ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಎಡಬಿಡಂಗಿ. ದೇವನೊಬ್ಬ ನಾಮ ಹಲವು ಅನ್ನೋದು ನಮ್ಮ ತತ್ವ. ದೇವರನ್ನು ಯಾವ ರೀತಿಯಲ್ಲಾದ್ರೂ ಪೂಜಿಸಬಹುದು ಎಂಬುದು ಸನಾತನ ಧರ್ಮದ ಮೂಲ ತಿರುಳು. ನಾನು ಸಿದ್ದರಾಮಯ್ಯ (Siddaramaiah) ಹೇಳಿಕೆ ಗಮನಿಸಿದೆ. ರಾಮ, ಶಿವ, ಕೃಷ್ಣ ಎಲ್ಲರೂ ಶೂದ್ರ ದೇವತೆಗಳು, ಅವರೆಲ್ಲಾ ಇಂದ್ರನ ವಿರುದ್ಧ ಬಂಡಾಯ ಎದ್ದವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ಯಾವ ಪುಸ್ತಕ ಓದಿ ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಸಿದ್ದರಾಮಯ್ಯ ರಾಮಾಯಣ, ಮಹಾಭಾರತದ ಓದುವ ಬದಲು ಲೆನಿನ್, ಮಾರ್ಕ್ಸ್ ಓದಿದ್ದಾರೆ. ಹೀಗಾಗಿ ಈಗ ಎಡಬಿಡಂಗಿ ಆಗಿದ್ದಾರೆ ಎಂದು ಬಿಜಿಪಿ ನಾಯಕ ಸಿ.ಟಿ.ರವಿ (CT Ravi) ಟೀಕಿಸಿದ್ದಾರೆ.
ಇಂದ್ರನೂ ಶಾಪಗ್ರಸ್ತನಾದಾಗ ಶಿವನ ಕುರಿತು ತಪಸ್ಸು ಮಾಡಿದ್ದು ಅವರಿಗೆ ತಿಳಿದಿಲ್ಲ. ಗಾಳಿಗೆ ಅಧಿದೇವತೆಯಾಗಿ ವಾಯು, ನೀರಿಗೆ ಗಂಗಾ ಮಾತೆಯ ಹೆಸರಲ್ಲಿ ಪೂಜಿಸುತ್ತೇವೆ. ದೇವಾನು ದೇವತೆಗಳಿಗೆ ಪ್ರಕೃತಿ ಹೆಸರಿಟ್ಟು ಪೂಜಿಸುವವರು ನಾವು. ಇಂದ್ರ ಕೂಡ ಪ್ರಾಕೃತಿಕ ದೇವರು ಎಂದು ಸಿ.ಟಿ.ರವಿ ತಿಳಿಸಿದ್ದಾರೆ. ಅಲ್ಲದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರೇ, ಯಾವ ಥಿಯರಿಯಲ್ಲಿ ಸಂಘರ್ಷ ಇದೆ?
ರಾಮ ಸಂಕಷ್ಟದಲ್ಲಿದ್ದಾಗ, ರಾವಣನ ಜೊತೆ ಯುದ್ದ ಮಾಡುವಾಗ ಶಿವನ ಪೂಜೆ ಮಾಡ್ತಾನೆ. ರಾಮೇಶ್ವರ ಇದೆ ಅಲ್ಲಿ ಲಿಂಗ ಇದೆ. ರಾಮೇಶ್ವರದಲ್ಲಿ ಪೂಜೆ ಮಾಡ್ತೀವಿ. ಗೋಕರ್ಣದಲ್ಲಿ ಪ್ರತಿಷ್ಠಾಪನೆ ಮಾಡ್ತಾರೆ, ಅದು ಗಣೇಶ ಮೂರು ಬಾರಿ ಎಣಿಸಿ ನೆಲಕ್ಕೆ ಇಡ್ತಾನೆ ಅದೇ ಗೋಕರ್ಣ. ಇಲ್ಲೆಲ್ಲೂ ಇಂದ್ರ ಮತ್ತು ಶಿವ, ಇಂದ್ರ ಮತ್ತು ರಾಮನ ಸಂಘರ್ಷ ಇಲ್ಲ. ಸಿದ್ದರಾಮಯ್ಯನವರೇ, ಯಾವ ಥಿಯರಿಯಲ್ಲಿ ಸಂಘರ್ಷ ಇದೆ? ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಅದೊಂದು ಸುಳ್ಳು ಥಿಯರಿ
ಸಿದ್ದರಾಮಯ್ಯ ಅವರೇ Who Were the Shudras? ಅನ್ನೋ ಅಂಬೇಡ್ಕರ್ ಅವರ ಪುಸ್ತಕ ಓದಿ. ಅವರು ಅನೇಕ ಪುಸ್ತಕ ಓದಿ ಅರ್ಥೈಸಿಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲಿ ರಾಷ್ಟ್ರದ ಹಿತಕ್ಕೆ ಮಾರಕ ಆಗುವ ನಿರ್ಣಯ ಕೈಗೊಳ್ಳಲಿಲ್ಲ. ವೈಯಕ್ತಿಕ ಹಿತಾಸಕ್ತಿ ಬಿಟ್ಟುಕೊಟ್ರು. 1837ರಲ್ಲಿ ಮೈಕಲ್ ಬ್ಯಾಪಿಸ್ಟ್ ಅನ್ನುವ ಚರ್ಚ್ ಪಾದ್ರಿ ಹುಟ್ಟಿಹಾಕಿದ ಫಾಲ್ಸ್ ಥಿಯರಿ ಬಗ್ಗೆ ಪುಸ್ತಕದಲ್ಲಿ ಉತ್ತರ ನೀಡಿದ್ದಾರೆ. ನಾನು ಅಂಬೇಡ್ಕರ್ ಅವರಿಗಿಂತ ಬುದ್ದಿವಂತ ಅಂತ ಭಾವಿಸಿದ್ರೆ, ಆಗ ಯಾರು ಬುದ್ದಿವಂತ? ಯಾರು ಮೂರ್ಖ ಅಂತ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Bengaluru Traffic Diversions: ಬೆಂಗಳೂರು ಟ್ರಾಫಿಕ್ನಿಂದ ಪಾರಾಗಿ, ಸಲೀಸಾಗಿ ಹೀಗೆ ಮನೆ, ಆಫೀಸ್ ಸೇರಿ!
ರಾಹುಲ್ ಗಾಂಧಿ ಕೌಲ ಬ್ರಾಹ್ಮಣ ಅಲ್ಲ
ಅಂಬೇಡ್ಕರ್ ಅವರೇ ಫಾಲ್ಸ್ ಥಿಯರಿ ಅಂತ ಹೇಳಿದ್ದಾರೆ. ಉತ್ತರದಿಂದ ದಕ್ಷಿಣದ ವರೆಗೂ ಎಲ್ಲರ DNA ಒಂದೇ ಇದೆ. ಇದರ ಮೇಲೆ ವರ್ಣಾಶ್ರಮ ಅಂತ ಭಾವಿಸಿ ಆರ್ಯ, ದ್ರಾವಿಡ ಅಂತ ವರ್ಗೀಕರಿಸಿದ್ದೀರಿ. ನಿಮ್ಮ ನಾಯಕರನ್ನ ಕೌಲ ಬ್ರಾಹ್ಮಣ ಅಂತ ಕರೆದಿದ್ದೀರಿ. ರಾಹುಲ್ ಗಾಂಧಿ ನಾನು ಕೌಲ ಬ್ರಾಹ್ಮಣ ಅಂತ ಹೇಳಿದ್ದಾರೆ. ಅದೊಂದು ಸುಳ್ಳು.
ಇದನ್ನೂ ಓದಿ: Bidar To Bengaluru: ಬೀದರ್ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!
ಸಿದ್ದರಾಮಯ್ಯ ಯಾರ ಗುಲಾಮ?
ನಮ್ಮ ಪ್ರಕಾರ ಇಂದಿರಾ ಗಾಂಧಿಯವರನ್ನು ಪಾರ್ಸಿ ಸಮುದಾಯದವರನ್ನು ಮದುವೆಯಾಗಿದ್ದರು. ಒಂದು ವೇಳೆ ಕೌಲ ಬ್ರಾಹ್ಮಣ ಅನ್ನೋದು ಸರಿಯಾಗಿದ್ರೆ, ಸಿದ್ದರಾಮಯ್ಯ ಯಾರ ಗುಲಾಮರಾಗಿದ್ದಾರೆ? ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಸಿ.ಟಿ.ರವಿ ಟೀಕೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ