ಬೆಂಗಳೂರು: ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಇಬ್ಬರನ್ನೂ ಜೆಡಿಎಸ್ ಪಕ್ಷದ (JDS) ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದೆ. ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ಮಾಹಿತಿ ನೀಡಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಶೀಘ್ರ ದೂರು ನೀಡಲಾಗುವುದು (Karnataka Politics) ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ನಾಳೆ ಅಥವಾ ನಾಡಿದ್ದು ಸ್ಪೀಕರ್ಗೆ ದೂರು ನೀಡಲು ಜೆಡಿಎಸ್ ತೀರ್ಮಾನ ನೀಡಿದೆ ಎಂದು ಹೇಳಲಾಗಿದೆ. ಜೆಡಿಎಸ್ ಕೋರ್ ಕಮೀಟಿ ಸಭೆಯಲ್ಲಿ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗು ವಿಪಕ್ಷ ನಾಯಕ ಸಿದ್ದರಾಮಯ್ಯ ಎಂದು ಕೋಲಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ್ಯ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದರು.
ಈಮುನ್ನವೇ ಸೂಚನೆ ನೀಡಿದ್ದ ಸಿಎಂ ಇಬ್ರಾಹಿಂ
ಮುಳಬಾಗಿಲು ಪಟ್ಟಣದಲ್ಲಿ ಜೆಡಿಎಸ್ ಮುಖಂಡರೊಬ್ಬರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಇಬ್ರಾಹಿಂ, ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಮೊನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ, ಬಿಜೆಪಿ ಹಾಗು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಮೊದಲನೇ ಮತ ಬಿಜೆಪಿಗೆ, ಎರಡನೇ ಮತ ಕಾಂಗ್ರೆಸ್ ಗೆ ಹಾಕಿಸಿದ್ದಾರೆ, ಹಾಗಾಗಿ ರಾಜ್ಯಸಭೆ ಚುನಾವಣೆ ಮೂಲಕ ಬಿಜೆಪಿ, ಕಾಂಗ್ರೆಸ್ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಂದು ತಿಳಿದುಬಂದಿದೆ. ಇದನ್ನ ರಾಹುಲ್ ಗಾಂಧಿಯವರು ಗಮನಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯನ್ನ ವಜಾ ಮಾಡ್ತಾರಾ? ಎಂದು ಪ್ರಶ್ನೆ ಹಾಕಿದ್ದರು.
ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸಗೌಡ ಅಮಾನತು
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತಮಾನ ಮಾಡಿರುವ, ಶಾಸಕರಾದ ಗುಬ್ಬೀ ಶ್ರೀನಿವಾಸ್, ಶ್ರೀನಿವಾಸಗೌಡ ಇಬ್ಬರನ್ನೂ ಜೆಡಿಎಸ್ ನಿಂದ ಉಚ್ಚಾಟನೆ ಮಾಡಿರುವುದಾಗಿ ಸಿಎಂ ಇಬ್ರಾಹಿಂ ಹೇಳಿದ್ದಾರೆ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೆ ಗುಬ್ಬಿ ಶ್ರೀನಿವಾಸ್ ಹೇಳಿಕೆಗೆ, ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದರು.
ಒಂದೇ ಸಲ ಇಬ್ಬರನ್ನ ಮದುವೆಯಾಗಿದ್ದಾರೆ
"ನಾಯಿ ಮನುಷ್ಯನಿಗೆ ಕಚ್ಚುತ್ತೆ, ಆದರೆ ಮನುಷ್ಯ ನಾಯಿಯನ್ನ ಕಚ್ಚಲ್ಲ, ಶ್ರೀನಿವಾಸಗೌಡ ಒಂದೇ ಚುನಾವಣೆಯಲ್ಲಿ ಇಬ್ಬರಿಗೆ ಮತಹಾಕಿ, ಒಂದೇ ಸಲ ಇಬ್ಬರನ್ನ ಮದುವೆಯಾಗಿದ್ದಾರೆ. ಹಣ ಪಡೆದು ರಾಜಕೀಯ ಮಾಡ್ತಿರುವುದು ಕುಮಾರಸ್ವಾಮಿ. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಶಾಸಕ ಗುಬ್ಬೀ ಶ್ರೀನಿವಾಸ್, ಶ್ರೀನಿವಾಸಗೌಡ ಇಬ್ಬರನ್ನ ಪಕ್ಷದಿಂದ ಉಚ್ಚಾಟನೆ ಮಾಡಿರುವೆ, ಸ್ಪೀಕರ್ ಗೆ ಪತ್ರ ಬರೆದು ಇಬ್ಬರ ಅನರ್ಹತೆಗೆ ಮನವಿ ಮಾಡುವೆ ಎಂದರು. ಗತಿಯಿಲ್ಲದೆ ಜೆಡಿಎಸ್ ಟಿಕೆಟ್ ನೀಡಿಲ್ಲ, ನೀವು ಮನೆ ಬಾಗಿಲಿಗೆ ಬಂದು ಗೋಗರಿದಿದ್ದು ನೆನಪಿದೆ.
ಇದನ್ನೂ ಓದಿ: Uttara Karnataka: 2024ರ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಉಮೇಶ್ ಕತ್ತಿ ಬಾಂಬ್
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಯಾರೂ ಗತಿಯಿಲ್ಲದೆ, ನಂಗೆ ಟಿಕೆಟ್ ನೀಡಿದರು ಎಂಬ, ಜೆಡಿಎಸ್ ರೆಬೆಲ್ ಶಾಸಕ ಶ್ರೀನಿವಾಸಗೌಡ ಮಾತಿಗೆ, ಕೋಲಾರದ ಜೆಡಿಎಸ್ ನಾಯಕರು ಕೆಂಡ ಕಾರಿದ್ದಾರೆ, ಈ ಬಗ್ಗೆ ಮಾತನಾಡಿದ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್, ಪಾಪ ಶ್ರೀನಿವಾಸಗೌಡರಿಗೆ ವಯೋ ಸಹಜ ಮರೆವು ಹೆಚ್ಚಾಗಿದೆ, ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ, ಜೆಡಿಎಸ್ ಕದ ತಟ್ಟಿದ್ದು ಶ್ರೀನಿವಾಸಗೌಡರು, ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಮಾತು ಕೇಳಿದ್ದಾರೆ.
ಇದನ್ನೂ ಓದಿ: JDS MLA Slaps: ಪ್ರಿನ್ಸಿಪಾಲ್ ಕಪಾಳಕ್ಕೆ ಹೊಡೆದ ಜೆಡಿಎಸ್ ಶಾಸಕ ಶ್ರೀನಿವಾಸ್: ವಿಡಿಯೋ ವೈರಲ್
ನಿಮ್ಮ ವಯಸ್ಸಿಗೆ ಗೌರವ ತರುವಂತಹ ಕೆಲಸ ಮಾಡಿ ಎಂದು ಕಿಡಿಕಾರಿದರು, ಇನ್ನು ಇದೇ ವೇಳೆ ಮಾತನಾಡಿದ ಕೋಲಾರ ಜೆಡಿಎಸ್ ಮುಖಂಡ ಶ್ರೀನಾಥ್, 2018 ರ ಜೆಡಿಎಸ್ ಟಿಕೆಟ್ ಗಾಗಿ ಶ್ರೀನಿವಾಸಗೌಡರು ನಮ್ಮ ಮನೆಯ ಬಾಗಿಲಿಗೆ ಬಂದಿದ್ದರು. ಶಾಸಕರಾಗಿ ಆಯ್ಕೆಯಾದರು ಇದುವರೆಗು ಅಭಿವೃದ್ದಿ ಕೆಲಸ ಮಾಡಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಕ್ಷೇತ್ರ ಜನತೆಗೆ ದ್ರೋಹ ಮಾಡಿದ್ದಾರೆ, ಕುಮಾರಸ್ವಾಮಿ ಬೇಡವೆಂದರು ನಾವೇ ಬಲವಂತ ಮಾಡಿ ವಿಧಾನಸಭೆ ಟಿಕೆಟ್ ಕೊಡಿಸಿದ್ದು ಎಂದು ಶ್ರೀನಿವಾಸಗೌಡ ವಿರುದ್ದ ಕೆಂಡಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ