂತ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. PSI ನೇಮಕಾತಿ (PSI Recruitment Scam) , ಪೊಲೀಸರ ವರ್ಗಾವಣೆಯಲ್ಲೂ (Police Transfer) 70, 80 ಲಕ್ಷ ವ್ಯವಹಾರ ನಡೀತಿದೆ. ಇದನ್ನು ಸಚಿವ MTB ನಾಗರಾಜ್ (Minister MTB Nagaraj) ಒಪ್ಪಿಕೊಂಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರೇ, ಮುಗಿಲುಮುಟ್ಟಿದ ಭ್ರಷ್ಟಾಚಾರಕ್ಕೆ ಇನ್ಯಾವ ಸಾಕ್ಷಿ ಬೇಕು? ರಾಜ್ಯ ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಇನ್ನು ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ಸಹ  ಟ್ವೀಟ್ (BJP Tweet)‌ ಮಾಡಿ ತಿರುಗೇಟು ಕೊಟ್ಟಿದೆ.


ಇನ್ನು ಇನ್​ಸ್ಪೆಕ್ಟರ್​ ನಂದೀಶ್​ ಸಾವಿನ ಪ್ರಕರಣಕ್ಕೆ ರಾಜಕೀಯ ಬಣ್ಣ ಅಂಟಿದೆ. ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಪೊಲೀಸ್ ಇನ್​ಸ್ಪೆಕ್ಟರ್‌ ನಂದೀಶ್ ಸಾವಿನ  ಪ್ರಕರಣವನ್ನು ಸರ್ಕಾರ ಸೂಕ್ತ  ತನಿಖೆಗೆ ಒಳಪಡಿಸಬೇಕು ಅಂತ ಆಗ್ರಹಿಸಿದರು.


ಇನ್ನು ಕಾಂಗ್ರೆಸ್ ನಾಯಕರಿಗೆ ರಾಯಚೂರಿನಲ್ಲಿ ಎಂಟಿಬಿ ನಾಗರಾಜ್ ಟಾಂಗ್​ ಕೊಟ್ಟಿದ್ದಾರೆ. ಕಾಂಗ್ರೆಸ್​ನವರಿಗೆ ಬೇರೆ ಕೆಲಸ ಇಲ್ಲ ಅಂತ ಗುಡುಗಿದರು.


ಕಾಂಗ್ರೆಸ್​ ಸತ್ತು ಹೋಗಿರೋ ಹೆಣ


ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗಲ್ಲ. ಮುಳುಗುತ್ತಿರೋ ಕಾಂಗ್ರೆಸ್​ಗೆ ಖರ್ಗೆಯನ್ನ ನಾಯಕರನ್ನಾಗಿ ಮಾಡಿ ಬಲಿ ಕೊಡ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.


ಕಾಂಗ್ರೆಸ್ ಸತ್ತು ಹೋಗಿರೋ ಹೆಣ. ಸತ್ತ ಹೆಣಕ್ಕೆ ಇಂಜೆಕ್ಷನ್ ಕೊಟ್ರೆ ಏನೂ ಆಗಲ್ಲ. ಖರ್ಗೆ ಅಧ್ಯಕ್ಷರಾದ್ರೂ ಏನೂ ಆಗಲ್ಲ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.


ಸಿದ್ದು ವಿರುದ್ಧ ಪರೋಕ್ಷ ವಾಗ್ದಾಳಿ


ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಧಾರವಾಡದಲ್ಲಿ ಸಚಿವ ಶ್ರೀರಾಮಲು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ಎನ್ನುವುದು ಜೇನುಗೂಡು ಇದ್ದಂತೆ. ಗೂಡಿಗೆ ಕೈ ಹಾಕಿದ್ರೆ ಮುಖಕ್ಕೆ ಕಡಿದು ಸಾಯಿಸಿ ಬಿಡುತ್ತವೆ. ಮಾಮೂಲಿ ಹುಳಗಳು ಕಡಿದ್ರೆ ಬದುಕಬಹುದು, ಆದ್ರೆ ಕಾಡಿನಲ್ಲಿರೋ ಹೆಜ್ಜೇನು ತುಂಬಾ ಅಪಾಯಕಾರಿ ಅಂತ ಶ್ರೀರಾಮಲು ಮಾರ್ಮಿಕವಾಗಿ ಹೇಳಿದ್ರು.


ಇನ್ನು  ಬಿಜೆಪಿ ಬಗ್ಗೆ ಯಾರ ಯಾರೋ ಬೊಬ್ಬೆ ಹೊಡಿತಾ ಇದ್ದರು. ಅಂಬೇಡ್ಕರ ಭಾವಚಿತ್ರ ಇಟ್ಟುಕೊಂಡು ಎಸ್​​ಸಿ, ಎಸ್​ಟಿ ಮತ ತಗೊಂಡರು. ಅಲ್ಲದೇ ಹಿಂದುಳಿದ ಸಮಾಜದ ಸ್ವಯಂಘೋಷಿತ ನಾಯಕ ಅಂತಾ ಹೇಳಿಕೊಂಡು ಸಿಎಂ ಸಹ ಆದ್ರು. ಆದ್ರೆ ಅವರಿಂದ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಏನು ಲಾಭವಾಯ್ತು ಅಂತ ಸಿದ್ದರಾಮಯ್ಯ ಹೆಸರೇಳದೇ ರಾಮುಲು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Rishi Sunak: ನಮ್ಮ ರಿಷಿ ಸುನಕ್​; ಬೆಂಗಳೂರು ಮತ್ತು ಬ್ರಿಟನ್​ ಪ್ರಧಾನಿ ನಂಟಿನ ಬಗ್ಗೆ ಮೆಲುಕು

 ಇಂದು ಬಿಜೆಪಿ ಒಬಿಸಿ ಸಮಾವೇಶ


ಕಲಬುರಗಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ವಿರಾಟ್ ಒಬಿಸಿ ಬೃಹತ್‌ ಸಮಾವೇಶ ಆಯೋಜಿಸಿದೆ. ನಾಗನಹಳ್ಳಿ ಬಳಿಯ ರದ್ದೆವಾಡಗಿ ಲೇಔಟ್‌ನಲ್ಲಿ ಬಿಜೆಪಿ ಒಬಿಸಿ ಸಮಾವೇಶ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಸುಮಾರು 4ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಸಮಾವೇಶದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್, ಸಿಎಂ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ.


ಇದನ್ನೂ ಓದಿ:  Belagavi: ಬೆಳಗಾವಿಯಲ್ಲಿ ಮತ್ತೆ ಶಿವಸೇನೆ, ಎಂಇಎಸ್ ಪುಂಡಾಟ; ಕನ್ನಡದ ಕಟ್ಟಾಳುಗಳಿಂದ ಸವಾಲು


ಚುನಾವಣಾ ಅಖಾಡಕ್ಕೆ ಮುತಾಲಿಕ್


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸೋದು ಖಚಿತ ಅಂತ ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ‌್ ಮುತಾಲಿಕ್ ಹೇಳಿದ್ರು. ಬಿಜೆಪಿ ಅವರು ಯಾವುದೇ ರೀತಿಯ ಸಹಕಾರ ಕೊಟ್ಟಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಯಾವ ಕ್ಷೇತ್ರ ಎಂದು ಇನ್ನೂ ನಿರ್ಧಾರ ಮಾಡಿಲ್ಲ ಅಂತ ಪ್ರಮೋದ‌್ ಮುತಾಲಿಕ್ ಹೇಳಿದರು.

Published by:Mahmadrafik K
First published: