ದಿನೇಶ್ ಗುಂಡೂರಾವ್- ದೇವೇಗೌಡರ ಭೇಟಿಗೇಕೆ ಮಹತ್ವ ನೀಡಬೇಕು, ಅಂದರೆ...?


Updated:August 5, 2018, 11:23 AM IST
ದಿನೇಶ್ ಗುಂಡೂರಾವ್- ದೇವೇಗೌಡರ ಭೇಟಿಗೇಕೆ ಮಹತ್ವ ನೀಡಬೇಕು, ಅಂದರೆ...?

Updated: August 5, 2018, 11:23 AM IST
ಡಿ. ಪಿ ಸತೀಶ್, ನ್ಯೂಸ್ 18 ಕನ್ನಡ
ಬೆಂಗಳೂರು (ಆ.5) : ನೂತನವಾಗಿ ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿರುವ ದಿನೇಶ್ ಗುಂಡೂರಾವ್ ಅವರು ಶನಿವಾರ ಸಂಜೆ ತಮ್ಮ ಪಾಶ್ ಡಾಲರ್ಸ್ ಕಾಲೋನಿ ಮನೆಯಿಂದ ಬೆಂಗಳೂರು ದಕ್ಷಿಣದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮನೆಗೆ ತೆರಳಿ ಔಪಚಾರಿಕವಾಗಿ ಮಾತುಕತೆ ನಡೆಸಿದರು.


ರಾಜ್ಯ ಕಾಂಗ್ರೆಸ್ ಘಟಕದ ಚುಕ್ಕಾಣಿ ಹಿಡಿದ ನಂತರ ಅವರು ಮೊದಲು ಭೇಟಿ ಮಾಡಿದ್ದು ದೇವೇಗೌಡ ಅವರನ್ನೇ. ಏಕೆಂದರೆ ದೇವೇಗೌಡ ಅವರ ಮಗ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೈತ್ರಿಯೊಂದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಈ ಭೇಟಿಗೆ ಅಷ್ಟೊಂದು ಮಹತ್ವ ನೀಡಬೇಕಾಗಿಲ್ಲ.ಆದಾಗ್ಯೂ, ಕೆಲ ರಾಜಕೀಯ ಪಂಡಿತರು ಈ ಐತಿಹಾಸಿಕ ಭೇಟಿಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಈಗಿನ ಕೆಪಿಸಿಸಿ ಅಧ್ಯಕ್ಷರ ತಂದೆ ಆರ್. ಗುಂಡೂರಾವ್ ಅವರ ಸರ್ಕಾರ 1983ರಲ್ಲಿ ಅಧಿಕಾರದಿಂದ ಕೆಳಗಿಳಿಯಲು ಕಾರಣವಾಗಿದ್ದು, ಇದೇ ದೇವೇಗೌಡ ಅವರು ಮುಂದಾಳತ್ವ ವಹಿಸಿದ್ದ ಜನತಾ ಪಕ್ಷ!. ಗುಂಡೂರಾವ್ ಸರ್ಕಾರ ಪತನದೊಂದಿಗೆ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಪಕ್ಷ ಸರ್ಕಾರ ರಚಿಸಿತು. ಆದರೆ, ರಾಜಕೀಯ ಪಿತೂರಿಗಳಿಂದ ದೇವೇಗೌಡರು ಅಂದು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಬೇಕಾಯಿತು. 'ಹೊರಗಿ'ನವರಾದ ರಾಮಕೃಷ್ಣ ಹೆಗಡೆ ಸರ್ಕಾರದ ಚುಕ್ಕಾಣಿ ಹಿಡಿದರು.


Loading...ದಿವಂಗತ ಆರ್.ಗುಂಡೂರಾವ್ ಅವರು 1972 ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಆ ಹೊತ್ತಿಗಾಗಲೇ ದೇವೇಗೌಡರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನಸಭೆಯಲ್ಲಿ ಗುಂಡೂರಾವ್ ಹತ್ತು ವರ್ಷ ಹಿರಿಯ ಸದಸ್ಯರಾಗಿದ್ದರು. ಮತ್ತು ವಿರೋಧ ಪಕ್ಷದ ನಾಯಕರಾಗಿದ್ದರು.
ಆರ್.ಗುಂಡೂರಾವ್ ಅವರು ದೇವರಾಜ ಅರಸು ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ 1972 ಮತ್ತು 1980 ದೇವೇಗೌಡ ಅವರು ಉಗ್ರವಾಗಿ ದಾಳಿ ಮಾಡುತ್ತಿದ್ದರು.

1980 ರಲ್ಲಿ 40 ವರ್ಷದ ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನಿಸಿಕೊಂಡರು. ಆ ವೇಳೆಯೂ 1980 ಮತ್ತು 1983 ರವರೆಗೆ ದೇವೇಗೌಡ ಅವರು ಗುಂಡೂರಾವ್  ಸರ್ಕಾರವನ್ನು ಸದನದ ಒಳಗೆ ಮತ್ತು ಹೊರಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.


ವಿರೋಧ ಪಕ್ಷದ ನಾಯಕರಾಗಿದ್ದ ದೇವೇಗೌಡ ಅವರು ಕೊನೆಗೂ ಗುಂಡೂರಾವ್ ಅವರ ಸರ್ಕಾರವನ್ನು ಕೆಳಗಿಳಿಸುವ ಮೂಲಕ 36 ವರ್ಷಗಳ ತಡೆರಹಿತ ಕಾಂಗ್ರೆಸ್ ಆಡಳಿತಕ್ಕೆ ಇತಿಶ್ರೀ ಹಾಡಿದರು. ಗುಂಡೂರಾವ್ ಅವರು ಮೊದಲು ಶಾಸಕರಾದಾಗ ಅವರ ಮಗ ದಿನೇಶ್ ಗುಂಡೂರಾವ್ಗೆ ಮೂರು ವರ್ಷ. ಮತ್ತು ದೇವೇಗೌಡರಿಂದ ಅವರು ಅಧಿಕಾರ ಕಳೆದುಕೊಂಡಾಗ 13 ವರ್ಷ ವಯಸ್ಸು.


1993ರಲ್ಲಿ ಆರ್.ಗುಂಡೂರಾವ್ (53) ನಿಧನರಾದರು. ಆ ವರ್ಷದ ತರುವಾಯ ದೇವೇಗೌಡ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಆನಂತರದಲ್ಲಿ 1996 ರಂದು ಪ್ರಧಾನಮಂತ್ರಿಯೂ ಆದರು.


ದಿನೇಶ್ ಗುಂಡೂರಾವ್ 20ರ ಹರೆಯದರಾಗಿದ್ದಾಗ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾದರು ಮತ್ತು ಆ ವೇಳೆಗಾಗಲೇ ದೇವೇಗೌಡರು ರಾಜಕೀಯ ಉತ್ತುಂಗದಲ್ಲಿದ್ದಾಗ ಜನತಾ ದಳ ಸರ್ಕಾರದ ವಿರುದ್ಧ ಸಂಘಟನಾತ್ಮಕ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ದಿನೇಶ್ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಮತ್ತು ಅದೇ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಶಾಸಕರಾಗಿ ಆರಿಸಿಬಂದರು.


ದಿನೇಶ್ ಗುಂಡೂರಾವ್ ಅವರ ತಂದೆ ಆರ್.ಗುಂಡೂರಾವ್  ಅವರಿಗೆ ದೇವೇಗೌಡ ಅವರು ವಿಧಾನಸಭೆಯಲ್ಲಿ ಹತ್ತು ವರ್ಷ ಹಿರಿಯರು. ಈಗ 86ರ ಹೊಸ್ತಿಲಲ್ಲಿರುವ ದೇವೇಗೌಡರಿಗೆ ಇಂದಿಗೂ ಅದೇ ಅಸಾಧಾರಣ ಶಕ್ತಿ ಇದೆ.


ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಜೋಪಾನವಾಗಿ ಮುನ್ನಡೆಸಿ, ದೇವೇಗೌಡ ಅವರು ಸಂತೋಷದಿಂದ ಇರುವಂತೆ  ನೋಡಿಕೊಳ್ಳುವುದು 48 ವರ್ಷದ ಜೂನಿಯರ್ ಗುಂಡೂರಾವ್ ಅವರ ಜವಾಬ್ದಾರಿಯಾಗಿದೆ.


ವಿಧಾನಸಭೆ ಮತ್ತು ಲೋಕಸಭೆಗೆ ತಲಾ ಏಳು ಬಾರಿ ಆಯ್ಕೆಯಾಗಿರುವ ದೇವೇಗೌಡ ಅವರು ಜೀವನ ಪರ್ಯಾಂತ ರಾಜಕಾರಣಿ. ಕರ್ನಾಟಕ ರಾಜಕೀಯ ಯಾವಾಗಲೂ ಬದಲಾಗುವುದು ಈ ನೆಲದ ಸೊಗಡು. ಹೀಗಾಗಿ ಜೆಡಿಎಸ್ನ ಸರ್ವೋಚ್ಚ ನಾಯಕ ತಮ್ಮ ಮಕ್ಕಳ ವಯೋಮಾನದ ಸಮಕಾಲೀನರೊಂದಿಗೂ ಇಂದು ಕೈ ಜೋಡಿಸಿದ್ದಾರೆ.

ದೇವೇಗೌಡ, ಎಂ.ಕರುಣಾನಿಧಿ, ಪ್ರಕಾಶ್ ಸಿಂಗ್ ಬಾದಲ್ ಮತ್ತು ವೀರಭದ್ರ ಸಿಂಗ್ ಎಂಬ ನಾಲ್ವರು ನಾಯಕರು ಮಾತ್ರ 1962ರಿಂದಲೇ ಕಾನೂನು ರೂಪಿಸುವವರಾಗಿ ಇಂದಿಗೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.


First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...