ಮೆಗಾ ಟ್ವಿಸ್ಟ್​ನತ್ತ ಕರ್ನಾಟಕ ಪಾಲಿಟಿಕ್ಸ್; ಇಂದೇ ವಿಶ್ವಾಸ ಮತಯಾಚನೆಯಾದರೆ ಅನರ್ಹಗೊಳ್ತಾರಾ ಅತೃಪ್ತ ಶಾಸಕರು?

ಸರ್ಕಾರ ಬೀಳೋದು ಖಚಿತವಾದ್ರೆ, ಶಾಸಕರಿಗೂ ಬಿಸಿ ಮುಟ್ಟಿಸಲು ಮೈತ್ರಿ ನಾಯಕರು ಈ ಯೋಜನೆ ರೂಪಿಸಿದ್ದು ಇಂದಿನ ಅಧಿವೇಶನದಲ್ಲಿ ಸರ್ಕಾರ ಹಾಗೂ ಸ್ಪೀಕರ್ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

MAshok Kumar | news18
Updated:July 19, 2019, 12:16 PM IST
ಮೆಗಾ ಟ್ವಿಸ್ಟ್​ನತ್ತ ಕರ್ನಾಟಕ ಪಾಲಿಟಿಕ್ಸ್; ಇಂದೇ ವಿಶ್ವಾಸ ಮತಯಾಚನೆಯಾದರೆ ಅನರ್ಹಗೊಳ್ತಾರಾ ಅತೃಪ್ತ ಶಾಸಕರು?
ಅನರ್ಹ ಶಾಸಕರು
  • News18
  • Last Updated: July 19, 2019, 12:16 PM IST
  • Share this:
ಬೆಂಗಳೂರು (ಜುಲೈ.19); ಶುಕ್ರವಾರ ಮಧ್ಯಾಹ್ನ 1.30ರ ಒಳಗಾಗಿ ಆಡಳಿತ ಪಕ್ಷ ಬಹುಮತ ಸಾಬೀತುಪಡಿಸಬೇಕು ಎಂಬ ರಾಜ್ಯಪಾಲರ ಮಹತ್ವದ ಸೂಚನೆಯಿಂದಾಗಿ ರಾಜ್ಯ ರಾಜಕೀಯ ಇಂದು ನಿರ್ಣಾಯಕ ಘಟ್ಟ ತಲುಪುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಹೀಗಾಗಿ ರಾಜ್ಯಪಾಲರ ಅಣತಿಯಂತೆ ಮೈತ್ರಿ ಸರ್ಕಾರ ಇಂದೇ ಬಹುಮತ ಸಾಬೀತುಪಡಿಸಲು ಮುಂದಾದರೆ, ರಾಮಲಿಂಗಾರೆಡ್ಡಿ ಹೊರತುಪಡಿಸಿ ಉಳಿದ ಎಲ್ಲಾ ಅತೃಪ್ತ ಶಾಸಕರು ಅನರ್ಹರಾಗ್ತಾರ? ಎಂಬ ಅನುಮಾನವೂ ಮೂಡುತ್ತಿದೆ.

ಗುರುವಾರದ ಸದನದಲ್ಲಿ ಎದ್ದು ನಿಂತು ಸ್ಪೀಕರ್ ರಮೇಶ್ ಕುಮಾರ್ ಬಳಿ ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಶಾಸಕಾಂಗ ಪಕ್ಷದ ನಾಯಕನ ವಿಪ್ ಅಧಿಕಾರದ ವ್ಯಾಪ್ತಿಯ ಕುರಿತು ವಿವರಣೆ ಕೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಮಾಡಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪಿಗೆ ವಿವರಣೆ ಕೇಳುವ ಮೂಲಕ ಯಾವುದೇ ಕಠಿಣ ನಿರ್ಧಾರಕ್ಕೆ ಮುಂದಾಗದಂತೆ ಸ್ಪೀಕರ್​ಗೆ ತಡೆ ಒಡ್ಡಿದ್ದರು. ಈ ಮೂಲಕ ಮೈತ್ರಿ ಸರ್ಕಾರವನ್ನು ತಾತ್ಕಾಲಿಕವಾಗಿ ರಕ್ಷಿಸಿದ್ದರು.

ಇದನ್ನೂ ಓದಿ VIDEO: ರಾತ್ರಿ ಧರಣಿ, ಬೆಳಗ್ಗೆ ವಾಕಿಂಗ್; ಸದನದಲ್ಲಿ ಮಲಗಿದ ಬಿಜೆಪಿ ನಾಯಕರಿಂದ ಜಾಗಿಂಗ್​

ಆದರೆ, ಸಂಜೆ ವೇಳೆಗೆ ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲ ವಜುಭಾಯ್ ವಾಲಾ ಮೈತ್ರಿ ನಾಯಕರಿಗೆ ದೊಡ್ಡ ಶಾಕ್ ನೀಡಿದ್ದರು. ಶುಕ್ರವಾರ ಮಧ್ಯಾಹ್ನದ ಒಳಗೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿ ಆಘಾತ ನೀಡಿದ್ದರು. ಹೀಗಾಗಿ ಇಂದಿನ ಅಧಿವೇಶನ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಸರ್ಕಾರ ಬೀಳುತ್ತಾ? ಎಂಬ ಪ್ರಶ್ನೆಯ ಜೊತೆಗೆ, ಅತೃಪ್ತ ಶಾಸಕರ ಭವಿಷ್ಯ ಏನು? ಎಂಬುದು ಸಹ ಇಂದು ಸ್ಪಷ್ಟವಾಗಲಿದೆ.

ಅನರ್ಹರಾಗ್ತಾರ ಅತೃಪ್ತ ಶಾಸಕರು?

ಅತೃಪ್ತ ಶಾಸಕ ರಾಜೀನಾಮೆ ಅಂಗೀಕಾರದ ಕುರಿತು ಬುಧವಾರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, “ಸದನಕ್ಕೆ ಹಾಜರಾಗುವುದು ಬಿಡುವುದು ಶಾಸಕರಿಗೆ ಬಿಟ್ಟ ವಿಚಾರ. ಅವರನ್ನು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ” ಎಂದು ಹೇಳಿತ್ತು. ಆದರೆ, ಸುಪ್ರೀಂ ತನ್ನ ತೀರ್ಪಿನಲ್ಲಿ ಎಲ್ಲೂ ಸಹ ಶಾಸಕಾಂಗ ಪಕ್ಷದ ನಾಯಕನ ವಿಪ್ ಅಧಿಕಾರವನ್ನು ಪ್ರಶ್ನೆ ಮಾಡಿಲ್ಲ. ಅಲ್ಲದೆ, ಶಾಸಕರು ವಿಪ್ ಗೆ ಒಳಗಾಗಲ್ಲ ಎಂದು ಹೇಳಿಲ್ಲ. ನ್ಯಾಯಾಲಯದ ಈ ತೀರ್ಪು ಅಲ್ಪ ಕಾಲಕ್ಕೆ ಅತೃಪ್ತರಿಗೆ ತೃಪ್ತಿ ನೀಡಿದ್ದರೂ, ಇದೀಗ ಮೈತ್ರಿ ನಾಯಕರಿಗೆ ಟ್ರಂಪ್ ಕಾರ್ಡ್ ಆಗಿ ಪರಿಣಮಿಸಿದೆ.

ಇದನ್ನೂ ಓದಿ : ರಾಜ್ಯ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ರಾಜ್ಯಪಾಲರು; ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತಿಗೆ ಗಡುವು ನಿಗದಿಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ವಿಪ್ ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಎಲ್ಲಾ ಶಾಸಕರ ವಿರುದ್ಧ ಸ್ಪೀಕರ್​ಗೆ ದೂರು ನೀಡಿದೆ. ಹೀಗಾಗಿ ರಾಜ್ಯಪಾಲರ ಆದೇಶದಂತೆ ಇಂದು ಮೈತ್ರಿ ಸರ್ಕಾರ ಬಹುಮತ ಸಾಬೀತಿಗೆ ಮುಂದಾದರೆ, ಅದಕ್ಕೂ ಮುಂಚೆ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ವಿಚಾರಣೆಯಾಗಲಿದೆ. ಈ ವೇಳೆ ಸ್ಪೀಕರ್ ಅತೃಪ್ತರ ವಿರುದ್ಧ ಅನರ್ಹತೆ ಅಸ್ತ್ರ ಬಳಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲಾ ಶಾಸಕರ ಭವಿಷ್ಯ ಇದೀಗ ಸ್ಫಿಕರ್ ಕೈಯಲ್ಲಿದೆ.

ಸರ್ಕಾರ ಬೀಳೋದು ಖಚಿತವಾದ್ರೆ, ಶಾಸಕರಿಗೂ ಬಿಸಿ ಮುಟ್ಟಿಸಲು ಮೈತ್ರಿ ನಾಯಕರು ಈ ಯೋಜನೆ ರೂಪಿಸಿದ್ದು ಇಂದಿನ ಅಧಿವೇಶನದಲ್ಲಿ ಸರ್ಕಾರ ಹಾಗೂ ಸ್ಪೀಕರ್ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading