HOME » NEWS » State » KARNATAKA POLITICS MP RENUKACHARYA AND SR VISHWANATH HITS OUT AT MLC H VISHWANATH LG

Karnataka Politics: ವಿಶ್ವನಾಥ್​​ ವಿರುದ್ಧ ತಿರುಗಿಬಿದ್ದ ಸಿಎಂ ಆಪ್ತಬಣ; ಉಂಡ ಮನೆಗೆ ಎರಡು ಬಗೆಯೋ ಬುದ್ಧಿ ಎಂದು ಆಕ್ರೋಶ

ಬಿಡಿಎ ಅಧ್ಯಕ್ಷ  ಎಸ್​.ಆರ್​.ವಿಶ್ವನಾಥ್ ಕೂಡ ಹೆಚ್​​. ವಿಶ್ವನಾಥ್​ ವಿರುದ್ಧ​​ ಕೆಂಡಾಮಂಡಲರಾದರು. ಹೆಚ್​.ವಿಶ್ವನಾಥ್​ ಒಬ್ಬ ಹುಚ್ಚ. ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಲೇವಡಿ ಮಾಡಿದರು. 

news18-kannada
Updated:June 17, 2021, 1:20 PM IST
Karnataka Politics: ವಿಶ್ವನಾಥ್​​ ವಿರುದ್ಧ ತಿರುಗಿಬಿದ್ದ ಸಿಎಂ ಆಪ್ತಬಣ; ಉಂಡ ಮನೆಗೆ ಎರಡು ಬಗೆಯೋ ಬುದ್ಧಿ ಎಂದು ಆಕ್ರೋಶ
ಎಂ.ಪಿ.ರೇಣುಕಾಚಾರ್ಯ​-ಎಸ್​.ಆರ್​.ವಿಶ್ವನಾಥ್​
  • Share this:
ಬೆಂಗಳೂರು(ಜೂ.17):  ಸಿಎಂ ಬದಲಾವಣೆ ಮಾಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟು, ಬಿಜೆಪಿಯಲ್ಲಿ ಕಿಡಿ ಹೊತ್ತಿಸಿರುವ ಹೆಚ್​.ವಿಶ್ವನಾಥ್​ ವಿರುದ್ಧ ಸಿಎಂ ಆಪ್ತ ಬಣದ ಶಾಸಕರು ಕೆಂಡಾಮಂಡಲರಾಗಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ, ಎಸ್​.ಆರ್.ವಿಶ್ವನಾಥ್, ಹರತಾಳು ಹಾಲಪ್ಪ ಇನ್ನೂ ಮೊದಲಾದವರು ಹೆಚ್​.ವಿಶ್ವನಾಥ್​ ವಿರುದ್ಧ ಹರಿಹಾಯ್ದಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ವಿಶ್ವನಾಥ್​ ವಿರುದ್ಧ ತಿರುಗಿಬಿದ್ದಿದ್ದಾರೆ.  ವಿಶ್ವನಾಥ್​​ ಅವರೇ, ನಿಮಗೆ ವಯಸ್ಸೆಷ್ಟು? ಯಡಿಯೂರಪ್ಪನವರಿಗೆ ವಯಸ್ಸಾದ್ರು ಅವರು ಹಗಲಿರುಳು ಕೆಲಸ ಮಾಡ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ವಿರುದ್ದ ಏನೆಲ್ಲಾ ಮಾತಾಡಿದ್ರಿ. ಆಮೇಲೆ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟ ದೇವೇಗೌಡ, ಕುಮಾರಸ್ವಾಮಿಗೆ ಮೋಸ ಮಾಡಿದ್ರಿ. ನಮ್ಮ ಪಕ್ಷಕ್ಕೆ ನೀವು ಬಂದಾಗ ಕೋರ್ಟ್​​ನಲ್ಲಿ ‌ನಿಮ್ಮ ವಿರುದ್ದ ಆದೇಶ ಇದ್ದರೂ, ನಿಮಗೆ ಸಿಎಂ ಎಂಎಲ್ಸಿ ಮಾಡಿದ್ರು. ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆಯಿಂದ ಅವ್ರು ಹೀಗೆಲ್ಲ ಮಾತಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದ ಅವರು, ಬಿಎಸ್ವೈ ನಾಯಕತ್ವದಲ್ಲಿ ನಮಗೆ ವಿಶ್ವಾಸ ಇದೆ, ಯಾರು ಬಿಎಸ್ವೈ ವಿರುದ್ಧ ಮಾತಾಡಿದ್ದಾರೆ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ತಹ ಮಾಡ್ತೇವೆ.  ಯಾರೋ ಒಂದಿಬ್ಬರು ಬೆರಳೆಣಿಕೆಯಷ್ಟು ಬಿಟ್ರೆ, ಬೇರೆ ಯಾರೂ ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ ಎಂದರು.

ಇದನ್ನೂ ಓದಿ:Karnataka Political Crisis: ಸಿಎಂ ಬದಲಾವಣೆಗೆ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟ ಹೆಚ್.ವಿಶ್ವನಾಥ್

ಇನ್ನು, ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧವೂ ಕೂಡ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಯತ್ನಾಳ್​ ತಿರುಕನ ಕನಸು ಕಾಣುತ್ತಿದ್ದಾರೆ. ಹಿಂದೆ ಅವರು ನನಗೆ ಒಂದು ಆಫರ್ ಕೊಟ್ಟಿದ್ದರು. ನೀನು ಸೈಲೆಂಟಾಗಿ ಇರು, ನಿನ್ನನ್ನು ಹೋಮ್ ಮಿನಿಸ್ಟರ್ ಮಾಡ್ತೀನಿ ಅಂದಿದ್ರು. ಇದು ಸತ್ಯದ ಮಾತು. ಯತ್ನಾಳ್ ಅವರ ತಿರುಕನ ಕನಸು ಯಾವುದೇ ಕಾರಣಕ್ಕೂ ನನಸ್ಸಾಗಲ್ಲ ಎಂದು ಕಿಡಿಕಾರಿದರು.

ಬಿಡಿಎ ಅಧ್ಯಕ್ಷ  ಎಸ್​.ಆರ್​.ವಿಶ್ವನಾಥ್ ಕೂಡ ಹೆಚ್​​. ವಿಶ್ವನಾಥ್​ ವಿರುದ್ಧ​​ ಕೆಂಡಾಮಂಡಲರಾದರು. ಹೆಚ್​.ವಿಶ್ವನಾಥ್​ ಒಬ್ಬ ಹುಚ್ಚ. ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಲೇವಡಿ ಮಾಡಿದರು.  ಹೆಚ್ ವಿಶ್ವನಾಥ್ ಒಬ್ಬ ಮಾನಸಿಕ ಅಸ್ವಸ್ಥ. ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ಎರಡು ಬಗೆಯೋ ಬುದ್ದಿ ಅವರದ್ದು. ರೋಡಲ್ಲಿ ಅರೆ ಹುಚ್ಚ  ಓಡಾಡುವ ರೀತಿ ವಿಶ್ವನಾಥ್ ಆಗಿದ್ದಾರೆ. ತಿಂದ ಮನೆಗೆ ದ್ರೋಹ‌ ಬಗೆಯೋದು ಹೆಚ್ ವಿಶ್ವನಾಥ್ ಗುಣ. ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ, ತಪಾಸಣೆ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಮುಂದುವರೆದು, ಅವರು ಏನು ಮಾತಾಡ್ತಿದ್ದಾರೆ ಎಂಬುದರ ಅವರಿಗೆ ಗೊತ್ತಿಲ್ಲ. ಯಡಿಯೂರಪ್ಪನವರಿಗೆ ವಯೋ ಸಹಜ ಆಗಿರಬಹುದು. ಆದರೆ ಅವರ ಮಾನಸಿಕ ನಿರ್ಧಾರಗಳು ಧೃಡವಾಗಿವೆ. ಬಿಜೆಪಿಗೆ ಒಬ್ಬರೇ ವಿಶ್ವನಾಥ್ ಸಾಕಾಗಿತ್ತು. ಆದರೆ ಏನ್ ಮಾಡೋದು ಬೇರೆಯವರ ಜೊತೆ ಬಂದಾಗ ಬೇಡ ಅನ್ನೋದಕ್ಕೆ ಆಗೋದಿಲ್ಲ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ತಪ್ಪು ಆಗಿದೆ. ವಿಶ್ವನಾಥ್ ಗೆ ತಿಕ್ಕಲು ಬುದ್ದಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ:Vijay Krishna Passed Away: ಮಾಜಿ ಕ್ರಿಕೆಟಿಗ ವಿಜಯ್​ಕೃಷ್ಣ ನಿಧನ; ಸಿಎಂ ಯಡಿಯೂರಪ್ಪ ಸಂತಾಪ

ಶಾಸಕ ಹರತಾಳು ಹಾಲಪ್ಪ ಕೂಡ ವಿಶ್ವನಾಥ್​ ವಿರುದ್ಧ ತಿರುಗಿಬಿದ್ದರು. ವಿಶ್ವನಾಥ್ ಗೆ ಅರಳು‌ ಮರಳು‌ ಆಗಿದೆ. ಅವರಿಗೆ ಮನಸ್ಥಿತಿಯೇ ಸರಿ ಇಲ್ಲ. ಅವರಿಗೆ ಒಂದು ಗುಣ ಇದೆ. ಇದ್ದ ಮನೆಯಲ್ಲಿ ಮದ್ದರೆಯೋದು. ನಿಜವಾಗಿಯೂ ಇವರದ್ದು ಹುಚ್ಚಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
Youtube Video

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್​ಸಿ ಹೆಚ್​.ವಿಶ್ವನಾಥ್​, ಪಕ್ಷ ಮುಂದೆ ಬರಬೇಕಾದರೆ ಸಿಎಂ ಬದಲಾವಣೆ ಮಾಡಲೇಬೇಕು ಎಂದು ಒತ್ತಾಯಿಸಿದರು. ಸಿಎಂ ಬಿಎಸ್​ವೈಗೆ ವಯಸ್ಸಾಗಿದೆ. ಇಲಾಖೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ, ಇಡೀ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ. ಕೊರೋನಾ ನಿರ್ವಹಣೆ ಮಾಡುವಲ್ಲಿ ಸಿಎಂ ವಿಫಲರಾಗಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಯಡಿಯೂರಪ್ಪ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕೆಲಸ ಶೂನ್ಯ ಎಂದು ಆರೋಪಗಳ ಸುರಿಮಳೆಗೈದರು.
Published by: Latha CG
First published: June 17, 2021, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories