• Home
 • »
 • News
 • »
 • state
 • »
 • Karnataka Elections: ಹಳೇ ಗಂಡನ ಪಾದವೇ ಗತಿ: 'ಅನರ್ಹ'ರನ್ನು ಪಕ್ಷಕ್ಕೆ ಆಹ್ವಾನಿಸಿದ ಡಿಕೆಶಿಗೆ ಸಚಿವನ ತಿರುಗೇಟು!

Karnataka Elections: ಹಳೇ ಗಂಡನ ಪಾದವೇ ಗತಿ: 'ಅನರ್ಹ'ರನ್ನು ಪಕ್ಷಕ್ಕೆ ಆಹ್ವಾನಿಸಿದ ಡಿಕೆಶಿಗೆ ಸಚಿವನ ತಿರುಗೇಟು!

ಡಿ. ಕೆ. ಶಿವಕುಮಾರ್

ಡಿ. ಕೆ. ಶಿವಕುಮಾರ್

ಯುಬಿ ಬಣಕಾರ್ ವಿರುದ್ದ ಕಿಡಿ ಕಾರಿದ ಸಚಿವ ಬಿಸಿ ಪಾಟೀಲ್ ಬಣಕಾರ್​ರನ್ನು ನಾನು ಹೊಸದಾಗಿ ಎದುರಿಸುತ್ತಿಲ್ಲ. ಈಗಾಗಲೇ ಮೂರು ಸಾರಿ ಕುಸ್ತಿ ಆಡಿ ಒಗೆದಿದ್ದೇನೆ. ಮುಂದಿನ ಚುನಾವಣೆಯಲ್ಲೂ ಅವರನ್ನು ಒಗೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು(ನ.18): ಅತ್ತ ಚುನಾವಣೆಗೆ (Karnataka Assembly Elections 2023) ದಿನಗಳು ಸಮೀಪಿಸುತ್ತಿದ್ದಂತೆಯೇ ಇತ್ತ ರಾಜಕೀಯ ನಾಯಕರ ವಾಕ್ಸಮರವೂ ಜೋರಾಗುತ್ತಿದೆ. ಹೌದು ಒಂದಿಲ್ಲೊಂದು ಕಾರಣದಿಂದ ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗುತ್ತಿದ್ದಾರೆ. ಸದ್ಯ ಈ ಸಾಲಿಗೆ ಸಚಿವ ಬಿ. ಸಿ. ಪಾಟೀಲ್ (Minister BC Patil) ಕೂಡಾ ಸೇರ್ಪಡೆಯಾಗಿದ್ದಾರೆ. ಹೌದು ಯುಬಿ ಬಣಕಾರ್ (UB Banakar) ವಿರುದ್ದ ಕಿಡಿ ಕಾರಿದ ಸಚಿವ ಬಿಸಿ ಪಾಟೀಲ್ ಬಣಕಾರ್​ರನ್ನು ನಾನು ಹೊಸದಾಗಿ ಎದುರಿಸುತ್ತಿಲ್ಲ. ಈಗಾಗಲೇ ಮೂರು ಸಾರಿ ಕುಸ್ತಿ ಆಡಿ ಒಗೆದಿದ್ದೇನೆ. ಮುಂದಿನ ಚುನಾವಣೆಯಲ್ಲೂ ಅವರನ್ನು ಒಗೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.


  ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ. ಸಿ. ಪಾಟೀಲ್ ಬಣಕಾರ್​ ವಿರುದ್ಧ ಕಿಡಿ ಕಾರುತ್ತಾ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ, ನಾನು ಏನು ಅಭಿವೃದ್ಧಿ ಮಾಡಿದ್ದೀನಿ ಅಂತಾ ಪುಸ್ತಕ ಪ್ರಿಂಟ್ ಮಾಡಿ ಜನರಿಗೆ ಕೊಡ್ತೀನಿ. ಆ ಮೇಲೆ ನನ್ನ ಕ್ಷೇತ್ರ ಜನರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.


  ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಮಾಜಿ ಸಿಎಂ ಸ್ಪರ್ಧೆ ಫಿಕ್ಸ್​! ಮತ್ತೆ ನಾಮಿನೇಷನ್​ ಮಾಡಲು ಬರ್ತಾರಂತೆ ಸಿದ್ದರಾಮಯ್ಯ


  ಅನರ್ಹರಾಗಿ ಆರು ತಿಂಗಳು ವನವಾಸ ಅನುಭವಿಸಿದ್ದೇವೆ


  ಅಲ್ಲದೇ 2018-19ರಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ, ಅವಾಗ ಇವರು ಉಗ್ರಾಣ ನಿಗಮ ಚೇರ್ ಮೇನ್ ಆಗಿದ್ರು. ನಾವು ಅವಾಗ ಅನರ್ಹರಾಗಿ ಆರು ತಿಂಗಳು ವನವಾಸ ಅನುಭವಿಸಿದ್ದೇವೆ. ಅವತ್ತು ಅನರ್ಹರಾದ ಮೇಲೆ ಇವರ ಪೊಲಿಟಿಕಲ್ ಕೆರಿಯರ್ ಮುಗಿದೇ ಹೋಯ್ತು ಅಂತಾ ಬಹಳಷ್ಟು ಜನರು ಹಾಲು ಕುಡಿದರು. ಏನಾದರೂ ವ್ಯತಿರಿಕ್ತವಾಗಿ ಆಗಿದ್ರೆ ನಾನು 23ಕ್ಕೂ ಚುನಾವಣೆಗೆ ನಿಲ್ಲೋಕೆ ಆಗ್ತಾ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಅವರು ಅಧಿಕಾರವನ್ನು ಪಡೆದುಕೊಂಡು, ಸರ್ಕಾರಿ ವಾಹನ, ಸರ್ಕಾರಿ ಕಚೇರಿ, ಸರ್ಕಾರಿ ಬಂಗಲೆ ಪಡೆದು ಎಲ್ಲವನ್ನೂ ಅನುಭವಿಸಿದರು. ಆಮೇಲೆ ತಾಲೂಕಿನಲ್ಲಿ ಪ್ರೋಟೋಕಾಲ್ ನಂತೆ ಎಲಲ್ಲರೂ ಜೊತೆಗಿದ್ದರು. ಕ್ಷೇತ್ರದ ಎಲ್ಲಾ ಕಲ್ಲುಗಳ ಮೇಲೂ ಇವರ ಹೆಸರು ಇದೆ. ಹೀಗಿರುವಾಗ ಅವರಿಗೆ ಯಾವ ರೀತಿ ಕಿರುಕುಳ ಆಯ್ತು ಅಂತಾ ಗೊತ್ತಿಲ್ಲ, ನಾನು ರಾಜೀನಾಮೆ ಕೊಟ್ಟು, ಮಂತ್ರಿ ಆಗಿದ್ದು ಕಿರುಕುಳನಾ...? ವಾಹನ ಸಿಕ್ಕಿದ್ದು ಕಿರುಕುಳನಾ..? ಅಥವ ಸರ್ಕಾರಿ ಬಂಗಲೆ ಕಿರುಕುಳ ಅನ್ನೋದ್ರಲ್ಲಿ ಅರ್ಥ ಏನಿದೆ..? ಎಂದು ಪ್ರಶ್ನಿಸಿದ್ದಾರೆ.


  Minister BC Patil indirectly support Umesh katti North Karnataka Separate State statement sbtv mrq
  ಬಿ ಸಿ ಪಾಟೀಲ್


  ಅವರ ಹಿಂಬಾಲಕರು ಅವರ ಜನ್ಮದಲ್ಲಿ ನೋಡದಷ್ಟು ಕೆಲಸ ಪಡೆದುಕೊಂಡಿದ್ದಾರೆ


  ನಿಷ್ಠವಂತ ಬೆಂಬಲಿಗರ ಕುರಿತಾಗಿ ಮಾತನಾಡಿದ ಬಿ. ಸಿ. ಪಾಟೀಲ್ ಪಕ್ಷದಲ್ಲಿ ಇರೋದು ನಿಷ್ಠೆಯಿಂದಲೇ ಇದ್ದಾರೆ. ನನ್ನ ಕಾಲದಲ್ಲಿ ನಾನು ಯಾರಿಗೂ ಕೊಟ್ಟಿಲ್ಲ. ಯು ಬಿ ಬಣಕಾರ್​ಗೂ ಹಿಂಬಾಲಕರು ಇದ್ದಾರೆ. ನನ್ನ ಹಿಂಬಾಲಕರೂ ಇದ್ದಾರೆ. ಕ್ಷೇತ್ರದಲ್ಲಿ ಎರಡು ಗುಂಪುಗಳು ಇದ್ದೇ ಇದ್ದಾವೆ. ಆದರೆ ಅವರ ಹಿಂಬಾಲಕರು ಅವರ ಜನ್ಮದಲ್ಲಿ ನೋಡದಷ್ಟು ಕೆಲಸ ಪಡೆದುಕೊಂಡಿದ್ದಾರೆ. ಅವರು ಅಷ್ಟು ಕೆಲಸಗಳು ತಿಂದು, ಲಾಭವನ್ನು ತಗೊಂಡು, ನನ್ನ ಕಿರುಕುಳ ಅಂದರೆ ಆ ದೇವರೇ ನೋಡ್ತಾನೆ ಎಂದು ಬಿಸಿ ಪಾಟೀಲ್ ಕಿಡಿ ಕಾರಿದ್ದಾರೆ.


  ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತನಾಡಿದ್ದಾರೆ ಎಂದು ಸದನದಲ್ಲಿ ಎಲ್ಲರೂ ನೋಡಿದ್ದಾರೆ


  ಇದೇ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಮರಳಿ ಬರುವಂತೆ ಡಿಕೆಶಿ ಆಹ್ವಾನಿಸಿರುವ ವಿಚಾರವಾಗಿ ಖಾರವಾಗೇ ಪ್ರತಿಕ್ರಿಯಿಸಿದ ನಾವೆಲ್ಲ ಅನರ್ಹರಾದಾಗ ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತನಾಡಿದ್ದಾರೆ ಎಂದು ಸದನದಲ್ಲಿ ಎಲ್ಲರೂ ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯ್ತು ಅಂತೆಲ್ಲ ಮಾತಾಡಿದರು. ಸಮಾಧಿ ಆದವರನ್ನು ‌ಈಗ ಡಿಕೆಶಿ ಮತ್ತೆ ಯಾಕೆ ಕರೆಯುತ್ತಿದ್ದಾರೆ. ಅವರು ಕರೆಯುತ್ತಿದ್ದಾರೆ, ಬಿಟ್​ಟು ಹೋದವರು ಬರಬಹುದು ಅಂತ ಕರೆಯುತ್ತಿದ್ದಾರಷ್ಟೇ. ನಮ್ಮವರು ಯಾರೂ ಅರ್ಜಿ ಹಾಕಿಲ್ಲ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಆಗಿರಬಹುದು. ಹಾಗಾಗಿ ಹಳೇ ಗಂಡನ ಪಾದವೇ ಗತಿ ಅಂತ ಕರೆಯುತ್ತಿದ್ದಾರೆ. ಆದರೆ ನಮ್ಮಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ, ಕಾಂಗ್ರೆಸ್​ನಿಂದಲೇ ಬಹಳಷ್ಟು ಜನ ಬಿಜೆಪಿಗೆ ಬರುತ್ತಾರೆ ಎಂದು ಡಿಕೆಶಿಗೆ ಮಗುದ್ದು ಕೊಟ್ಟಿದ್ದಾರೆ.


  ಇದನ್ನೂ ಓದಿ:  Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


  ನಾವ್ಯಾರೂ ರಮೇಶ್ ಜಾರಕಿಹೊಳಿಯನ್ನು ಮರೆತಿಲ್ಲ


  ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿಯೂ ಮಾತನಾಡಿದ ಬಿ. ಸಿ. ಪಾಟೀಲ್ ಜಾಣತನದ ಉತ್ತರ ನೀಡಿದ್ದಾರೆ. ನಾವ್ಯಾರೂ ಅವರನ್ನು ಮರೆತಿಲ್ಲ, ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಗೆ ಕೇಳಬೇಕು, ಜೆಡಿಎಸ್ ಸೇರುವ ಸುದ್ದಿ ಹರಿದಾಡ್ತಿರುವ ವಿಚಾರವೂ ಗೊತ್ತಿಲ್ಲ ಎಂದಿದ್ದಾರೆ.


  ಒಟ್ಟಾರೆಯಾಗಿ ಚುನಾವಣೆ ವೇಳೆಗೆ ಈ ಬಾರಿ ರಾಜಕೀಯ ದಂಗಲ್ ಕಾಣ ಸಿಗುವುದರಲ್ಲಿ ಅನುಮಾನವಿಲ್ಲ. ಈ ಮಾತಿನ ಸಮರ ಅದೆಷ್ಟರ ಮಟ್ಟಕ್ಕೆ ಸಾಗುತ್ತದೆ ಎಂದು ಕಾಲವೇ ಉತ್ತರಿಸಬೇಕಿದೆ.

  Published by:Precilla Olivia Dias
  First published: