• Home
  • »
  • News
  • »
  • state
  • »
  • Karnataka Politics - ಹೆಚ್.ಸಿ. ಬಾಲಕೃಷ್ಣಗೆ ಎಲ್ಲಿ ಸಮಾಧಾನವೋ ಅಲ್ಲಿಗೆ ಹೋಗಲಿ: ಸಂಸದ ಡಿ.ಕೆ. ಸುರೇಶ್ ಖಡಕ್ ಮಾತು

Karnataka Politics - ಹೆಚ್.ಸಿ. ಬಾಲಕೃಷ್ಣಗೆ ಎಲ್ಲಿ ಸಮಾಧಾನವೋ ಅಲ್ಲಿಗೆ ಹೋಗಲಿ: ಸಂಸದ ಡಿ.ಕೆ. ಸುರೇಶ್ ಖಡಕ್ ಮಾತು

ಡಿಕೆ ಸುರೇಶ್

ಡಿಕೆ ಸುರೇಶ್

Karnataka Politics News: ನಾನು ಅವರನ್ನ ಕಡೆಗಣಿಸಿದ್ದೇನೆ ಎಂದು ಅವರು ಏಕೆ ಹೇಳಿದ್ದಾರೋ ಗೊತ್ತಿಲ್ಲ‌. ನಾನು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಡಿಕೆ ಸುರೇಶ್ ಹೇಳಿದ್ಧಾರೆ.

  • Share this:

    ರಾಮನಗರ(ಮೇ 14): ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್.ಸಿ. ಬಾಲಕೃಷ್ಣ ಬೇಸರದ ವಿಚಾರಕ್ಕೆ ಇಂದು ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ಸಿ. ಬಾಲಕೃಷ್ಣ ಎಲ್ಲಿಗೆ ಬೇಕಾದರೂ ಹೋಗಲಿ.‌ ಅವರ ಮಾತೃ ಪಕ್ಷಕ್ಕೆ ಬೇಕಾದರೂ ಹೋಗಲಿ‌ ಎಂದು ಕೋಪದಲ್ಲೇ ಖಡಕ್ ತಿರುಗೇಟು ಕೊಟ್ಟಿದ್ದಾರೆ.

    ರಾಮನಗರದ ಲಕ್ಷ್ಮೀಪುರದಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ನಾನು‌ ಯಾರನ್ನೂ‌ ತಿರಸ್ಕರಿಸಿಲ್ಲ. ನಾನು ಅವರನ್ನ ಕಡೆಗಣಿಸಿದ್ದೇನೆ ಎಂದು ಅವರು ಏಕೆ ಹೇಳಿದ್ದಾರೋ ಗೊತ್ತಿಲ್ಲ‌. ನಾನು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ಆದರೆ ಅವರಿಗೆ ಎಲ್ಲಿ‌ ಸಮಾಧಾನ ಇದೆಯೋ ಅಲ್ಲೇ ಕೆಲಸ ಮಾಡಲಿ. ಬಾಲಕೃಷ್ಣ ಜೊತೆಗೆ ಮೊನ್ನೆಯೂ ಮಾತನಾಡಿದ್ದೇನೆ. ಅವರಿಗೆ ಆ ಭಾವನೆ ಯಾಕೆ ಬಂದಿದೆಯೋ ಗೊತ್ತಿಲ್ಲ. ದೊಡ್ಡ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಹತ್ತಿರ ಬೇಕಾದರೆ ಚರ್ಚೆ ಮಾಡಲಿ ಎಂದರು.

    ಬಿಡದಿಯ ಟೌನ್ ಶಿಪ್ ವಿಚಾರವಾಗಿ ನಾನು ರೈತರ ಪರವಾಗಿದ್ದೇನೆ. ಕೆಐಎಡಿಬಿಯವರ ಜಮೀನು ಡಿನೋಟಿಫೈ ಸಂಬಂಧ ನಾನು ವಿರೋಧಿಯಾಗಿದ್ದೇನೆ. ಇವರೆಲ್ಲ ಸಿಎಂ ಬಳಿ ಮಾತನಾಡುವ ಮೊದಲೇ ನಾನು ಮಾತನಾಡಿದ್ದೇನೆಂದು ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದರು.

    ಇದನ್ನೂ ಓದಿ: Karnataka Politics - ಡಿ.ಕೆ. ಶಿವಕುಮಾರ್​ಗೆ ಸ್ವಕ್ಷೇತ್ರದಲ್ಲೇ ಹಿನ್ನಡೆ; ಸ್ವಪಕ್ಷೀಯರ ವಿಶ್ವಾಸ ಗಳಿಸುವಲ್ಲಿ ವಿಫಲ

    ಈ ಸಂದರ್ಭದಲ್ಲಿ ಮಾಗಡಿ ಜೆಡಿಎಸ್ ಶಾಸಕ ಎ. ಮಂಜು, ಬಾಲಕೃಷ್ಣ ಸೋದರ ಹೆಚ್.ಎನ್. ಅಶೋಕ್ ಅವರೂ ಜೊತೆಯಲ್ಲೇ ಇದ್ದದ್ದು ಕಂಡುಬಂತು.

    ಮಾಗಡಿಯ ಮಾಜಿ ಶಾಸಕರಾದ ಹೆಚ್.ಸಿ. ಬಾಲಕೃಷ್ಣ ಅವರು ನಿನ್ನೆ ಮಾತನಾಡುತ್ತಾ, ತನಗೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ತನ್ನನ್ನು ಬೆಳೆಸಿದ್ದು ಕ್ಷೇತ್ರದ ಜನರೇ ಹೊರತು ಬೇರೆ ಯಾವ ನಾಯಕರೂ ಅಲ್ಲ ಎಂದು ಬೇಸರ ತೋಡಿಕೊಂಡಿದ್ದರು. ಬಾಲಕೃಷ್ಣ ಅವರು ಮೊದಲು ಬಿಜೆಪಿಯಲ್ಲಿದ್ದವರು. ಬಳಿಕ ಜೆಡಿಎಸ್​ಗೆ ಹೋಗಿದ್ದರು. ಆ ನಂತರ ತೆನೆಪಕ್ಷ ಬಿಟ್ಟು ಕೈಪಾಳಯಕ್ಕೆ ಹೋದರು. ಇದೀಗ ಅವರು ಮತ್ತೆ ಬಿಜೆಪಿಗೆ ಹೋಗಬಹುದಾ ಎಂಬ ಅನುಮಾನಗಳು ಮೂಡುತ್ತಿವೆ.

    ವರದಿ: ಎ.ಟಿ. ವೆಂಕಟೇಶ್

    First published: