• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Congress: ಗ್ಯಾರಂಟಿಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ, ಆದಾಯ ಹೆಚ್ಚಿಸಲು ಈ ಯೋಜನೆಗೆ ಕತ್ತರಿ?

Karnataka Congress: ಗ್ಯಾರಂಟಿಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ, ಆದಾಯ ಹೆಚ್ಚಿಸಲು ಈ ಯೋಜನೆಗೆ ಕತ್ತರಿ?

 ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಜುಲೈ 7 ರಂದು ನಡೆಯುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸರಕಾರದ ಐದು ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಕೆಲವೊಂದು ಯೋಜನೆಗಳಿಗೆ ಅಂತ್ಯಹಾಡುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ತಿಳಿದುಬಂದಿದೆ.

  • Trending Desk
  • 3-MIN READ
  • Last Updated :
  • Bangalore [Bangalore], India
  • Share this:

    ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ತನ್ನ ಐದು ಪ್ರಮುಖ ಭರವಸೆಗಳ ಆಶ್ವಾಸನೆಯನ್ನು ನೀಡುವ ಮೂಲಕ ಪ್ರಜೆಗಳ ಬಹುಮತಗಳಿಸಿದ್ದಾರೆ. ಇದೀಗ ಆಶ್ವಾಸನೆಗಳನ್ನು ನೆರವೇರಿಸುವ ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಪ್ರಸ್ತುತ ದೊರೆತಿರುವ ಮಾಹಿತಿಯ ಪ್ರಕಾರ ಜುಲೈ 7 ರಂದು ನಡೆಯುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸರಕಾರದ ಐದು ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಕೆಲವೊಂದು ಯೋಜನೆಗಳಿಗೆ ಅಂತ್ಯಹಾಡುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ತಿಳಿದುಬಂದಿದೆ.


    ಗ್ಯಾರಂಟಿ ನೆರವೇರಿಸಲು ಬೇಕು ಆರ್ಥಿಕ ನೆರವು


    ಕಾಂಗ್ರೆಸ್‌ನ ಐದು ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಹಣಕಾಸಿನ ಅಗತ್ಯವಿದೆ ಅಂತೆಯೇ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳೊಂದಿಗೆ ಹೊಸ ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಭರವಸೆಗಳನ್ನು ಈಡೇರಿಸಲು ಬರೋಬ್ಬರಿ ವರ್ಷಕ್ಕೆ 50,000-60,000 ಖರ್ಚು ಬರಲಿದೆ ಎಂದು ಇಲಾಖೆ ಅಂದಾಜಿಸಿದ್ದು ಇದು ಹೆಚ್ಚಿನ ಆರ್ಥಿಕ ಹೊರೆಯನ್ನುಂಟು ಮಾಡಲಿದೆ ಎಂದು ತಿಳಿಸಿದೆ.


    ಇದನ್ನೂ ಓದಿ: Mumbai Case: ಶವ ಕತ್ತರಿಸಿ ಕುಕ್ಕರ್​ನಲ್ಲಿ ಬೇಯಿಸಿದ, ಸಿಕ್ಕಿದ್ದು ಕಾಲುಗಳಷ್ಟೇ: ಸರಸ್ವತಿ ಹತ್ಯೆ ಶ್ರದ್ಧಾಗಿಂತಲೂ ಭೀಕರ


    ಪ್ರಸ್ತುತ ಕೆಲವೊಂದು ಯೋಜನೆಗಳಿಗೆ ಅಂತ್ಯ ಹಾಡಬೇಕಾದ ಪರಿಸ್ಥಿತಿ


    ಹೊಸ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಾಗೂ ಅವನ್ನು ಯಶಸ್ವಿಯಾಗಿ ಜಾರಿಗೆ ತರಲು ಪ್ರಸ್ತುತ ನಡೆಯುತ್ತಿರುವ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಐ ಎಸ್ ಎನ್ ಪ್ರಸಾದ್ ಹೊರಡಿಸಿರುವ ಸೂಚನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


    ಕೊನೆಗೊಳಿಸಬಹುದಾದ ಅಥವಾ ವ್ಯಾಪ್ತಿಯನ್ನು ಸೀಮಿತಗೊಳಿಸಬಹುದಾದ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳನ್ನು ಗುರುತಿಸಲು ಇಲಾಖೆಗಳಿಗೆ ಆದೇಶಿಸಲಾಗಿದೆ. ಹಣಕಾಸು ಸಚಿವಾಲಯ ತಿಳಿಸಿರುವಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಜೊತೆಗೆ ಹಲವು ಯೋಜನೆಗಳು ಅತಿಕ್ರಮಿಸುತ್ತಿದ್ದು ಯಾವುದನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತಿಲ್ಲ ಎಂದು ಸಚಿವಾಲಯ ತಿಳಿಸಿದೆ. ಇದೀಗ ಸಚಿವಾಲಯ ಖುದ್ದು ತಾನಾಗಿಯೇ ಮುಂದೆ ನಿಂತು ಮಹತ್ವವಲ್ಲದ ಯೋಜನೆಗಳನ್ನು ಗುರುತಿಸಿ ಅದನ್ನು ಕೈಬಿಡಬೇಕಾಗುತ್ತದೆ ಎಂದು ಸೂಚನೆಯಲ್ಲಿ ತಿಳಿಸಿದೆ.


    14 ನೇ ಬಜೆಟ್ ಮಂಡಿಸಲಿರುವ ಸಿದ್ಧರಾಮಯ್ಯ


    ತಮ್ಮ ದಾಖಲೆಯ 14 ನೇ ಬಜೆಟ್ ಮಂಡಿಸಲಿರುವ ಸಿದ್ಧರಾಮಯ್ಯನವರು ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಕೈಬಿಡುವುದರ ಹೊರತಾಗಿ ಗ್ಯಾರಂಟಿಗಳನ್ನು ಈಡೇರಿಸಲು ಮದ್ಯದ ಬೆಲೆ ಹೆಚ್ಚಿಸುವುದು ಹಾಗೂ ಸಾಲ ಪಡೆಯುವುದು ಮುಖ್ಯಮಂತ್ರಿಗಳ ಮುಂದಿರುವ ಆಯ್ಕೆಯಾಗಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ಜುಲೈ 31 ರವರೆಗೆ ಮಾತ್ರ ಮಾನ್ಯವಾಗಿದೆ ಹಾಗಾಗಿ ಸಿದ್ಧರಾಮಯ್ಯನವರು ಬಜೆಟ್ ಈ ಬಜೆಟ್ ಅನ್ನು ಬದಲಾಯಿಸಲಿದೆ.


    ಇದನ್ನೂ ಓದಿ: Borewell Tragedy: ಬೋರ್​ವೆಲ್​ಗೆ ಬಿದ್ದ ಕಂದಮ್ಮ, 50 ಗಂಟೆಗಳ ರಕ್ಷಣಾ ಕಾರ್ಯದ ಬಳಿಕ ಶವವಾಗಿ ಪತ್ತೆ!


    ರೈತರ ಆಕ್ರೋಶವನ್ನು ಕಾಂಗ್ರೆಸ್ ಎದುರಿಸಬಹುದೇ?


    ಎಂಟು ತಿಂಗಳ ಭಾಗಶಃ ಬಜೆಟ್‌ಗಾಗಿ ನಾವು 40,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಲಭ್ಯವಾಗುವಂತೆ ನೋಡುತ್ತಿದ್ದೇವೆ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಆಡಳಿತದಲ್ಲಿದ್ದ ನಗದು ಆಧಾರಿತ ಯೋಜನೆಗಳಾದ ಪಿಎಮ್ ಕಿಸಾನ್ ಅಡಿಯಲ್ಲಿನ ರೈತರಿಗೆ ಹಣಕಾಸಿನ ನೆರವು ಬೊಮ್ಮಾಯಿ ಅವರ ಸಾಕು ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನದಲ್ಲಿದ್ದ ರಾಜ್ಯದ ಪಾಲು ಕಡಿತಗೊಳ್ಳಬಹುದು ಎಂಬುದು ತಿಳಿದುಬಂದಿದೆ. ಅದಾಗ್ಯೂ ಈ ಯೋಜನೆಗಳನ್ನು ಕಡಿತಗೊಳಿಸುವುದು ರೈತರ ಕೋಪಕ್ಕೆ ಸರಕಾರವನ್ನು ತುತ್ತಾಗಿಸಬಹುದು ಎಂಬ ಕಳವಳ ಕೂಡ ಇದೆ. 25-100 ಕೋಟಿ ರೂ.ಗಳ ಯೋಜನೆಗಳೂ ಇವೆ. ಇಂತಹ ಸಣ್ಣ ಯೋಜನೆಗಳನ್ನು ಮಾಡುವುದು ಯಾವುದೇ ಪ್ರಯೋಜನವನ್ನೊದಗಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.




    ಕಾಂಗ್ರೆಸ್ ಮುಂದಿರುವ ಆದಾಯ ಹೆಚ್ಚಿಸುವ ಆಯ್ಕೆಗಳು


    ಮದ್ಯದ ಬೆಲೆಯನ್ನು ಹೆಚ್ಚಿಸಲು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವುದು ಆದಾಯವನ್ನು ಹೆಚ್ಚಿಸುವ ದಾರಿಯಾಗಿದ್ದರೂ, ಈ ನಿರ್ಧಾರಗಳನ್ನು ಕೈಗೊಳ್ಳುವಾಗ ಸರಕಾರ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಅಂಚೆಚೀಟಿಗಳು ಮತ್ತು ನೋಂದಣಿ ಸುಂಕ ಮತ್ತು ಮೋಟಾರು ವಾಹನಗಳ ತೆರಿಗೆ ಮೊದಲಾವುಗಳನ್ನು ಹೆಚ್ಚಿಸುವ ಮೂಲಕ ಆದಾಯದ ಉದ್ದೇಶಗಳನ್ನು ಪೂರೈಸುವುದು ಇತರ ಆಯ್ಕೆಗಳಾಗಿವೆ. ಇಂಧನದ ಮೇಲಿನ ಮಾರಾಟ ತೆರಿಗೆ ಮತ್ತೊಂದು ಆಯ್ಕೆಯಾಗಿದೆ, ಆದರೆ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್‌ನ ಪ್ರಚಾರವನ್ನು ಗಮನಿಸಿದರೆ ಇದು ರಾಜಕೀಯ ಅರ್ಥವನ್ನು ಹೊಂದಿಲ್ಲ ಎಂಬುದು ತಿಳಿದುಬರುತ್ತದೆ.

    First published: