ರಾಮನಗರ(ಮೇ 30): ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ. ಮೂರು ಪಾರ್ಟಿ ಸರ್ಕಾರ ಇದೇ ರಾಜ್ಯದಲ್ಲಿ ಎಂಬ ಯೋಗೇಶ್ವರ್ ಹೇಳಿಕೆ ಕುರಿತಾಗಿ ಮಾತನಾಡಿದ ಡಿ.ಕೆ.ಸುರೇಶ್, ಅವರು ಎಲ್ಲಾ ಪಾರ್ಟಿ ನೋಡಿದ್ದಾರಲ್ಲಾ ಅದಕ್ಕೆ ಹೇಳಿದ್ದಾರೆ ಎಂದು ಕಿಡಿಕಾರಿದರು. ರಾಮನಗರ ಜಿಲ್ಲೆ ಬಿಡದಿಯ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ನಗರಸಭೆಯ ಸಿಬ್ಬಂದಿಗಳಿಗೆ ಉಚಿತ ಆಹಾರ ಕಿಟ್ ವಿತರಣೆ ಮಾಡಿದರು. ಜೊತೆಗೆ ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಕೊರೋನಾ ಮುಗಿಯುವವರೆಗೆ ಪ್ರತಿತಿಂಗಳು 500 ರೂ. ಕೊಡುತ್ತೇವೆಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಸಚಿವ ಯೋಗೇಶ್ವರ್ಗೆ ತಿರುಗೇಟು ಕೊಟ್ಟರು. ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೆ ಡಿಕೆಶಿ ರಾಜಕೀಯ ಒಳ ಒಪ್ಪಂದ ರಾಜಕೀಯ ಇದೇ ಎಂಬ ಹೇಳಿಕೆ ಪ್ರತಿಕ್ರಿಯಿಸಿ ವಿಜಯೇಂದ್ರ ಜೊತೆ ಸರ್ಕಾರ ತರಲು ಪ್ಲ್ಯಾನ್ ಮಾಡಿದವರು ಯಾರು? ದೆಹಲಿಗೆ ಹೋದವರು ಯಾರು? ಶಾಸಕರಿಗೆ ಹಣ ಕೊಟ್ಟೋರು ಯಾರು? ಎಂದು ಎಲ್ಲಾ ಮಾಹಿತಿ ಅವರ ಬಳಿಯೇ ಇದೆ. ಅದರ ಬಗ್ಗೆ ಮಾತನಾಡಲಿ. ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ, ಅವಶ್ಯಕತೆ ಇಲ್ಲ. ಏನೋ ಒಂದು ಕೆಲಸ ಕೊಟ್ಟಿದ್ದಾರೆ, ಮಂತ್ರಿ ಮಾಡಿದ್ದಾರೆ. ಮೊದಲು ಆ ಯೋಗ್ಯತೆಯನ್ನ ಉಳಿಸಿಕೊಂಡು ಹೋಗಲಿ ಎಂದರು.
ಇದನ್ನೂ ಓದಿ:Chamarajanagar: ಬುಡಕಟ್ಟು ಸೋಲಿಗರ ಸಂಕಷ್ಟಕ್ಕೆ ಮಿಡಿದ ಟಿಬೇಟಿಯನ್ ಹೃದಯಗಳು
ಇನ್ನು ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹ ರಾಮನಗರ ಜಿಲ್ಲೆಯಲ್ಲಿ ಹೆಚ್ಡಿಕೆ - ಡಿಕೆಶಿ ಪಾರುಪತ್ಯ ಹೆಚ್ಚಾಗಿದೆ. ನಮ್ಮದೇನು ನಡೆಯುತ್ತಿಲ್ಲ ಎಂಬ ಯೋಗೇಶ್ವರ್ ಹೇಳಿಕೆಗೆ ಮಾತನಾಡಿ ಅದನ್ನ ಡಿಸಿಎಂ ಅಶ್ವಥ್ ನಾರಾಯಣ ಅವರ ಬಳಿ ಕೇಳಲಿ. ಜಿಲ್ಲೆಯಲ್ಲಿ ಯಾರ ಅಧಿಕಾರ ನಡೆಯುತ್ತಿದೆ ಎಂದು ತಿಳಿದುಕೊಳ್ಳಲಿ. ಸದ್ಯಕ್ಕೆ ನಾವು ಎಲ್ಲರಿಂದಲೂ ದೂರ ಇದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ - ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸಂಸದ ಡಿ.ಕೆ.ಸುರೇಶ್ ರಾಜ್ಯದ ಎಲ್ಲಾ ಎಪಿಎಲ್ - ಬಿಪಿಎಲ್ ಕಾರ್ಡ್ ದಾರರಿಗೆ 10 ಸಾವಿರ ಕೊಡಲಿ. ಒಟ್ಟು 16 ಸಾವಿರ ಕೋಟಿ ರೂ. ಹಣ ಇದಕ್ಕಾಗಿ ಖರ್ಚಾಗಲಿದೆ. ಈಗ ಇವರು ಕಿತ್ತು ಹಾಕೋದು ಏನು ಇಲ್ಲ, ಇವರ ಎಲ್ಲಾ ಯೋಜನೆಗಳನ್ನ ಸದ್ಯಕ್ಕೆ ನಿಲ್ಲಿಸಲಿ ಎಂದರು.
(ವರದಿ: ಎ.ಟಿ.ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ