Arun Singh-CP Yogeshwar: ಅರುಣ್​ ಸಿಂಗ್​​ ಭೇಟಿ ಮಾಡಿದ ಸಿ.ಪಿ.ಯೋಗೇಶ್ವರ್​; ಸಚಿವರ ಪ್ರತ್ಯೇಕ ಸಭೆಯಲ್ಲಿ ಸಿಪಿವೈ​​​​​​​ ಹೇಳಿದ್ದೇನು?

ಭೇಟಿ ವೇಳೆ ಸಿ.ಪಿ.ಯೋಗೇಶ್ವರ್​ಗೆ ಅರುಣ್​ ಸಿಂಗ್​​ ಖಡಕ್​ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷ, ಸರ್ಕಾರ, ನಾಯಕತ್ವ ಬದಲಾವಣೆ ವಿಚಾರವಾಗಿ  ಬಹಿರಂಗ ಹೇಳಿಕೆ ಕೊಡುವಂತಿಲ್ಲ. ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಬೇಕು. ಬಹಿರಂಗ ಹೇಳಿಕೆ ಕೊಟ್ಟರೆ ಅಶಿಸ್ತು ಎಂದು ಪರಿಗಣಿಸಲಾಗುವುದು.

ಸಚಿವ ಸಿ.ಪಿ.ಯೋಗೇಶ್ವರ್​​

ಸಚಿವ ಸಿ.ಪಿ.ಯೋಗೇಶ್ವರ್​​

 • Share this:
  ಬೆಂಗಳೂರು(ಜೂ.17): ಸಚಿವ ಸಿ.ಪಿ.ಯೋಗೇಶ್ವರ್​​ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಅವರನ್ನು ಭೇಟಿಯಾಗಿದ್ದಾರೆ. ಸಿಂಗ್​ ಭೇಟಿ ಬಳಿಕ ಮಾತನಾಡಿದ ಸಿಪಿವೈ,  ನಮ್ಮ ಪಕ್ಷದ ಆಂತರಿಕ ವಿಚಾರ, ನನ್ನ ವಿಚಾರ ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಇಟ್ಟಿದ್ದೇನೆ, ಮಾಧ್ಯಮಗಳ ಮುಂದೆ ಏನನ್ನೂ ಹೇಳಲ್ಲವೆಂದು ಹೊರಟು ಹೋದರು. ಭೇಟಿ ವೇಳೆ ಸಿ.ಪಿ.ಯೋಗೇಶ್ವರ್​ಗೆ ಅರುಣ್​ ಸಿಂಗ್​​ ಖಡಕ್​ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷ, ಸರ್ಕಾರ, ನಾಯಕತ್ವ ಬದಲಾವಣೆ ವಿಚಾರವಾಗಿ  ಬಹಿರಂಗ ಹೇಳಿಕೆ ಕೊಡುವಂತಿಲ್ಲ. ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಬೇಕು. ಬಹಿರಂಗ ಹೇಳಿಕೆ ಕೊಟ್ಟರೆ ಅಶಿಸ್ತು ಎಂದು ಪರಿಗಣಿಸಲಾಗುವುದು.  ನಿಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದೆಂದು ಹೇಳಿ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಇನ್ನು, ಸಚಿವರ ಪ್ರತ್ಯೇಕ ಸಭೆ ಭಾರಿ ಕುತೂಹಲ ಮೂಡಿಸಿದ್ದು, ಅಲ್ಲಿ ಸಿ.ಪಿ.ಯೋಗೇಶ್ವರ್​  ಹೇಳಿರುವ ಅಂಶಗಳು ಈ ಕೆಳಕಂಡಂತಿವೆ.

  1. ಸಿಎಂ ಬಿಎಸ್ ಯಡಿಯೂರಪ್ಪನವರು ಎಚ್ ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್​ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.

  2. ಇಲಾಖೆಯಲ್ಲಿ ಹಸ್ತಕ್ಷೇಪ ಆಗುತ್ತಿದೆ.

  3. ವಿಜಯೇಂದ್ರ ಇಲಾಖೆಗಳಲ್ಲಿ ಮಾಡುತ್ತಿರುವ ಹಸ್ತಕ್ಷೇಪದ ಬಗ್ಗೆ ದಾಖಲೆ ಸಮೇತ ಮಾಹಿತಿ ಇದೆ.

  4. ಮುಂದಿನ ಚುನಾವಣೆಗೆ ಇದೇ ರೀತಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತದೆ.

  5. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

  6. ಕಾಂಗ್ರೆಸ್ ಪಕ್ಷ ನಮ್ಮ ಒಳಜಗಳವನ್ನು ಎನ್ ಕ್ಯಾಷ್ ಮಾಡಿಕೊಳ್ಳುತ್ತಿದೆ.

  7. ಇಲಾಖೆ ಹಾಗೂ ಪ್ರದೇಶವಾರು ಅಭಿವೃದ್ಧಿ ಬಗ್ಗೆ ಮೌಲ್ಯಮಾಪನ ಮಾಡಿ.

  8. ಸರ್ಕಾರದ ಯೋಜನೆಗಳು ಜನರಿಗೆ ತಲುಪಿದೆಯಾ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಿ.

  8. ಖಾಸಗಿ ಏಜನ್ಸಿ ಮೂಲಕ ಪಕ್ಷ ಹಾಗೂ ಸರ್ಕಾರದ ವರ್ಚಸ್ಸನ್ನು ಅಭಿಪ್ರಾಯ ಕೇಳಿ.

  9. ವರ್ಗಾವಣೆ, ಅನುದಾನ ಬಿಡುಗಡೆ ವಿಚಾರದಲ್ಲಿ ಶಾಸಕರಲ್ಲಿ ಅಸಮಾಧಾನವಿದೆ.

  10. ನಾಯಕತ್ವ ಬದಲಾವಣೆಯ ಗೊಂದಲದ ಹೇಳಿಕೆಗಳಿಂದ ಆಡಳಿತ ಹಾಗೂ ಪಕ್ಷದ ಮೇಲೆ ಭಾರಿ ಪರಿಣಾಮ ಬೀರಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಿದೆ

  11. ಮುಂದಿನ ಚುನಾವಣೆಗೆ ನಮ್ಮ ಕಾರ್ಯತಂತ್ರ ಹಾಗೂ ಕಾರ್ಯವೈಖರಿ ಬದಲಾಗಬೇಕು

  12. ಇಲಾಖೆಗಳಿಗೆ ಬಜೆಟ್ ನಲ್ಲಿ ಘೋಷಿಸಿದ ಅನುದಾನ ನೀಡಿಲ್ಲ. ಕೆಲವು ಇಲಾಖೆಗಳಲ್ಲಿ ಅನುದಾನದ ತಾರತಮ್ಯ ಆಗಿದೆ.

  13) ರಾಮನಗರ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಇದ್ದರೂ ಕುಮಾರಸ್ವಾಮಿ ಹಾಗೂ ಡಿಕೆಶಿ ಪರ ಅಧಿಕಾರಿಗಳನ್ನೇ ಹಾಕಿಕೊಡಲಾಗಿದೆ

  14) ಹೆಚ್ ಡಿ ಕೆ , ಡಿಕೆಶಿ , ಸಿದ್ದರಾಮಯ್ಯ ಕ್ಷೇತ್ರಗಳಿಗೆ ಅತಿಹೆಚ್ಚು ಅನುದಾನ ನೀಡಲಾಗಿದೆ

  15) ಬಿಎಸ್ವೈ ಇದ್ದರೆ ವಿಪಕ್ಷದ ನಾಯಕರಿಗೆ ಎಲ್ಲಾ ರೀತಿಯ ಅನುಕೂಲ ಮತ್ತು ಸರಾಗವಾಗಿ ತಮಗೆ ಬೇಕಾದ ಕೆಲಸ ಆಗಲಿದೆ ಹಾಗಾಗಿ ಬಿಎಸ್ವೈ ಸಿಎಂ ಆಗಿದ್ರೆ ಇವರಿಗೆ ಒಳಿತು.

  16) ಹಳೇ ಮೈಸೂರು ಭಾಗದಲ್ಲಿ ಇವರ ಒಳ ಒಪ್ಪಂದದಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ.

  17) ನಾನು ಸೇರಿದಂತೆ ಬಹುತೇಕ ಸಚಿವರು ಮತ್ತು ಅವರ ಖಾತೆಗಳು ಹೆಸರಿಷ್ಟೆ , ಇಂಧನ, ಜಲಸಂಪನ್ಮೂಲ, ಹಣಕಾಸು,ಬೆಂಗಳೂರು ಅಭಿವೃದ್ಧಿಯಂತ ಖಾತೆ ಸಿಎಂ ಬಳಿ ಇವೆ . ಬಜೆಟ್ ನ ಶೇ. 50 ಹಣ ಈ ಖಾತೆಗಳಲ್ಲೇ ಇರೋದು. ಇದರ ಸಂಪೂರ್ಣ ನಿರ್ವಹಣೆ ವಿಜಯೇಂದ್ರದು.

  18) ಇದೇ ಕಾರಣಕ್ಕೆ ನಾನು ಮೂರು ಪಕ್ಷಗಳ ಸರ್ಕಾರ, ಶುದ್ಧ ಬಿಜೆಪಿ ಸರ್ಕಾರ ಎಂದು ಹೇಳಿದ್ದು ಎಂದು ಹೇಳುವ ಮೂಲಕ ಸಿಪಿವೈ ತನ್ನ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ದಾರೆ.

  ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: