Karnataka Politics: ಕರ್ನಾಟಕದಲ್ಲಿ ಹೊಸ ಪಕ್ಷ, 'ಹಿಂದೂಸ್ಥಾನ್ ಜನತಾ ಪಾರ್ಟಿ'ಗೆ ನಾಳೆ ಮಠಾಧೀಶರಿಂದ ಚಾಲನೆ

Hindusthan Janata Party: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೂಸ್ಥಾನ ಜನತಾ ಪಾರ್ಟಿ ಉದ್ದೇಶಿಸಿದೆ ಎನ್ನಲಾಗಿದೆ.

ವಿನಾಯಕ್ ಮಾಳದಕರ್ ಮತ್ತು ಉದ್ಘಾಟನಾ ಕಾರ್ಯಕ್ರಮದ ಕರಪತ್ರ

ವಿನಾಯಕ್ ಮಾಳದಕರ್ ಮತ್ತು ಉದ್ಘಾಟನಾ ಕಾರ್ಯಕ್ರಮದ ಕರಪತ್ರ

 • Share this:
  ಕರ್ನಾಟಕ ರಾಜಕಾರಣಕ್ಕೆ (Karnataka Politics) ಹೊಸ ಪಕ್ಷವೊಂದು ಸೇರ್ಪಡೆಯಾಗಲಿದೆ. ಹಿಂದೂಸ್ಥಾನ್ ಜನತಾ ಪಾರ್ಟಿ (Hindustan Janata party) ಎಂಬ ಹೊಸ ಪಕ್ಷವೊಂದು ಅಸ್ತಿತ್ವಕ್ಕೆ ಬರಲಿದ್ದು ಬೆಂಗಳೂರಿನಲ್ಲಿ (Bengaluru) ಹೊಸ ಪಾರ್ಟಿಗೆ ಆಗಸ್ಟ್ 7ರಂದು ಚಾಲನೆ ದೊರೆಯಲಿದೆ. ವಿನಾಯಕ್ ಮಾಳದಕರ್ ಎಂಬುವವರು ಹಿಂದೂಸ್ತಾನ ಜನತಾ ಪಾರ್ಟಿಯ ಅಧ್ಯಕ್ಷರಾಗಿದ್ದು ಬಿಜೆಪಿಗೆ (BJP) ಸೆಡ್ಡು ಹೊಡೆಯಲು ಈ  ಪಕ್ಷವನ್ನು ಹುಟ್ಟುಹಾಕಲಾಗುತ್ತಿದೆಯೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಬೆಂಗಳೂರಿನಲ್ಲಿ ಆಗಸ್ಟ್ 7ರಂದು ಉದ್ಘಾಟನಾ ಸಮಾರಂಭ ಮತ್ತು ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ. 

  ಬೆಂಗಳೂರಿನ ರಾಜಾಜಿನಗರದಲ್ಲಿರುವ ಶರಣ ಸೇವಾ ಸಮಾಜದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಸಭೆಯ ನಂತರ ಹೊಸ ಪಾರ್ಟಿಗೆ ಮಠಾಧೀಶರಿಂದಲೇ ಚಾಲನೆ ದೊರೆಯಲಿದೆ ಎಂದು ವರದಿಗಳು ತಿಳಿಸಿವೆ.

  ವಿಧಾಸಭಾ ಚುನಾವಣೆ ಟಾರ್ಗೆಟ್?
  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೂಸ್ಥಾನ ಜನತಾ ಪಾರ್ಟಿ ಉದ್ದೇಶಿಸಿದೆ ಎನ್ನಲಾಗಿದೆ. ಅಲ್ಲದೇ ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂದೂಸ್ಥಾನ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎಂದು ಸಹ ಹೇಳಲಾಗಿದೆ.

  ಪಕ್ಷದ ಪ್ರಣಾಳಿಕೆಯಲ್ಲಿ ಏನೆಲ್ಲ ಇರುವ ಛಾನ್ಸ್ ಇದೆ?
  ನಾಳೆ ಅಂದರೆ ಆಗಸ್ಟ್ 7ರಂದು ಹೊಸ ಪಕ್ಷದ ಪ್ರಣಾಳಿಕೆಯೂ ಬಿಡುಗಡೆಯಾಗುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ, 100 ಯೂನಿಟ್​ವರೆಗೆ ಉಚಿತ ವಿದ್ಯುತ್ , ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ, ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್, ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಹೀಗೆ ವಿವಿಧ ಯೋಜನೆಗಳನ್ನು ಪ್ರಮಾಣಿಕೆಯಲ್ಲಿ ಘೋಷಿಸಲು ಹಿಂದೂಸ್ಥಾನ ಜನತಾ ಪಾರ್ಟಿ ಉದ್ದೇಶಿಸಿದೆ ಎನ್ನಲಾಗಿದೆ.

  ಇದನ್ನೂ ಓದಿ: Bengaluru Lalbagh Flower Show: ಲಾಲ್‌‌ಬಾಗಲ್ಲಿ ನಮ್ಮ ಅಪ್ಪು! ನೀವೇ ವಿಡಿಯೋ ನೋಡಿ!

  ಈ ಅಂಶಗಳೂ ಪ್ರಣಾಳಿಕೆ ಸೇರಲಿವೆಯೇ?
  ಅಷ್ಟೇ ಅಲ್ಲದೇ, ಸರ್ಕಾರಿ ಶಾಲೆಗಳ ಆಧುನೀಕರಣ, ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ, ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ರೂ. ಸಹಾಯಧನ, ಸ್ಥಳೀಯ ಯುವಜನರಿಗೆ ಸರ್ಕಾರಿ, ಖಾಸಗಿ ಉದ್ಯೋಗ, ಪ್ರತಿ ಜಿಲ್ಲೆಗಳಲ್ಲಿ ಐಟಿ-ಬಿಟಿ ಪ್ರಾರಂಭಕ್ಕೆ ಅವಕಾಶ, ರಿಕ್ಷಾ ಚಾಲಕರು, ಗಾರ್ಮೆಂಟ್ ನೌಕರರಿಗೆ ಉಚಿತ ವಿಮೆ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಏಕರೂಪ ಶುಲ್ಕ ಮುಂತಾದ ಅಂಶಗಳು ಪ್ರಣಾಳಿಕೆಯಲ್ಲಿ ಇರಲಿದೆ ಎಂದು ಹೇಳಲಾಗಿದೆ.

  ಬೆಂಗಳೂರನ್ನು ಫೋಕಸ್ ಮಾಡುತ್ತಾ ಹೊಸ ಪಕ್ಷ?
  ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜು, ಮಹದಾಯಿ ನೀರನ್ನು ಶೀಘ್ರ ಹರಿಸುವುದು ಸೇರಿದಂತೆ ಹಲವು ಘೋಷಣೆಗಳನ್ನು ಹಿಂದೂಸ್ಥಾನ ಜನತಾ ಪಾರ್ಟಿಯ ಪ್ರಣಾಳಿಕೆಯಲ್ಲಿ ಸೇರಿಸುವ ಸಾಧ್ಯತೆಯಿದೆ ಎಂದು ಸಹ ಮೂಲಗಳು ಮಾಹಿತಿ ನೀಡಿವೆ.

  ಇದನ್ನೂ ಓದಿ: Basavaraj Bommai: ಸಿಎಂ ಬೊಮ್ಮಾಯಿಗೆ ಕೊರೊನಾ; ದೆಹಲಿ ಪ್ರವಾಸ ರದ್ದು

  ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ
  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ದೃಢಪಟ್ಟಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೊರೊನಾ ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ಕೊವಿಡ್ ಖಚಿತಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  ದೆಹಲಿ ಪ್ರಯಾಣವನ್ನು ರದ್ದುಪಡಿಸಿದ್ದಾರೆ. ತಮಗೆ ಕೊವಿಡ್ 19 ಖಚಿತಪಟ್ಟಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. "ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
  Published by:guruganesh bhat
  First published: